ETV Bharat / bharat

ಮಹಾರಾಷ್ಟ್ರದಲ್ಲಿ ಗೆಲ್ಲುವ ಯಾವುದೇ ಮೈತ್ರಿಕೂಟಕ್ಕೆ ನಮ್ಮ ಬೆಂಬಲ: ಪ್ರಕಾಶ್ ಅಂಬೇಡ್ಕರ್ ಅಚ್ಚರಿಯ ಹೇಳಿಕೆ - ASSEMBLY ELECTION 2024

ಮಹಾರಾಷ್ಟ್ರದಲ್ಲಿ ಈ ಬಾರಿ ಸರ್ಕಾರ ರಚಿಸುವ ಯಾವುದೇ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಪ್ರಕಾಶ್ ಅಂಬೇಡ್ಕರ್ ಹೇಳಿದ್ಧಾರೆ.

ಪ್ರಕಾಶ್ ಅಂಬೇಡ್ಕರ್
ಪ್ರಕಾಶ್ ಅಂಬೇಡ್ಕರ್ (IANS)
author img

By ETV Bharat Karnataka Team

Published : Nov 22, 2024, 2:01 PM IST

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈ ಬಾರಿ ರಾಜ್ಯದಲ್ಲಿ ಸರ್ಕಾರ ರಚಿಸುವ ಯಾವುದೇ ಮೈತ್ರಿಕೂಟಕ್ಕೆ ತಮ್ಮ ವಂಚಿತ್ ಬಹುಜನ ಆಘಾಡಿ (ವಿಬಿಎ) ಪಕ್ಷದ ಬೆಂಬಲ ನೀಡುವುದಾಗಿ ಪಕ್ಷದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಘೋಷಿಸಿದ್ದಾರೆ. ಈ ಮೂಲಕ ವಿಬಿಎ ತನ್ನ ಸೈದ್ಧಾಂತಿಕ ನಿಲುವಿನಲ್ಲಿ ಅಚ್ಚರಿಯ ಪರಿವರ್ತನೆ ಮಾಡಿಕೊಂಡಿದೆ.

"ನಾಳಿನ ಫಲಿತಾಂಶದಲ್ಲಿ ವಿಬಿಎ ಪಕ್ಷಕ್ಕೆ ಸಾಕಷ್ಟು ಸಂಖ್ಯೆ ಸ್ಥಾನಗಳು ಸಿಕ್ಕಲ್ಲಿ, ಯಾವ ಮೈತ್ರಿಕೂಟವು ಸರ್ಕಾರ ರಚಿಸಲಿದೆಯೋ ಅವರಿಗೆ ನಾವು ಬೆಂಬಲ ನೀಡಲಿದ್ದೇವೆ. ನಾವು ಸರ್ಕಾರ ರಚಿಸಬಲ್ಲವರೊಂದಿಗೆ ಇರಲು ಬಯಸುತ್ತೇವೆ. ಈ ಬಾರಿ ನಾವು ಅಧಿಕಾರದಲ್ಲಿ ಇರಲು ಬಯಸುತ್ತೇವೆ. ಹಮ್ ಸತ್ತಾ ಮೇ ರೆಹನಾ ಚುನೆಂಗೆ!" ಎಂಬ ವಿಬಿಎ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರ ಪೋಸ್ಟ್​ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಸಾಮಾನ್ಯವಾಗಿ ಸೋಲು ಕಾಣುತ್ತ ಬಂದಿರುವ ವಿಬಿಎ ಈ ಬಾರಿ ಒಂದಿಷ್ಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಹೀಗಾಗಿ ಅಂಬೇಡ್ಕರ್ ಫಲಿತಾಂಶಕ್ಕೂ ಮುನ್ನವೇ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ತನ್ನ ಹೊಸ ನಿಲುವಿನಿಂದ ವಿಬಿಎ ಶಿವಸೇನೆ-ಭಾರತೀಯ ಜನತಾ ಪಕ್ಷ-ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಆಡಳಿತಾರೂಢ ಮಹಾಯುತಿ ಮತ್ತು ಪ್ರತಿಪಕ್ಷ ಕಾಂಗ್ರೆಸ್-ಶಿವಸೇನೆ (ಯುಬಿಟಿ) -ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎಸ್ ಪಿ)ಗಳನ್ನು ಒಳಗೊಂಡ ಮಹಾವಿಕಾಸ ಆಘಾಡಿ ಈ ಎರಡೂ ಮೈತ್ರಿಕೂಟಗಳಿಂದ ರಾಜಕೀಯವಾಗಿ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯಿದೆ.

ಆದರೆ ವಿಬಿಎ ದ ಬೆಂಬಲ ಬಯಸುವ ಯಾವುದೇ ಮೈತ್ರಿಕೂಟವು ಅದರ ಬೇಡಿಕೆಗಳ ಪಟ್ಟಿಯನ್ನು ಒಪ್ಪಬೇಕಾಗುತ್ತದೆ. ವಿಬಿಎ ದ ಈ ತಂತ್ರವು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ರಾಜಕೀಯ ತಂತ್ರಗಳಿಗೆ ಹೋಲಿಕೆಯಾಗುತ್ತದೆ.

"ಇತರ ಕೆಲ ಷರತ್ತುಗಳು ಮಾತ್ರವಲ್ಲದೆ ಅವರು ನಮ್ಮ ಸಿದ್ಧಾಂತವನ್ನು ಅವರು ಒಪ್ಪಿಕೊಂಡರೆ, ನಮ್ಮ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದಾದರೆ ಯಾವುದೇ ಮೈತ್ರಿಕೂಟವನ್ನು ಬೆಂಬಲಿಸಲು ವಿಬಿಎ ಸಿದ್ಧವಾಗಿದೆ ಎಂದು ಅಂಬೇಡ್ಕರ್ ಈಗಾಗಲೇ ಎರಡು ದಿನಗಳ ಹಿಂದೆ ಸ್ಪಷ್ಟಪಡಿಸಿದ್ದಾರೆ" ಎಂದು ವಿಬಿಎ ಮುಖ್ಯ ವಕ್ತಾರ ಸಿದ್ಧಾರ್ಥ್ ಮೊಕ್ಲೆ ಐಎಎನ್ಎಸ್​ಗೆ ತಿಳಿಸಿದರು.

ವಿಬಿಎ 199 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಇತರ ಪಕ್ಷಗಳ 23 ಸ್ವತಂತ್ರರು ಮತ್ತು ಸಮಾನ ಮನಸ್ಕ ಅಭ್ಯರ್ಥಿಗಳಿಗೆ ಬೇಷರತ್ತಾದ ಬೆಂಬಲ ನೀಡಿದೆ. ಚುನಾವಣಾ ಪ್ರಚಾರ ಸಮಯದಲ್ಲಿ ವಿಬಿಎ ಮಹಾರಾಷ್ಟ್ರದಾದ್ಯಂತ ಸುಮಾರು 210 ರ್ಯಾಲಿಗಳನ್ನು ಆಯೋಜಿಸಿತ್ತು. ಇತ್ತೀಚೆಗೆ ಗಂಭೀರ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅಂಬೇಡ್ಕರ್, 2019 ರ ವಿಧಾನಸಭಾ ಚುನಾವಣೆಯಂತೆ ಈ ಬಾರಿಯೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇಕಾಗುವಷ್ಟು ಸ್ಥಾನಗಳನ್ನು ಯಾವುದೇ ಮೈತ್ರಿಕೂಟ ಪಡೆಯಲಾರದು ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ : Watch.. ಜನ ಶತಾಬ್ದಿ ರೈಲಿನ ಎಸಿ ಕೋಚ್‌ನಲ್ಲಿ ಹಾವು ಪ್ರತ್ಯಕ್ಷ: ಬೆಚ್ಚಿಬಿದ್ದ ಪ್ರಯಾಣಿಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.