ETV Bharat / bharat

ಕೋಲ್ಕತ್ತಾದ ಹಸಿರಿಗೆ ಹಾನಿ: ರೆಮಾಲ್ ಹೊಡೆತಕ್ಕೆ ನೆಲಕ್ಕುರುಳಿದ 400 ಮರಗಳು - REMAL CYCLONE EFFECT

author img

By ETV Bharat Karnataka Team

Published : May 28, 2024, 8:11 PM IST

Updated : May 28, 2024, 8:26 PM IST

ರೆಮಲ್ ಚಂಡಮಾರುತದಿಂದ ಕೋಲ್ಕತ್ತಾ ನಗರದಲ್ಲಿ ಸುಮಾರು 400 ಮರಗಳು ಬುಡ ಸಮೇತ ಧರೆಗುರುಳಿವೆ. ಇದರಿಂದಾಗಿ ಪರಿಸರವಾದಿಗಳು ಆತಂಕಕ್ಕೊಳಗಾಗಿದ್ದು, ಮತ್ತೆ ಮರಗಳನ್ನು ನೆಡಬೇಕು ಎಂದು ಒತ್ತಾಯಿಸಿದ್ದಾರೆ.

ಕೋಲ್ಕತ್ತಾದ ಹಸಿರಿಗೆ ಹಾನಿ
ಕೋಲ್ಕತ್ತಾದ ಹಸಿರಿಗೆ ಹಾನಿ (ETV Bharat)

ಕೋಲ್ಕತ್ತಾ (ಪಶ್ಚಿಮ ಬಂಗಾಳ): ರೆಮಲ್ ಚಂಡಮಾರುತವು ರಾಜ್ಯಾದ್ಯಂತ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಮತ್ತೊಂದೆಡೆ, ನಗರದಲ್ಲಿ ಸುಮಾರು 400 ಮರಗಳು ಬುಡ ಸಮೇತ ಧರೆಗುರುಳಿವೆ. ಹೀಗಾಗಿ ಅದೇ ಜಾಗದಲ್ಲಿ ಮತ್ತೆ ಮರಗಳನ್ನು ನೆಡುವಂತೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ. ಸೋಮವಾರ ರಾತ್ರಿವರೆಗೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್​ನ (ಕೆಎಂಸಿ) ತೋಟಗಾರಿಕಾ ಇಲಾಖೆಯ ಸಿಬ್ಬಂದಿ ವಿವಿಧ ಪ್ರದೇಶಗಳ ರಸ್ತೆಯ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲು ಹೆಚ್ಚುವರಿ ಅವಧಿಯವರೆಗೆ ಕೆಲಸ ಮಾಡಿದರು.

ಕೆಎಂಸಿ ಪ್ರಕಾರ, ಚಂಡಮಾರುತ ಅಪ್ಪಳಿಸಿದ ನಂತರ 20 ಮರಗಳು ಧರೆಗುರುಳಿವೆ ಮತ್ತು ರೆಮಲ್ ಅಪ್ಪಳಿಸುವ ಹಿಂದಿನ ದಿನ 12 ಮರಗಳು ಭಾರಿ ಗಾಳಿಯಿಂದ ಉರುಳಿ ಬಿದ್ದಿವೆ. ರೆಮಲ್ ಅಪ್ಪಳಿಸಿದ ನಂತರ 300 ಕ್ಕೂ ಹೆಚ್ಚು ದೊಡ್ಡ ಮರಗಳನ್ನು ನೆಲಸಮವಾಗಿವೆ. 100ಕ್ಕೂ ಹೆಚ್ಚು ದೊಡ್ಡ ಮರಗಳ ಕೊಂಬೆಗಳು ಮುರಿದು ಬಿದ್ದಿವೆ ಎಂದು ತಿಳಿಸಿದೆ. ಮತ್ತೊಂದೆಡೆ, ಇದರಿಂದಾಗಿ ಪರಿಸರ ವಿಜ್ಞಾನಿಗಳು ಮತ್ತು ಪರಿಸರ ಚಳವಳಿಯ ಕಾರ್ಯಕರ್ತರು ಆತಂಕಕ್ಕೊಳಗಾಗಿದ್ದಾರೆ.

ಕೋಲ್ಕತ್ತಾದ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಪರಿಸರವನ್ನು ರಕ್ಷಿಸಲು, ರಸ್ತೆಗಳನ್ನು ಸ್ವಚ್ಛವಾಗಿಡಲು ಮತ್ತು ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಶೇಕಡಾ ಒಂದು ರಷ್ಟು ಸಹ ನಡೆಯುತ್ತಿಲ್ಲ ಎಂದು ಪರಿಸರವಾದಿಗಳು ದೂರಿದ್ದಾರೆ. ಪರಿಸರ ಹೋರಾಟಗಾರ ಸೋಮೇಂದ್ರ ಮೋಹನ್ ಘೋಷ್ ಪ್ರತಿಕ್ರಿಯಿಸಿ, ಅನೇಕ ಮರಗಳು ಧರೆಗುರುಳಿವೆ. ಅವುಗಳನ್ನು ಸೂಕ್ತ ಸ್ಥಳಗಳಲ್ಲಿ ಏಕೆ ನೆಡುತ್ತಿಲ್ಲ?. ಹಲವು ವರ್ಷಗಳ ಹಿರಿಯ ಮರಗಳನ್ನು ಕಡಿಯಲಾಗುತ್ತಿದೆ. ಈ ಬಗ್ಗೆ ಕೋಲ್ಕತ್ತಾ ಪಾಲಿಕೆ ಯೋಚಿಸಬೇಕು. ಇಲ್ಲದಿದ್ದರೆ ಪರಿಸರಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋಲ್ಕತ್ತಾ ಮುನ್ಸಿಪಲ್​ ಕಾರ್ಪೊರೇಷನ್​ ಅಧಿಕಾರಿಯೊಬ್ಬರು ಮಾತನಾಡಿ, ಚಂಡಮಾರುತ ಮತ್ತು ಮಳೆ ನೀರಿನಿಂದ ಧರೆಗುರುಳಿದ ಮರಗಳ ಪ್ರಮಾಣದಷ್ಟು ಮರಗಳನ್ನು ಮತ್ತೆ ನೆಡಲು ಸಾಧ್ಯವಿಲ್ಲ, ಏಕೆಂದರೆ ಹಾಗೆ ಮಾಡಲು ಸೂಕ್ತ ಸ್ಥಳ ಬೇಕು. ಮಣ್ಣಿಗೆ ಆ ಸಾಮರ್ಥ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ನಾವು ಏನು ಸಾಧ್ಯವೋ ಅದನ್ನು ಮಾಡುತ್ತೇವೆ. ರವೀಂದ್ರ ಸರೋವರದ ಲೇಕ್ ಅವೆನ್ಯೂದಲ್ಲಿ ಅನೇಕ ಮರಗಳು ಬುಡಮೇಲಾಗಿವೆ ಎಂದು ತಿಳಿಸಿದರು.

ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಅಂಕಿಅಂಶಗಳ ಪ್ರಕಾರ, ರೆಮಲ್ ಚಂಡಮಾರುತದಿಂದ 294 ಮರಗಳು ಧರೆಗುರುಳಿವೆ. ದೇಬಾಶಿಶ್ ಕುಮಾರ್ ಮಾತನಾಡಿ, 300ಕ್ಕೂ ಹೆಚ್ಚು ಮರಗಳನ್ನು ಧರೆಗುರುಳಿವೆ. ಇದರಿಂದ ನಾವು ಸುಮಾರು 1500 ಮರಗಳನ್ನು ನೆಡಲು ಯೋಜಿಸಿದ್ದೇವೆ" ಎಂದು ಕುಮಾರ್ ಈಟಿವಿ ಭಾರತ್‌ಗೆ ತಿಳಿಸಿದರು.

ಇದನ್ನೂ ಓದಿ: ಮಿಜೋರಾಂ: ಭಾರೀ ಮಳೆಯಿಂದ ಕಲ್ಲು ಕ್ವಾರಿ ಕುಸಿದು 12 ಮಂದಿ ಸಾವು, ಹಲವರು ನಾಪತ್ತೆ - Stone quarry collapsed

Last Updated : May 28, 2024, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.