ಹೈದರಾಬಾದ್: ವಿಶ್ವ ಮಾನವೀಯ ದಿನವನ್ನು ಆಗಸ್ಟ್ 19ರಂದು ಆಚರಿಸಲಾಗುತ್ತದೆ. 2003ರಲ್ಲಿ ಇರಾಕ್‌ನ ಬಾಗ್ದಾದ್ನಲ್ಲಿನ ಕ್ಯಾನಲ್ ಹೋಟೆಲ್ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ 22 ಮಾನವೀಯ ಕಾರ್ಯಕರ್ತರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಇರಾಕ್‌ನ ಪ್ರಧಾನ ಕಾರ್ಯದರ್ಶಿ ಸೆರ್ಗಿಯೊ ವಿಯೇರಾ ಡೆ ಮೆಲ್ಲೊ ಕೂಡ ಅಸುನೀಗಿದ್ದರು. ಐದು ವರ್ಷದ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಮಾನವೀಯತೆ ದಿನಾಚರಣೆಗೆ ನಿರ್ಣಯ ಕೈಗೊಳ್ಳಲಾಯಿತು.
ಧ್ಯೇಯ: ಈ ವರ್ಷದ ಧ್ಯೇಯ 'ಮಾನವೀಯತೆಗೆ ಕಾರ್ಯ ನಿರ್ವಹಿಸಿ' ಎಂಬುದಾಗಿದೆ.
ಉದ್ದೇಶ: ಮನುಕುಲದ ಸೇವೆಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಕಾರ್ಯನಿರ್ವಹಿಸುವ ನಿಸ್ವಾರ್ಥ ಕಾರ್ಯವನ್ನು ಗುಣಗಾನ ಮಾಡಲಾಗುತ್ತದೆ. ಮಾನವೀಯತೆಗಾಗಿ ಜನರು ಯಾವುದೇ ಉದ್ದೇಶವಿಲ್ಲದೇ ತಮ್ಮ ಜೀವನವನ್ನು ಉತ್ತಮಗೊಳಿಸಲು ಕಾರ್ಯ ನಿರ್ವಹಿಸುತ್ತಾರೆ. ಮಾನವತಾವಾದಿಗಳ ಗೌರವಯುತ ಕೆಲಸವನ್ನು ಸಂಭ್ರಮವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಪ್ರಕಾರ, ಜನರ ಜೀವನ ಉಳಿಸಲು ಮತ್ತು ರಕ್ಷಿಸಲು ಮಾನವತಾವಾದಿಗಳು ಒಟ್ಟುಗೂಡುತ್ತಾರೆ.
ಕೋವಿಡ್ ಸಮಯದಲ್ಲಿ ಮಾನವೀಯತೆ: ಮಾನವೀಯತೆಗೆ ಇರುವ ಇತ್ತೀಚಿನ ಅತ್ಯುತ್ತಮ ಉದಾಹರಣೆ ಇದು. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವನವನ್ನು ಲೆಕ್ಕಿಸದೆ ಜನರ ಜೀವನ ಉಳಿಸಲು ಕೆಲವು ವಿಶೇಷ ವ್ಯಕ್ತಿಗಳು ಹೋರಾಡಿದರು. ಇದರಲ್ಲಿ ವೈದ್ಯರು, ನರ್ಸ್ ಮತ್ತು ಕೆಲವು ಅದ್ಭುತ ವ್ಯಕ್ತಿಗಳು ಸೇರಿದ್ದರು. ಇವರೆಲ್ಲ ತಮಗೆ ಸಾಧ್ಯವಾದ ಮಾರ್ಗದಲ್ಲಿ ಸಂತ್ರಸ್ತರ ಸಹಾಯಕ್ಕೆ ನಿಂತರು.
ಮನುಷ್ಯರಲ್ಲಿ ಈ ರೀತಿಯ ಗುಣ ಯಾವಾಗ ಮತ್ತು ಎಲ್ಲಿ ತಕ್ಷಣಕ್ಕೆ ಬರುತ್ತದೆ ಎಂಬುದು ತಿಳಿದಿಲ್ಲ. ನಮ್ಮ ನಿಯಂತ್ರಣ ಮೀರಿದಾಗ ನಡೆಯುವ ಏಕೈಕ ಕೆಲಸವೆಂದರೆ ಅದು ಮಾನವೀಯತೆ. ಮಾನವೀಯತೆ ತೋರುವ ಮನಸ್ಸು ಮನುಷ್ಯರಿಗೆ ಮಾತ್ರವಲ್ಲದೇ ತೊಂದರೆಯಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳಿಗಾಗಿ ಮಿಡಿಯುತ್ತದೆ. ಇಂತಹ ಕೆಲಸಗಳು ಜೀವನದ ಅತ್ಯಮೂಲ್ಯ ಖುಷಿಗೆ ಕಾರಣವಾಗುತ್ತದೆ.
ಆರೋಗ್ಯ ಕಾರ್ಯಕರ್ತರ ಸೇವೆ: ಆರೋಗ್ಯ ಕಾರ್ಯಕರ್ತರು ಅಪಾಯ ಮತ್ತು ಸವಾಲಿನ ಸಮಯದಲ್ಲಿ ಆಪತ್ಭಾಂಧವರಾಗುತ್ತಾರೆ. ಅದು ನೈಸರ್ಗಿಕ ವಿಕೋಪವಿರಲಿ ಅಥವಾ ಸಂಘರ್ಷ, ರೋಗದ ಉಲ್ಬಣ ಅಥವಾ ಕಳಪೆ ಸಂಪನ್ಮೂಲವಿರಲಿ ಅವರು ಬೇರೆಯವರ ಒಳಿತಿಗೆ ಕಾರ್ಯ ನಿರ್ವಹಿಸುತ್ತಾರೆ.
ಸಹಾಯಕರ ಮೇಲಿನ ದಾಳಿ: 21 ವರ್ಷದ ಹಿಂದೆ ಬಾಗ್ದಾದ್‌ನ ಕ್ಯಾನಲ್ ಹೋಟೆಲ್ನಲ್ಲಿ ಬಾಂಬ್ ದಾಳಿಯಾದಾಗ 22 ಜನ ಸಹಾಯಕರು ಸಾವನ್ನಪ್ಪಿದ್ದು, ನೂರಾರು ಜನರ ಗಾಯಗೊಂಡಿದ್ದರು. ಈ ದುರಂತವೂ ಮಾನವೀಯತೆ ಕಾರ್ಯಾಚರಣೆ ಹಾದಿಯನ್ನು ಬದಲಾಯಿಸಿತು. ಕಳೆದ ವರ್ಷ ಕೂಡ ಈ ರೀತಿ ಸಹಾಯಕ ಕಾರ್ಯಕರ್ತರ ಮೇಲೆ ದಾಳಿ ನಡೆಯಿತು. 2023ರಲ್ಲಿ ಸಹಾಯಕ ಕಾರ್ಯಕರ್ತರ ಭದ್ರತೆ ದತ್ತಾಂಶ ಪ್ರಕಾರ, ಸರಿಸುಮಾರು 600 ಮಾನವೀಯ ಕಾರ್ಯಕರ್ತರು ಹಿಂಸಾತ್ಮಕ ದಾಳಿ, ಅಪಹರಣ, ದೌರ್ಜನ್ಯ, ಬೆದರಿಕೆ ಸೇರಿದಂತೆ ದಾಳಿ ಎದುರಿಸಿದ್ದಾರೆ. 280 ಮಂದಿ ಕೆಲಸದ ವೇಳೆ ಸಾವನ್ನಪ್ಪಿದರು.
ವಿಶ್ವಸಂಸ್ಥೆಯ ಪ್ರಕಾರ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಹಿಂಸಾಚಾರದ ಜಾಗತಿಕ ಬೆದರಿಕೆಗಳ ನಡುವೆ ಮಾನವೀಯ ಕಾರ್ಯಕರ್ತರ ಕೆಲಸವು ಬಹಳ ಮುಖ್ಯವಾಗಿದೆ. ಸಿರಿಯಾದಿಂದ ದಕ್ಷಿಣ ಸುಡಾನ್‌ವರೆಗೆ ಮತ್ತು ಮಾಲ್ಡೀವ್ಸ್‌ನಿಂದ ಆಫ್ರಿಕಾದ ಬರಪೀಡಿತ ಪ್ರದೇಶಗಳವರೆಗೆ ಮಾನವೀಯ ಕಾರ್ಯಕರ್ತರ ಕೆಲಸ ಮುಖ್ಯವಾಗಿದೆ. ಭಯೋತ್ಪಾದನೆ ಮತ್ತು ಹಿಂಸಾಚಾರದ ಬಿಕ್ಕಟ್ಟಿನ ನಡುವೆ, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಆಹಾರ, ನೀರು, ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ದಿನನಿತ್ಯ ಹೋರಾಡುತ್ತಿದ್ದಾರೆ. ಇವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ವಿಶ್ವ ಮಾನವೀಯ ದಿನದ ಕೆಲಸ ಮುಖ್ಯವಾಗಿದೆ.
ಇದನ್ನೂ ಓದಿ: ಇಂದು ವಿಶ್ವ ಫೋಟೋಗ್ರಫಿ ದಿನ: ಕಲೆ, ವಿಜ್ಞಾನದ ಸಂಯೋಜನೆಯೇ ಛಾಯಾಚಿತ್ರ