ETV Bharat / bharat

ಮಲಮಗ, ಆಪ್ತರಿಂದ ಅತ್ಯಾಚಾರ: ನಿವೃತ್ತ IAS ಅಧಿಕಾರಿಯ ಪತ್ನಿಯಿಂದ ಗಂಭೀರ ಆರೋಪ - Rape Case - RAPE CASE

ಜಮ್ಮು ಮತ್ತು ಕಾಶ್ಮೀರದ ಮನೆಯಲ್ಲಿ ನನ್ನ ಪತಿಯ ಮೊದಲ ಪತ್ನಿಯ ಮಗ ಹಾಗು ಆತನ ಆಪ್ತರು ಸೇರಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿಯ ಎರಡನೇ ಪತ್ನಿ ದೂರು ದಾಖಲಿಸಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jul 10, 2024, 10:37 AM IST

ಲಖನೌ(ಉತ್ತರ ಪ್ರದೇಶ): ಮಲಮಗ ಮತ್ತು ಆತನ ಆಪ್ತರು ಸೇರಿಕೊಂಡು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪತ್ನಿ ಆರೋಪಿಸಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶದ ಗಾಜಿಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

40 ವರ್ಷದ ಮಹಿಳೆ, ''ನಾನು ಅನಾಥೆ. ಜಮ್ಮು ಮತ್ತು ಕಾಶ್ಮೀರ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿಯನ್ನು 2020ರಲ್ಲಿ ವಿವಾಹವಾಗಿದ್ದೆ. ನನ್ನ ಪತಿಯ ಮೊದಲ ಪತ್ನಿ, ಆಕೆಯ ಮಗ ಮತ್ತು ಮಗಳು ಹಾಗೂ ಇತರೆ ಸದಸ್ಯರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು'' ಎಂದು ದೂರು ನೀಡಿದ್ದಾರೆ.

''ನನ್ನನ್ನು ಜಮ್ಮು ಮತ್ತು ಕಾಶ್ಮೀರದ ಮನೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ವರ್ಷಗಳು ಕಳೆದಂತೆ ಕಿರುಕುಳ ಹೆಚ್ಚಾಯಿತು. ಏಪ್ರಿಲ್ 11-14ರಿಂದ ನನ್ನನ್ನು ಕೋಣೆಯಲ್ಲಿ ಬಂಧಿಸಲಾಗಿತ್ತು. ಊಟವನ್ನೂ ನೀಡಿರಲಿಲ್ಲ. ನನ್ನ ಗಂಡನ ಮೊದಲ ಪತ್ನಿಯ ಮಗ ನನ್ನ ಮೊಬೈಲ್ ಫೋನ್​ ಕಸಿದುಕೊಂಡಿದ್ದ. ನಂತರ ಆತ ಮತ್ತು ಆತನ ಸಹಾಯಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಸಾಕಷ್ಟು ಬೇಡಿಕೊಂಡ ಬಳಿಕ ನನ್ನನ್ನು ಬಿಡಲು ಒಪ್ಪಿಕೊಂಡರು'' ಎಂದು ದೂರಿನಲ್ಲಿ ನೋವು ತೋಡಿಕೊಂಡಿದ್ದಾರೆ.

ಅಲ್ಲದೇ, ''ನನ್ನನ್ನು ಮನೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಪತಿ ಮತ್ತು ಮಲಮಗನ ವಿರುದ್ಧ ಯಾವುದೇ ದೂರು ನೀಡುವುದಿಲ್ಲ ಎಂದು ನನ್ನಿಂದ ಲಿಖಿತವಾಗಿ ಬರೆದುಕೊಂಡಿದ್ದಾರೆ. ಇದರ ನಂತರವೇ ನನ್ನನ್ನು ಮನೆಯಿಂದ ಬಿಡುಗಡೆ ಮಾಡಲಾಗಿದೆ. ಬಳಿಕ ಯುವಕನೋರ್ವ ನನ್ನನ್ನು ಲಖನೌಗೆ ಕರೆತಂದು ಬಿಟ್ಟಿದ್ದಾನೆ. ಈ ವೇಳೆಯೂ ಪೊಲೀಸರನ್ನು ಸಂಪರ್ಕಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆದರೆ, ನಾನೇ ಧೈರ್ಯ ಮಾಡಿಕೊಂಡು ಈ ದೂರು ದಾಖಲಿಸುತ್ತಿದ್ದೇನೆ'' ಎಂದು ನೊಂದ ಮಹಿಳೆ ಹೇಳಿಕೊಂಡಿದ್ದಾರೆ.

ಈ ವಿಷಯವನ್ನು ಉತ್ತರ ವಲಯದ ಉಪ ಪೊಲೀಸ್ ಆಯುಕ್ತ ಅಭಿಜಿತ್ ಶಂಕರ್ ಖಚಿತಪಡಿಸಿದ್ದು, ಮಹಿಳೆಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಭೀಕರ ರಸ್ತೆ ಅಪಘಾತ: ಹಾಲಿನ ಕಂಟೈನರ್‌ಗೆ ಬಸ್ ಡಿಕ್ಕಿ; 18 ಜನ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.