ETV Bharat / bharat

ವಯನಾಡ್ ಭೂಕುಸಿತಕ್ಕೆ ಮಿಡಿದ ಚಿತ್ರರಂಗ: ಸಂತ್ರಸ್ತರ ನೆರವಿಗೆ ಧಾವಿಸಿದ ಸಿನಿಮೋದ್ಯಮ - WAYANAD LANDSLIDES - WAYANAD LANDSLIDES

ವಯನಾಡ್ ಭೂಕುಸಿತಕ್ಕೆ ದಕ್ಷಿಣ ಭಾರತದ ಸಿನಿಮಾ ರಂಗ ಮಿಡಿದಿದೆ. ಸಂತ್ರಸ್ತರಿಗೆ ನೆರವಾಗಲು ತಮ್ಮ ಕೈಲಾದಷ್ಟು ಪರಿಹಾರ ಹಣವನ್ನು ಘೋಷಿಸಿದ್ದಾರೆ.

ವಯನಾಡ್ ಭೂಕುಸಿತಕ್ಕೆ ಮಿಡಿದ ಚಿತ್ರರಂಗ
ವಯನಾಡ್ ಭೂಕುಸಿತಕ್ಕೆ ಮಿಡಿದ ಚಿತ್ರರಂಗ (ETV Bharat)
author img

By ETV Bharat Entertainment Team

Published : Aug 4, 2024, 5:48 PM IST

ವಯನಾಡ್/ಹೈದರಾಬಾದ್: ಭೀಕರ ಭೂಕುಸಿತಕ್ಕೆ ತುತ್ತಾಗಿ 350 ಕ್ಕೂ ಅಧಿಕ ಜನರು ಸಮಾಧಿಯಾದ ವಯನಾಡ್​ ದುರಂತ ಮನಕಲುತ್ತಿದೆ. ಪ್ರಾಣ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಹಲವು ನಿರ್ಗತಿಕರಾಗಿದ್ದಾರೆ. ಕೇರಳ ಸರ್ಕಾರ ಸಂತ್ರಸ್ತರಿಗೆ ಹೊಸ ನಗರ ನಿರ್ಮಿಸಿಕೊಡಲಾಗುವುದು ಎಂದು ಹೇಳಿದೆ. ಹಲವು ಚಿತ್ರರಂಗದ ನಟ, ನಟಿಯರು ತಮಗೆ ತೋಚಿದಷ್ಟು ಧನಸಹಾಯ ಘೋಷಿಸುತ್ತಿದ್ದಾರೆ.

ಮಲಯಾಳಂ ಚಿತ್ರರಂಗದ ಸೂಪರ್​ಸ್ಟಾರ್​ ನಟ, ಗೌರವ ಲೆಫ್ಟಿನೆಂಟ್​ ಕರ್ನಲ್​ ಮೋಹನ್​ಲಾಲ್​ 3 ಕೋಟಿ ರೂಪಾಯಿ, ತೆಲುಗು ಚಿತ್ರನಟ ಚಿರಂಜೀವಿ ಮತ್ತು ಅವರ ಪುತ್ರ ರಾಮ್​​ಚರಣ್​​ ಸೇರಿ 1 ಕೋಟಿ ರೂಪಾಯಿ, ಪುಷ್ಪಾ ಖ್ಯಾತಿಯ ಅಲ್ಲು ಅರ್ಜುನ್​ 25 ಲಕ್ಷ, ನಯನತಾರಾ ಮತ್ತು ಶಿವನ್​ ದಂಪತಿ 20 ಲಕ್ಷ, ಸೂರ್ಯ-ಜ್ಯೋತಿಕಾ ದಂಪತಿ 50 ಲಕ್ಷ, ತಮಿಳು ನಟ ವಿಕ್ರಮ್​ 20 ಲಕ್ಷ ರೂಪಾಯಿಯನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

ಮೋಹನ್​​ಲಾಲ್​ ₹3 ಕೋಟಿ ದೇಣಿಗೆ: ಭಾರತೀಯ ಪ್ರಾದೇಶಿಕ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿರುವ ಖ್ಯಾತ ನಟ ಮೋಹನ್ ಲಾಲ್ ಅವರು ಶನಿವಾರ ಭೂಕುಸಿತ ಪೀಡಿತ ವಯನಾಡಿನ ಹಲವು ಪ್ರದೇಶಗಳಿಗೆ ಸೇನಾ ಸಮವಸ್ತ್ರದಲ್ಲಿ ಆಗಮಿಸಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಸಂತ್ರಸ್ತರ ಪುನರ್ವಸತಿಗಾಗಿ 3 ಕೋಟಿ ರೂಪಾಯಿ ನೀಡಲಾಗುವುದು. ಹಣ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರಲಿ ಎಂದು ತಿಳಿಸಿದರು.

ತೆಲುಗು ಚಿತ್ರನಟ ಚಿರಂಜೀವಿ ಮತ್ತು ಅವರ ಪುತ್ರ ರಾಮ್​​ಚರಣ್​ ಅವರು 1 ಕೋಟಿ ರೂಪಾಯಿ ಘೋಷಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಭೂಕುಸಿತದಲ್ಲಿ ಜೀವಹಾನಿ ಬಗ್ಗೆ ತೀವ್ರ ದುಃಖವಾಗಿದೆ. ಚರಣ್ ಮತ್ತು ನಾನು ಒಟ್ಟಾಗಿ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲಲಿದ್ದೇವೆ. ಕೇರಳ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಲಾಗುವುದು ಎಂದಿದ್ದಾರೆ.

ನೆರವಿಗೆ ಬಂದ 'ಪುಷ್ಪಾ': ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಯಲ್ಲಿ ಪುನರ್ವಸತಿಗಾಗಿ ತೆಲುಗು ಸೂಪರ್​ ಸ್ಟಾರ್​ ಪುಷ್ಪಾ ಖ್ಯಾತಿಯ ಅಲ್ಲು ಅರ್ಜುನ್​​ ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ್ದು, ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಸಂತ್ರಸ್ತರಿಗೆ ಪುನರ್ವಸತಿ ಕಾರ್ಯ ಕಲ್ಪಿಸಬೇಕಿದೆ. ಅವರ ಬೆಂಬಲಕ್ಕಾಗಿ 25 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ, ತಮಿಳು ನಟರಾದ ಕಮಲ್ ಹಾಸನ್, ಸೂರ್ಯ, ಜ್ಯೋತಿಕಾ, ಕಾರ್ತಿ, ವಿಕ್ರಮ್, ನಯನತಾರಾ ಮತ್ತು ವಿಘ್ನೇಶ್ ಶಿವನ್ ಮತ್ತು ಮಲಯಾಳಂ ತಾರೆಯರಾದ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ನಜ್ರಿಯಾ ಮತ್ತು ಟೊವಿನೋ ಥಾಮಸ್ ಕೂಡ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ (ಸಿಎಮ್‌ಡಿಆರ್‌ಎಫ್) ದೇಣಿಗೆ ನೀಡಿದ್ದಾರೆ.

ಕಮಲ್​ ಹಾಸನ್ 25 ಲಕ್ಷ ರೂ., ಜ್ಯೋತಿಕಾ, ಸೂರ್ಯ ಮತ್ತು ಕಾರ್ತಿ ಸೇರಿ 50 ಲಕ್ಷ ರೂ., ಮಮ್ಮುಟ್ಟಿ 20 ಲಕ್ಷ, ದುಲ್ಕರ್ ಸಲ್ಮಾನ್​ 15 ಲಕ್ಷ, ಟೋವಿನೋ 25 ಲಕ್ಷ, ಫಹಾದ್ ಮತ್ತು ನಜ್ರಿಯಾ 25 ಲಕ್ಷ ರೂ., ನಿರ್ಮಾಪಕ ಆನಂದ್ ಪಟವರ್ಧನ್ ಅವರು ಕೇರಳದ ಇತ್ತೀಚೆಗೆ ನಡೆದ 16 ನೇ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರು ಚಲನಚಿತ್ರೋತ್ಸವದಲ್ಲಿ ಗೆದ್ದ 2.2 ಲಕ್ಷ ರೂಪಾಯಿ ಬಹುಮಾನವನ್ನು ಸಿಎಂ ನಿಧಿಗೆ ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ: ಕೇರಳ: ಭೂಕುಸಿತದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ನಟ ಮೋಹನ್​ಲಾಲ್​​ ಭೇಟಿ - Mohanlal Reaches Wayanad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.