ETV Bharat / bharat

ವಿಶ್ವ ಪರಿಸರ ಆರೋಗ್ಯ ದಿನ: ಭವಿಷ್ಯದ ಪೀಳಿಗೆಗೆ ಆರೋಗ್ಯಕರ, ಸುಸ್ಥಿರ ಗ್ರಹ ಉಳಿಸಿಕೊಳ್ಳುವ ಪ್ರಯತ್ನ! - World Environmental Health Day

author img

By ETV Bharat Karnataka Team

Published : 22 hours ago

ನಮ್ಮ ಪರಿಸರದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ 2011ರಲ್ಲಿ ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಈ ಆಚರಣೆಯ ದಿನ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಮತ್ತು ಹೆಚ್ಚು ಸಮರ್ಥನೀಯ ಗ್ರಹವನ್ನು ಉಳಿಸಿಕೊಳ್ಳುವುದೇ ದಿನದ ಪ್ರಮುಖ ಉದ್ದೇಶವಾಗಿದೆ.

World Environmental Health Day
ವಿಶ್ವ ಪರಿಸರ ಆರೋಗ್ಯ ದಿನ: ಭವಿಷ್ಯದ ಪೀಳಿಗೆಗೆ ಆರೋಗ್ಯಕರ, ಸುಸ್ಥಿರ ಗ್ರಹ ಉಳಿಸಿಕೊಳ್ಳುವ ಪ್ರಯತ್ನ (IANS)

ಹೈದರಾಬಾದ್: ವಿಶ್ವ ಪರಿಸರ ಆರೋಗ್ಯ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 26 ರಂದು ಆಚರಿಸಲಾಗುತ್ತದೆ. ಮಾನವನ ಆರೋಗ್ಯ ಮತ್ತು ಪರಿಸರದ ನಡುವಿನ ನಿರ್ಣಾಯಕ ಸಂಬಂಧದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಈ ದಿನವನ್ನ ಸಮರ್ಪಿಸಲಾಗಿದೆ. ಜನರ ಯೋಗಕ್ಷೇಮವು ಅತ್ಯಂತ ಮುಖ್ಯ ಹಾಗೂ ಪರಿಸರವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಏನಾಗುತ್ತದೆ ಎಂಬುದನ್ನು ತಿಳಿಸುವುದೇ ಈ ದಿನದ ಪ್ರಮುಖ ಗುರಿ ಮತ್ತು ಉದ್ದೇಶವಾಗಿದೆ.

ವಾಯು ಮತ್ತು ನೀರಿನ ಮಾಲಿನ್ಯ, ಅಪಾಯಕಾರಿ ತ್ಯಾಜ್ಯ ನಿರ್ವಹಣೆ, ಶುದ್ಧ ಮತ್ತು ಸುರಕ್ಷಿತ ಆಹಾರದ ಪ್ರವೇಶ ಮತ್ತು ಹವಾಮಾನ ಬದಲಾವಣೆಯಂತಹ ಪರಿಸರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದೇ ಈ ದಿನದ ಅತ್ಯಂತ ಮುಖ್ಯ ಕೆಲಸವಾಗಿದೆ. ಆರೋಗ್ಯಯುತ ಪರಿಸರ ರಕ್ಷಣೆಗೆ ಕೈಗೊಳ್ಳುವ ಪೂರ್ವಭಾವಿ ಕ್ರಮಗಳ ಪ್ರಾಮುಖ್ಯತೆಯನ್ನು ಈ ದಿನವು ಎತ್ತಿ ತೋರಿಸುತ್ತದೆ. ವಿಶ್ವಾದ್ಯಂತ ಸರ್ಕಾರಗಳು, ಸಂಸ್ಥೆಗಳು ಮತ್ತು ಸಮುದಾಯಗಳಿಗೆ ಪರಿಸರ ಮತ್ತು ಮಾನವ ಆರೋಗ್ಯ ಕಾಪಾಡುವ ಮತ್ತು ಎರಡನ್ನೂ ಹೆಚ್ಚಿಸುವ ಸಮರ್ಥನೀಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಮಾಡುವುದು ಈ ದಿನದ ಮಹತ್ವವಾಗಿದೆ.

ವಿಶ್ವ ಪರಿಸರ ಆರೋಗ್ಯ ದಿನವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಆರೋಗ್ಯಕರ, ಹೆಚ್ಚು ಸಮರ್ಥನೀಯ ಗ್ರಹವನ್ನು ಉಳಿಸಿಕೊಳ್ಳುವ ಕಡೆಗೆ ಕ್ರಮಗಳನ್ನು ತೆಗೆದುಕೊಳ್ಳಲು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕ ಪರಿಸರದ ಸಮಸ್ಯೆಗಳು ಪ್ರತಿ ವರ್ಷ 12.6 ದಶಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. ಅಂಕಿ- ಅಂಶಗಳ ಪ್ರಕಾರ, 100ಕ್ಕೂ ಹೆಚ್ಚು ಕಾಯಿಲೆಗಳು ಮತ್ತು ಗಾಯಗಳು ನೇರವಾಗಿ ಪರಿಸರ ಆರೋಗ್ಯದ ಕಾಳಜಿಗೆ ಸಂಬಂಧಿಸಿವೆ. ಆಗಾಗ್ಗೆ, ಈ ಸಮಸ್ಯೆಗಳು ಹೆಚ್ಚಿನ ಪರಿಣಾಮವನ್ನು ಬೀರುತ್ತವೆ. ಬಡ ಸಮುದಾಯಗಳು ಮತ್ತು ಈಗಾಗಲೇ ಗಮನಾರ್ಹವಾದ ಆರೋಗ್ಯ ರಕ್ಷಣೆಯ ಸಮಸ್ಯೆಗಳಿಂದ ಬಳಲುತ್ತಿವೆ.

ಇತಿಹಾಸ: ನಮ್ಮ ಪರಿಸರದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಾಗೂ ಅದರ ಪ್ರಾಮುಖ್ಯತೆಯನ್ನು ವಿಶ್ವಕ್ಕೆ ಅರಿವು ಮೂಡಿಸುವ ಸಲುವಾಗಿ 2011 ರಲ್ಲಿ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಎನ್ವಿರಾನ್ಮೆಂಟಲ್ ಹೆಲ್ತ್ (IFEH) ನಿಂದ ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಣೆ ಮಾಡಲು ಪ್ರಾರಂಭಿಸಿತು.

ವಿಷಯ ವಸ್ತು ಏನು?: ವಿಪತ್ತು ಅಪಾಯವನ್ನು ಕಡಿತ ಮಾಡುವುದು ಮತ್ತು ಹವಾಮಾನ ಬದಲಾವಣೆಯಿಂದಾಗುವ ಅಪಾಯವನ್ನು ತಗ್ಗಿಸುವಿಕೆ ಮತ್ತು ಹೊಂದಾಣಿಕೆಯ ಮೂಲಕ ಸ್ಥಿತಿಸ್ಥಾಪಕ ಸಮುದಾಯಗಳನ್ನು ರೂಪಿಸುವುದು ಈ ದಿನದ ಪ್ರಮುಖ ಕಾರ್ಯಸೂಚಿಯಾಗಿದೆ.

2021 ರಲ್ಲಿ ಜಾಗತಿಕವಾಗಿ 8.1 ಮಿಲಿಯನ್ ಸಾವುಗಳಿಗೆ ಕಾರಣವಾದ ವಾಯು ಮಾಲಿನ್ಯ: ಜೂನ್ 19, 2024 ರಂದು, ಹೆಲ್ತ್ ಎಫೆಕ್ಟ್ಸ್ ಇನ್ಸ್ಟಿಟ್ಯೂಟ್ (HEI) ಹಾಗೂ ಅಮೆರಿಕದ ಸ್ವತಂತ್ರ ಸಂಶೋಧನಾ ಸಂಸ್ಥೆಯೊಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ, 2021 ರಲ್ಲಿ ವಾಯು ಮಾಲಿನ್ಯದಿಂದ ಜಾಗತಿಕವಾಗಿ 8.1 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆ. ಜನರು ದೀರ್ಘಕಾಲದ ಕಾಯಿಲೆಗಳೊಂದಿಗೆ ಬದುಕುತ್ತಿದ್ದಾರೆ, ಆರೋಗ್ಯ ವ್ಯವಸ್ಥೆಗಳು, ಆರ್ಥಿಕತೆಗಳು ಮತ್ತು ಸಮಾಜಗಳ ಮೇಲೆ ಇದು ಭಾರಿ ಒತ್ತಡವನ್ನು ಸೃಷ್ಟಿಸುತ್ತಿದೆ ಎಂಬ ಆಘಾತಕಾರಿ ವಿಚಾರ ಬಹಿರಂಗ ಪಡಿಸಿದೆ.

ಪರಿಸರ-ಸಂಬಂಧಿತ ಸಾವುಗಳಿಗೆ ಪ್ರಮುಖ ಕಾರಣಗಳು: 100ಕ್ಕೂ ಹೆಚ್ಚು ರೋಗ ಮತ್ತು ಗಾಯದ ವಿಭಾಗಗಳನ್ನು ನೋಡಿದಾಗ, ಪರಿಸರ-ಸಂಬಂಧಿತ ಸಾವುಗಳಲ್ಲಿ ಹೆಚ್ಚಿನವು ಹೃದಯರಕ್ತನಾಳದ ಕಾಯಿಲೆಗಳಾದ ಪಾರ್ಶ್ವವಾಯು ಮತ್ತು ರಕ್ತಕೊರತೆಯ ಹೃದ್ರೋಗದ ಕಾರಣದಿಂದಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

  • ಪಾರ್ಶವಾಯು - ವಾರ್ಷಿಕವಾಗಿ 25 ಲಕ್ಷ ಜನರ ಸಾವು
  • ಹೃದ್ರೋಗ - ವಾರ್ಷಿಕವಾಗಿ 23 ಲಕ್ಷ ಸಾವುಗಳು
  • ಉದ್ದೇಶಪೂರ್ವಕವಲ್ಲದ ಗಾಯಗಳು: ವಾರ್ಷಿಕವಾಗಿ 17 ಲಕ್ಷ ಸಾವುಗಳು
  • ಕ್ಯಾನ್ಸರ್ - ವಾರ್ಷಿಕವಾಗಿ 17 ಲಕ್ಷ ಸಾವುಗಳು
  • ದೀರ್ಘಕಾಲದ ಉಸಿರಾಟದ ಕಾಯಿಲೆಗಳು - ವಾರ್ಷಿಕವಾಗಿ 14 ಲಕ್ಷ ಸಾವುಗಳು
  • ಅತಿಸಾರ - ವಾರ್ಷಿಕವಾಗಿ 8,46, 000 ಸಾವುಗಳು
  • ಉಸಿರಾಟದ ಸೋಂಕುಗಳು - ವಾರ್ಷಿಕವಾಗಿ 5,67, 000 ಸಾವುಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.