ಚೆನ್ನೈ, ತಮಿಳುನಾಡು: ಇಲ್ಲಿನ ತೋರೈಪಾಕ್ಕಂನ ಮೆಟ್ಟುಕುಪ್ಪಂ ಕುಮಾರನ್ ಕುಡಿಲ್ ಪ್ರದೇಶದ ರಸ್ತೆಯಲ್ಲಿ ಇಂದು ಬೆಳಗ್ಗೆ ರಸ್ತೆಯಲ್ಲಿ ಬಿದ್ದಿದ್ದ ಸೂಟ್‌ಕೇಸ್‌ನಿಂದ ದುರ್ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಆ ಪ್ರದೇಶದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ, ಸ್ಥಳಕ್ಕೆ ಬಂದ ಪೊಲೀಸರು, ಸೂಟ್ಕೇಸ್ ತೆರೆದು ನೋಡಿದ್ದಾರೆ.
ಈ ವೇಳೆ ಅದರಲ್ಲಿದ್ದ ದೃಶ್ಯ ಕಂಡು ಹೌಹಾರಿದ್ದಾರೆ. ಅಷ್ಟೇ ಅಲ್ಲ ಅಲ್ಲಿನ ಚಿತ್ರಣ ಕಂಡು ಬೆಚ್ಚಿಬಿದ್ದಿದ್ದಾರೆ. ಕಾರಣ ಇಷ್ಟೇ ಸೂಟ್ಕೇಸ್ನಲ್ಲಿದ್ದದ್ದು, ಮಹಿಳೆಯೊಬ್ಬರ ತುಂಡು ತುಂಡಾಗಿದ್ದ ದೇಹ. ಮೃತ ಮಹಿಳೆಯ ದೇಹವನ್ನು ಕಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಈ ವೇಳೆ ಕುಮಾರನ್ ಕುಡಿಲ್ನ ಸುತ್ತ ಮುತ್ತ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಬಂದು ಸೂಟ್ಕೇಸ್ ಇಟ್ಟು ಹೋಗಿರುವುದು ಕಂಡು ಬಂದಿದೆ. ಇದರ ಆಧಾರದ ಮೇಲೆ ತನಿಖೆ ನಡೆಸಿ ಮಣಿಕಂಡನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೂಟ್ಕೇಸ್ ಬಿಟ್ಟು ಹೋದ ಸ್ಥಳದಲ್ಲಿಯೇ ಈತ ವಾಸಿಸುತ್ತಿದ್ದ ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ಏನಿದು ಘಟನೆ- ಯಾರಿದು ಮಹಿಳೆ?: ಪೊಲೀಸರ ಪ್ರಕಾರ, ಸಾವನ್ನಪ್ಪಿದ ಮಹಿಳೆ ಹೆಸರು ದೀಪಾ. ಈಕೆ ಮಂಡವರಣ ಪ್ರದೇಶದಿಂದ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಳು. ಇದೀಗ ಕೊಲೆಯಾಗಿದ್ದು, ಆಕೆಯ ಮೃತ ದೇಹವನ್ನು ತುಂಡರಿಸಿ ಸೂಟ್ಕೇಸ್ನಲ್ಲಿ ಇಡಲಾಗಿದೆ.
ಇದೀಗ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಮಣಿಕಂಡನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಯಾಕೆ ಕೊಲೆ ಮಾಡಲಾಯಿತು. ಇದರ ಹಿಂದಿನ ಉದ್ದೇಶ ಏನು ಎಂಬ ಕುರಿತು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರಂತೆ ವೇಷ ತೊಟ್ಟು ಮನೆಗೆ ಕನ್ನ ಹಾಕುತ್ತಿದ್ದ ತಂಡದ ಬಂಧನ: 600 ಗ್ರಾಂ ಬಂಗಾರ ವಶಕ್ಕೆ