ETV Bharat / bharat

ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಲಾಟರಿ ಕಿಂಗ್​ ಮಾರ್ಟಿನ್​ ಯಾರು? - Santiago Martin

2019 ಮತ್ತು 2024ರ ನಡುವೆ 1,368 ಕೋಟಿ ರೂಪಾಯಿಯನ್ನು ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ ಕಂಪನಿಯ ಮಾಲೀಕ, ಲಾಟರಿ ಕಿಂಗ್​ ಸ್ಯಾಂಟಿಯಾಗೊ ಮಾರ್ಟಿನ್ ದೇಣಿಗೆ ನೀಡಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದ ಲಿಸ್ಟ್​ನಿಂದ ಮಾಹಿತಿ ಬಹಿರಂಗವಾಗಿದೆ.

Etv Bharat
Etv Bharat
author img

By ETV Bharat Karnataka Team

Published : Mar 15, 2024, 2:54 PM IST

Updated : Mar 15, 2024, 4:03 PM IST

ನವದೆಹಲಿ: ಚುನಾವಣಾ ಬಾಂಡ್​ ಮೂಲಕ ದೇಣಿಗೆ ನೀಡಿದವರ ಹೆಸರುಗಳು ಬಹಿರಂಗವಾಗಿವೆ. ಇದರಲ್ಲಿ ಹಲವು ಮಹತ್ವದ ವಿಷಯಗಳು ಈಗ ಸಾರ್ವಜನಿಕಗೊಂಡಿವೆ. ರಾಜಕೀಯ ಪಕ್ಷಗಳಿಗೆ 2019 ಹಾಗೂ 2024ರ ನಡುವೆ ₹1,368 ಕೋಟಿ ರೂಪಾಯಿಯನ್ನು ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ ಕಂಪನಿಯ ಮಾಲೀಕ, ಲಾಟರಿ ಕಿಂಗ್​ ಸ್ಯಾಂಟಿಯಾಗೊ ಮಾರ್ಟಿನ್ ದೇಣಿಗೆ ನೀಡಿದ್ದಾರೆ ಎಂದು ಚುನಾವಣಾ ಆಯೋಗವು ಬಹಿರಂಗಪಡಿಸಿದೆ.

ಸುಪ್ರೀಂ ಕೋರ್ಟ್‌ ಚಾಟಿ ಏಟಿನ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್​ಗಳ ಮಾಹಿತಿ ನೀಡಿತ್ತು. ಕೆಲವು ದಿನಗಳ ಬಳಿಕ ಗುರುವಾರ ಚುನಾವಣಾ ಆಯೋಗವು, ಬಾಂಡ್‌ಗಳನ್ನು ಖರೀದಿಸಿದವರ ಪಟ್ಟಿಯನ್ನು ಪ್ರಕಟ ಮಾಡಿತ್ತು. ಈ ಪಟ್ಟಿಯಲ್ಲಿ 'ಲಾಟರಿ ಕಿಂಗ್' ಎಂದು ಕರೆಯಲ್ಪಡುವ ಸ್ಯಾಂಟಿಯಾಗೊ ಮಾರ್ಟಿನ್ ಹೆಸರನ್ನು ಬಹಿರಂಗಪಡಿಸಲಾಗಿದೆ.

ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ ಕಂಪನಿಯು 2019ರಿಂದ 2024ರವರೆಗೆ ಅತ್ಯಧಿಕ ಮೌಲ್ಯದ 1,368 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿರುವುದು ಎಂದು ಕಂಡು ಬಂದಿದೆ. ಇದರೊಂದಿಗೆ ಆ ಕಂಪನಿಯ ಮಾಲೀಕ ಲಾಟರಿ ದೊರೆ ಸ್ಯಾಂಟಿಯಾಗೊ ಮಾರ್ಟಿನ್ ಹೆಸರು ಚರ್ಚೆಗೆ ಗ್ರಾಸವಾಗಿದೆ. ಕಾರ್ಮಿಕನಾಗಿ ಜೀವನ ಆರಂಭಿಸಿದ ವ್ಯಕ್ತಿಯೊಬ್ಬ ಭಾರತದ ರಾಜಕೀಯ ಪಕ್ಷಗಳ ಅತಿದೊಡ್ಡ ದೇಣಿಗೆ ನೀಡುವಷ್ಟರ ಮಟ್ಟಿಗೆ ಬೆಳೆದಿರುವುದು ಗಮನಾರ್ಹ ಸಂಗತಿ.

ಕಾರ್ಮಿಕನಾಗಿದ್ದ ಸ್ಯಾಂಟಿಯಾಗೊ ಮಾರ್ಟಿನ್: ಅವರದೇ ಕಂಪನಿಯ ವೆಬ್‌ಸೈಟ್, ಮಾರ್ಟಿನ್ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ವಿವರಗಳನ್ನು ನೀಡುತ್ತದೆ. ಆರಂಭದ ದಿನಗಳಲ್ಲಿ ಮ್ಯಾನ್ಮಾರ್​ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. 1988ರಲ್ಲಿ ಭಾರತಕ್ಕೆ ಹಿಂತಿರುಗಿ ತಮಿಳುನಾಡಿನಲ್ಲಿ ಲಾಟರಿ ವ್ಯವಹಾರ ಪ್ರಾರಂಭಿಸಿದರು. ಇದನ್ನು ಕರ್ನಾಟಕ ಮತ್ತು ಕೇರಳಕ್ಕೂ ವಿಸ್ತರಣೆ ಮಾಡಲಾಗಿತ್ತು. ನಂತರ ಅವರು ಈಶಾನ್ಯ ಭಾರತಕ್ಕೆ ಸ್ಥಳಾಂತರಗೊಂಡರು. ಅಲ್ಲಿ ಅವರು ಸರ್ಕಾರದ ಲಾಟರಿ ಯೋಜನೆಗಳೊಂದಿಗೆ ವ್ಯವಹಾರ ಪ್ರಾರಂಭಿಸಿದರು. ಕೆಲವೇ ವರ್ಷಗಳಲ್ಲಿ, ಅವರು ಭೂತಾನ್ ಮತ್ತು ನೇಪಾಳದಲ್ಲಿ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಿದರು. ರಿಯಲ್ ಎಸ್ಟೇಟ್, ನಿರ್ಮಾಣ, ಜವಳಿ ಮತ್ತು ಆತಿಥ್ಯ ಕ್ಷೇತ್ರಗಳನ್ನು ಪ್ರವೇಶ ಮಾಡಿದ್ದಾರೆ.

ಮಾರ್ಟಿನ್ ಆಲ್ ಇಂಡಿಯಾ ಫೆಡರೇಶನ್ ಆಫ್ ಲಾಟರಿ ಟ್ರೇಡ್ ಮತ್ತು ಅಲೈಡ್ ಇಂಡಸ್ಟ್ರಿಯ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಯು ಭಾರತದಲ್ಲಿ ಈ ವ್ಯವಹಾರದಲ್ಲಿ ವಿಶ್ವಾಸವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅವರು ವಿಶ್ವ ಲಾಟರಿ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. ಫ್ಯೂಚರ್ ಗೇಮಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಆನ್‌ಲೈನ್ ಗೇಮಿಂಗ್, ಕ್ಯಾಸಿನೊ ಇತ್ಯಾದಿಗಳನ್ನು ನಿರ್ವಹಿಸುತ್ತದೆ.

ಈತನ ವ್ಯವಹಾರ ಕೇರಳಕ್ಕೂ ಹಬ್ಬಿದ್ದರಿಂದ ಅಲ್ಲಿನ ರಾಜ್ಯ ಪೊಲೀಸರು ಲಾಟರಿ ದಂಧೆಯ ಬಗ್ಗೆಯೂ ತನಿಖೆ ಆರಂಭಿಸಿದ್ದರು. ಅಲ್ಲದೇ, 2011ರಲ್ಲಿ ಸಿಕ್ಕಿಂ ಸರ್ಕಾರಕ್ಕೆ ಮೋಸ ಮಾಡಿದ್ದ ಆರೋಪದ ಮೇಲೆ ಮಾರ್ಟಿನ್ ಮತ್ತು ಈತನ ಆಪ್ತ ಸಹಾಯಕರ ವಿರುದ್ಧ ಸಿಬಿಐ 30ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಸಿಬಿಐ ಚಾರ್ಜ್‌ಶೀಟ್ ಪ್ರಕಾರ, 2005ರಿಂದ ಕೇರಳದಲ್ಲಿ ಸಿಕ್ಕಿಂ ಸರ್ಕಾರದ ಪರವಾಗಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರ್ಟಿನ್ ಸಿಕ್ಕಿಂ ಸರ್ಕಾರಕ್ಕೆ 4,500 ಕೋಟಿ ರೂಪಾಯಿ ವಂಚಿಸಿದ್ದಾರೆ. ಈ ಲಾಟರಿ ಹಗರಣ ಕೇರಳದಲ್ಲಿ ಸಾಕಷ್ಟು ಬಿರುಗಾಳಿ ಎಬ್ಬಿಸಿತ್ತು. ನಂತರದಲ್ಲಿ ಎರಡು ವರ್ಷಗಳ ಕಾಲ ಕೇರಳ ರಾಜ್ಯದಲ್ಲಿ ಸಿಕ್ಕಿಂ ಲಾಟರಿಗಳ ಆನ್‌ಲೈನ್ ಮಾರಾಟವನ್ನೂ ನಿಷೇಧಿಸಲಾಗಿತ್ತು.

2014ರಲ್ಲಿ ಸಿಬಿಐ ತನ್ನ ತನಿಖೆಯ ನಂತರ, ಈ ಹಗರಣವು ಟಿಕೆಟ್ ಖರೀದಿದಾರರಿಗೆ ತಮ್ಮ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿತ್ತು. ಮಾರ್ಟಿನ್ ವಿರುದ್ಧದ ಸಿಬಿಐ ಪ್ರಕರಣವು ಇನ್ನೂ ನ್ಯಾಯಾಲಯಲ್ಲಿ ವಿಚಾರಣೆ ನಡೆಯುತ್ತಿದೆ. ಸದ್ಯ ಸ್ಯಾಂಟಿಯಾಗೊ ಮಾರ್ಟಿನ್ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ವೇಳಾಪಟ್ಟಿ ನಾಳೆ ಪ್ರಕಟ: ಕೇಂದ್ರ ಚುನಾವಣಾ ಆಯೋಗ

Last Updated : Mar 15, 2024, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.