ETV Bharat / bharat

ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ; ಮನೆಯಲ್ಲೇ ಶವ ಹೂತು ಹಾಕಿದ ಮಹಿಳೆ - ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ತನ್ನ ಗಂಡನನ್ನು ಕೊಲೆ ಮಾಡಿ, ಮೃತದೇಹವನ್ನು ಮನೆಯಲ್ಲೇ ಹೂತು ಹಾಕಿರುವ ಘಟನೆ ಒಡಿಶಾದ ನಾಯಗಢ ಜಿಲ್ಲೆಯಲ್ಲಿ ನಡೆದಿದೆ.

woman-along-with-lover-kills-husband-buries-body-at-home-in-nayagarh-odisha
ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ - ಮನೆಯಲ್ಲೇ ಶವ ಹೂತಾಕಿದ ಮಹಿಳೆ
author img

By ETV Bharat Karnataka Team

Published : Feb 16, 2024, 4:12 PM IST

ನಾಯಗಢ(ಒಡಿಶಾ): ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಸ್ವಂತ ಗಂಡನನ್ನೇ ಕೊಲೆಗೈದು, ಮೃತದೇಹವನ್ನು ಮನೆಯಲ್ಲೇ ಹೂತು ಹಾಕಿದ ಘಟನೆ ಒಡಿಶಾದ ನಾಯಗಢ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದಿಂದಲೇ ಈ ದುಷ್ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕಾಶ್ ನಾಯಕ್​ ಎಂಬಾತ ಹತ್ಯೆಗೀಡಾದ ವ್ಯಕ್ತಿ. ಈತನ ಪತ್ನಿ ಜ್ಯೋತ್ನಾರಾಣಿ ಮತ್ತು ಪ್ರಿಯಕರ ಸೋನು ಸಮಾಲ್​ ಕೊಲೆ ಆರೋಪಿಗಳು. ಪ್ರಕಾಶ್ ಮತ್ತು ಜ್ಯೋತ್ನಾ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ, ಸೋನು ಜೊತೆಗೆ ಜ್ಯೋತ್ನಾ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಮಾಡಿ ನಾಪತ್ತೆ ನಾಟಕ: ಇಲ್ಲಿನ ಒಡಗಾಂವ್ ಪೊಲೀಸ್​ ಠಾಣಾ ವ್ಯಾಪ್ತಿಯ ಕೋಮಂಡಾ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಕೋಮಂಡಾ ಗ್ರಾಮವು ಜ್ಯೋತ್ನಾರಾಣಿ ತವರೂರು ಇಲ್ಲಿಯೇ ದಂಪತಿ ವಾಸವಾಗಿದ್ದರು. ಆದರೆ, ಅನೈತಿಕ ಸಂಬಂಧದ ಕಾರಣದಿಂದ ಪ್ರಕಾಶ್​ನನ್ನು ಕೊಲೆ ಮಾಡಲು ಪತ್ನಿ ನಿರ್ಧರಿಸಿದ್ದಳು.20 ದಿನಗಳ ಹಿಂದೆ ಪ್ರಿಯಕರನ ಜೊತೆಗೂಡಿ ಸಂಚು ರೂಪಿಸಿ ಮನೆಯಲ್ಲಿ ಈ ಕೊಲೆ ಮಾಡಲಾಗಿದೆ. ನಂತರ ಶವವನ್ನು ಹೊರಗಡೆ ಸಾಗಿಸದೇ ಮನೆಯಲ್ಲೇ ಹೂತು ಹಾಕಿದ್ದಾರೆ ಎಂದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ.

ಇತ್ತೀಚೆಗೆ ಪ್ರಕಾಶ್​ ಅವರ ತಂದೆ ಗೋಕುಲ್ ನಾಯಕ್​ ಯಾವುದೋ ಕೆಲಸದ ನಿಮಿತ್ತ ಬೀಗರ ಮನೆಗೆ ಹೋಗಿದ್ದರು. ಆಗ ಪ್ರಕಾಶ್ ಕಾಣೆಯಾಗಿದ್ದಾನೆ ಎಂದು ಸೊಸೆ ಜ್ಯೋತ್ನಾ ತನ್ನ ಮಾವನಿಗೆ ಸುಳ್ಳು ಹೇಳಿದ್ದಳು. ಇದರಿಂದ ಅನುಮಾನಗೊಂಡ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದಾಗ ಪ್ರಕಾಶ್ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಅಲ್ಲದೇ, ಗೋಕುಲ್ ನಾಯಕ್ ಬೀಗರ ಮನೆಗೆ ಹೋದಾಗ ಅಲ್ಲಿ ಭೂಮಿ ಅಗೆದು ಗುಡ್ಡೆ ಹಾಕಿರುವುದನ್ನೂ ಗಮನಿಸಿದ್ದರು. ಹೀಗಾಗಿ ಸಂಶಯಗೊಂಡ ಪೊಲೀಸರು ಮನೆಯಲ್ಲಿ ಮತ್ತೆ ಭೂಮಿ ಅಗೆದಿದ್ಧಾರೆ. ಈ ವೇಳೆ, ಪ್ರಕಾಶ್​​ನ ಮೃತದೇಹ ದೊರೆತಿದೆ. ಸದ್ಯ ಪ್ರಮುಖ ಆರೋಪಿಗಳಾದ ಜ್ಯೋತ್ನಾ ಮತ್ತು ಸೋನುನನ್ನು ಬಂಧಿಸಲಾಗಿದೆ. ಇಷ್ಟೇ ಅಲ್ಲ, ಈ ಕೊಲೆಯಲ್ಲಿ ಜ್ಯೋತ್ನಾ ತಾಯಿಯ ಕೈವಾಡ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ಆದ್ದರಿಂದ ಆಕೆಯನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮಾಟಮಂತ್ರದ ಶಂಕೆ: ಎಲ್ಲರೂ ನೋಡು ನೋಡುತ್ತಿದ್ದಂತೆ ತಾಯಿ ಮಗನ ಬರ್ಬರ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.