ETV Bharat / bharat

ಸಂಸತ್ತಿನಲ್ಲಿ ಕರ್ನಾಟಕ ಸಂಸದರ ಕಾರ್ಯಕ್ಷಮತೆ ಎಷ್ಟು? ಇಲ್ಲಿದೆ ಮಾಹಿತಿ - Karnataka MPs Performance

author img

By ETV Bharat Karnataka Team

Published : Apr 2, 2024, 6:27 PM IST

ಲೋಕಸಭೆಯ ಕಲಾಪಗಳಲ್ಲಿ ಕರ್ನಾಟಕದ ಸಂಸದರ ಪ್ರದರ್ಶನ ಹೇಗಿದೆ ಎಂಬ ಬಗ್ಗೆ ಒಂದು ಅವಲೋಕನ ಇಲ್ಲಿದೆ.

Karnataka Loksabha MP's Performance
Karnataka Loksabha MP's Performance

17ನೇ ಲೋಕಸಭೆಯ ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಸಂಸತ್ ಸದಸ್ಯರು (ಸಂಸದರು) ಸಂಸತ್ತಿನ ಅಧಿವೇಶನಗಳಿಗೆ ಹಾಜರಾಗುವಲ್ಲಿ ಮತ್ತು ಸದನದಲ್ಲಿ ಪ್ರಶ್ನೆಗಳನ್ನು ಕೇಳುವಲ್ಲಿ ಒಂದಿಷ್ಟು ಮುಂದಿದ್ದಾರೆ. ಆದರೆ ಚರ್ಚೆಗಳಲ್ಲಿ ಭಾಗವಹಿಸಲು ನಮ್ಮ ಸಂಸದರು ಅಷ್ಟೊಂದು ಆಸಕ್ತಿ ತೋರಿಸಿಲ್ಲ. ಕರ್ನಾಟಕದ ಸಂಸದರು ಸರಾಸರಿ ರಾಷ್ಟ್ರೀಯ ಹಾಜರಾತಿಯಷ್ಟೇ ಹಾಜರಾತಿಯನ್ನು ಹೊಂದಿದ್ದಾರೆ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ್ದಾರೆ.

ಕರ್ನಾಟಕದ ಸಂಸದರು ಚರ್ಚೆಯಲ್ಲಿ ಭಾಗವಹಿಸುವಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹಿಂದುಳಿದಿದ್ದಾರೆ. ಅಲ್ಲದೆ, ಕೆಲವು ಸಂಸದರು ಅತ್ಯಂತ ಕಡಿಮೆ ಹಾಜರಾತಿಯನ್ನು ದಾಖಲಿಸಿದ್ದಾರೆ ಅಥವಾ ಒಂದೇ ಒಂದು ಪ್ರಶ್ನೆಯನ್ನು ಎತ್ತಿಲ್ಲ ಅಥವಾ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ. 17 ನೇ ಲೋಕಸಭೆಯಲ್ಲಿ ಕರ್ನಾಟಕದ ಸಂಸದರ ಪೈಕಿ ಬಹುತೇಕರು ಬಹಳ ಕಡಿಮೆ ಅಧಿವೇಶನಗಳಿಗೆ ಹಾಜರಾಗಿದ್ದಾರೆ ಮತ್ತು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಸಂಸದರು ಚರ್ಚೆಗಳಲ್ಲಿ ಭಾಗವಹಿಸುವ ಮತ್ತು ಕರ್ನಾಟಕದ ಬಗ್ಗೆ ಸಮಸ್ಯೆಗಳನ್ನು ಎತ್ತುವ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ. ಈ ಪ್ರವೃತ್ತಿ ಈ ಅಧಿವೇಶನದ ಅವಧಿಯಲ್ಲೂ ಮುಂದುವರಿಯಿತು. ಕರ್ನಾಟಕದ ಬಹುಪಾಲು ಸಂಸದರು ಆಡಳಿತ ಪಕ್ಷಕ್ಕೆ (ಬಿಜೆಪಿ) ಸೇರಿದವರಾಗಿರುವುದರಿಂದ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕಠಿಣ ಪ್ರಶ್ನೆಗಳನ್ನು ಅವರು ಕೇಳಲು ಸಾಧ್ಯವಿಲ್ಲದಿರುವುದು ಕೂಡ ಇದಕ್ಕೆ ಒಂದು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕವು ಲೋಕಸಭೆಗೆ 28 ಸಂಸದರನ್ನು ಕಳುಹಿಸುತ್ತದೆ. ಅದರಲ್ಲಿ 25 ಜನ ಬಿಜೆಪಿಯವರಾಗಿದ್ದಾರೆ. ದಿವಂಗತ ಸುರೇಶ್ ಅಂಗಡಿ ಮಧ್ಯಾವಧಿಯಲ್ಲಿ ನಿಧನರಾದರು. ಈ ಕ್ಷೇತ್ರವನ್ನು ಅವರ ಪತ್ನಿ ಮಂಗಳಾ ಅಂಗಡಿ ಪ್ರತಿನಿಧಿಸುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ತಲಾ ಒಬ್ಬರು ಸಂಸದರಿದ್ದಾರೆ. ಒಬ್ಬರು ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ.

ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೇ ತಮ್ಮ ಕ್ಷೇತ್ರಕ್ಕೆ ಬಿಡುಗಡೆಯಾದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನಿಧಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡುವುದರಿಂದ ಲೋಕಸಭೆಯಲ್ಲಿ ಪ್ರಶ್ನೆ ಕೇಳುವುದು ಅನಿವಾರ್ಯವಲ್ಲ ಎಂದು ಆಡಳಿತ ಪಕ್ಷದ ಕೆಲ ಸಂಸದರು ಹೇಳಿದ್ದಾರೆ.

ಕೆಲ ಸಂಸದರಿಗೆ ಹಿಂದಿ ಭಾಷೆ ನಿರರ್ಗಳವಾಗಿ ಬಾರದಿರುವುದು ಕೂಡ ಅವರು ಚರ್ಚೆಗಳಲ್ಲಿ ಭಾಗವಹಿಸದಿರುವುದಕ್ಕೆ ಕಾರಣವಾಗಿರಬಹುದು ಎಂದು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ ಹೇಳುತ್ತಾರೆ.

17ನೇ ಲೋಕಸಭೆಯ ಅವಧಿ ಇದೇ ಮೇ ತಿಂಗಳಲ್ಲಿ ಕೊನೆಗೊಳ್ಳಲಿದ್ದು, 15 ಅಧಿವೇಶನಗಳಲ್ಲಿ 274 ಬಾರಿ ಸದನ ಕಲಾಪ ನಡೆದಿವೆ.

ಸಂಸದರ ರಾಷ್ಟ್ರೀಯ ಸರಾಸರಿ ಹಾಜರಾತಿ ಶೇ 79 ಆಗಿದ್ದರೆ, ಕರ್ನಾಟಕದ 17 ಸಂಸದರು ಅದಕ್ಕಿಂತ ಕಡಿಮೆ ಹಾಜರಾತಿಯನ್ನು ದಾಖಲಿಸಿದ್ದಾರೆ. ರಾಜ್ಯ ಸಂಸದರ ಸರಾಸರಿ ಹಾಜರಾತಿ ಶೇ 71 ಆಗಿತ್ತು. ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಶೇ 33ರಷ್ಟು ಹಾಗೂ ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಶೇ 38ರಷ್ಟು ಅಧಿವೇಶನಗಳಿಗೆ ಹಾಜರಾಗಿದ್ದರು.

ಗದ್ದಿಗೌಡರ್ ಅತ್ಯಧಿಕ ಶೇ 91ರಷ್ಟು ಹಾಜರಾತಿ ಹೊಂದಿದ್ದರೆ, ಗುಲ್ಬರ್ಗ ಸಂಸದ ಉಮೇಶ ಜಾಧವ ಹಾಗೂ ಹಾವೇರಿ-ಗದಗ ಸಂಸದ ಶಿವಕುಮಾರ ಉದಾಸಿ ಶೇ 89ರಷ್ಟು ಹಾಜರಾತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಚರ್ಚೆಗಳಲ್ಲಿ ಭಾಗವಹಿಸುವಲ್ಲಿ ರಾಜ್ಯದ ಸಂಸದರು ರಾಷ್ಟ್ರೀಯ ಸರಾಸರಿಗಿಂತ ಹಿಂದಿದ್ದಾರೆ. ರಾಷ್ಟ್ರೀಯ ಸರಾಸರಿಯ ಪ್ರಕಾರ ಪ್ರತಿ ಸಂಸದರು 24 ಚರ್ಚೆಗಳಲ್ಲಿ ಭಾಗವಹಿಸಿದರೆ, ಕರ್ನಾಟಕದ ಸಂಸದರು ಸರಾಸರಿ 11 ಚರ್ಚೆಗಳಲ್ಲಿ ಮಾತ್ರ ಭಾಗವಹಿಸಿದ್ದಾರೆ. ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ), ಶ್ರೀನಿವಾಸ್ ಪ್ರಸಾದ್ (ಚಾಮರಾಜನಗರ), ರಮೇಶ್ ಜಿಗಜಿಣಗಿ (ಬಿಜಾಪುರ) ಮತ್ತು ಮಾಜಿ ಸಚಿವ ಸದಾನಂದ ಗೌಡ ಈ ಅವಧಿಯಲ್ಲಿ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ.

14 ಸಂಸದರು 10 ಕ್ಕಿಂತ ಕಡಿಮೆ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಲಾಭರಹಿತ ಸಂಸ್ಥೆ ಪಿಆರ್​ಎಸ್ ಲೆಜಿಸ್ಲೇಟಿವ್ ರಿಸರ್ಚ್ ಹೇಳಿದೆ. ಉಮೇಶ್ ಜಾಧವ್ 65 ಚರ್ಚೆಗಳಲ್ಲಿ ಭಾಗವಹಿಸಿದ್ದು, ಉದಾಸಿ 60 ಮತ್ತು ತೇಜಸ್ವಿ ಸೂರ್ಯ 36 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.

ವಿರೋಧ ಪಕ್ಷದ ಸಂಸದರು ಸಂಸತ್ತಿನಲ್ಲಿ ಪ್ರಮುಖ ವಿಷಯಗಳನ್ನು ಎತ್ತಲು ವಿಫಲರಾಗಿದ್ದಾರೆ.

ಕೇಳಲಾದ ಪ್ರಶ್ನೆಗಳು: ಲೋಕಸಭೆಯ ಅಧಿಕೃತ ವೆಬ್ ಸೈಟ್ ಪ್ರಕಾರ, ಕರ್ನಾಟಕದ ಸಂಸದರು ಈ ಅವಧಿಯಲ್ಲಿ 5,114 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಲ್ಲಿ ಹೆಚ್ಚಿನವು ಸರ್ಕಾರಿ ಯೋಜನೆಗಳು, ವಿದೇಶಾಂಗ ನೀತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿವೆ. ಕರ್ನಾಟಕದ ಬೆರಳೆಣಿಕೆಯಷ್ಟು ಸಂಸದರು ಮಾತ್ರ ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿದ್ದಾರೆ.

ಒಂದೇ ರಾಜಕೀಯ ಪಕ್ಷದಿಂದ ಬಹುತೇಕ ಸಂಸದರು ಆಯ್ಕೆಯಾಗಿರುವುದರಿಂದ ಸಂಸದರ ಕಾರ್ಯಕ್ಷಮತೆ ಮತ್ತು ಪ್ರಶ್ನೆಗಳು ಕಳಪೆಯಾಗಿವೆ ಎಂದು ನಾರಾಯಣ ಹೇಳುತ್ತಾರೆ.

ಕರ್ನಾಟಕದ ಸಂಸದರ ಕಳಪೆ ಸಾಧನೆಗೆ ಪಕ್ಷದ ನಾಯಕರು ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶದ ಕೊರತೆ ಮತ್ತು ಚರ್ಚೆಗಳ ಸಮಯದಲ್ಲಿ ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಮಾತನಾಡುವ ಅನಿವಾರ್ಯತೆಯೂ ಕಾರಣ ಎಂದು ರಾಜಕೀಯ ವಿಜ್ಞಾನಿ ಸಂದೀಪ್ ಶಾಸ್ತ್ರಿ ಹೇಳುತ್ತಾರೆ. ಹೆಚ್ಚಿನ ಸಂಸದರು ಆಡಳಿತ ಪಕ್ಷಕ್ಕೆ ಸೇರಿದವರಾಗಿರುವುದರಿಂದ, ಅವರು ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಎತ್ತಲು ಸಾಧ್ಯವಾಗುವುದಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ : ತೆಲಂಗಾಣದಲ್ಲಿ ಬೆಂಕಿ ಕೆಂಡವಾದ ಬಿಸಿಲು: ಐಎಂಡಿಯಿಂದ 16 ಜಿಲ್ಲೆಗಳಿಗೆ ಹೀಟ್‌ವೇವ್ ಎಚ್ಚರಿಕೆ - Rising temperature

ETV Bharat Logo

Copyright © 2024 Ushodaya Enterprises Pvt. Ltd., All Rights Reserved.