ವಯನಾಡ್(ಕೇರಳ): ಪ್ರವಾಸಿಗರ ಸ್ವರ್ಗವಾದ ವಯನಾಡ್ ರಕ್ಕಸ ಭೂಕುಸಿತಕ್ಕೆ ನರಕಸದೃಶದಂತೆ ಬದಲಾಗಿದೆ. ಜುಲೈ 30ರಂದು ಸಂಭವಿಸಿದ್ದ ಭೀಕರ ಗುಡ್ಡಕುಸಿತ ಮತ್ತು ಪ್ರವಾಹಕ್ಕೆ ತುತ್ತಾಗಿ ಈವರೆಗೂ ಬಲಿಯಾದವರ ಸಂಖ್ಯೆ 400 ದಾಟಿದೆ. ಕಳೆದ 10 ದಿನಗಳಿಂದ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದೆ. ದುರಂತ ಸ್ಥಳಗಳಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಸೇನಾ ಪಡೆಗೆ ಭಾವನಾತ್ಮಕ ಬೀಳ್ಕೊಡುಗೆ ನೀಡಲಾಗಿದೆ.
ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ವಯನಾಡ್‌ನಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರ ಜೊತೆಗೆ ಯೋಧರೂ ಕೈ ಜೋಡಿಸಿದ್ದರು. ಬೆಟ್ಟ, ಗುಡ್ಡ, ಅವಶೇಷಗಳಲ್ಲಿ ಸಿಲುಕಿದ್ದ ಸಾವಿರಾರು ಜನರನ್ನು ರಕ್ಷಣೆ ಮಾಡಲಾಗಿದೆ. ಅವಶೇಷಗಳಡಿ ಸಿಲುಕಿದ ನೂರಾರು ಶವಗಳನ್ನೂ ಗುರುತಿಸಿ ಹೊರತರಲಾಗಿತ್ತು. ಸಾವಿನ ಮನೆಯಲ್ಲಿ ದಣಿವರಿಯದೆ ರಕ್ಷಣಾ ಕಾರ್ಯಾಚರಣೆ ನಡೆಸಿ, ಜೀವ ಉಳಿಸಿಕೊಂಡು ರಕ್ಷಣೆಗೆ ಕಾದಿದ್ದವರನ್ನು ಜೀವಂತವಾಗಿ ತಂದಿದ್ದರು.
#WayanadLandslide
— PRO Defence Kochi (@DefencePROkochi) August 8, 2024
Watch | Emotional send-off to #IndianArmy personnel from people of all walks of life at #Wayanad.
Grateful for our brave heroes who risked everything during the landslide #RescueOps.
Your courage & sacrifice won't be forgotten…#WeCare🇮🇳@giridhararamane pic.twitter.com/u2csEIo5r7
ಜೀವರಕ್ಷಕ ಯೋಧರಿಗೆ ಸೆಲ್ಯೂಟ್: ದುರಂತದ ದಿನದಿಂದ ಸತತ 10 ದಿನ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭಾರತದ ಯೋಧರಿಗೆ ವಯನಾಡ್ ಜಿಲ್ಲಾಡಳಿತ ಗುರುವಾರ ಬೀಳ್ಕೊಟ್ಟಿತು. ಈ ವೇಳೆ ಜನರೂ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೀವ ಉಳಿಸಿದ ಯೋಧರಿಗೆ ಗೌರವ ಸಲ್ಲಿಸಿದರು. ಎರಡೂ ಬದಿಗಳಲ್ಲಿ ನಿಂತುಕೊಂಡು ಚಪ್ಪಾಳೆ ತಟ್ಟುತ್ತಾ, ಸೆಲ್ಯೂಟ್ ಹೊಡೆದು ಅವರನ್ನು ಕಳುಹಿಸಿಕೊಟ್ಟರು. ಜನರ ಮುಖದಲ್ಲಿ ಕೃತಜ್ಞತಾ ಭಾವ ಇತ್ತು. ನಮಗಾಗಿ ಶ್ರಮಿಸಿದ ನಿಮಗೆಲ್ಲಾ 'ಸೆಲ್ಯೂಟ್' ಎಂದರು.
ಭಾರತೀಯ ಸೇನೆಯ 500 ಸದಸ್ಯರ ಬೆಟಾನಿಯನ್ ವಯನಾಡ್ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ತಿರುವನಂತಪುರಂ, ಕಲ್ಲಿಕೋಟೆ, ಕಣ್ಣೂರು ಹಾಗೂ ಬೆಂಗಳೂರಿನ ಕೇಂದ್ರಗಳಿಂದ ಯೋಧರು ಇಲ್ಲಿಗೆ ಧಾವಿಸಿದ್ದರು. ಇದೀಗ ರಕ್ಷಣಾ ಕಾರ್ಯಾಚರಣೆ ಅಂತ್ಯವಾದ ಕಾರಣ ಎಲ್ಲರೂ ತಮ್ಮ ತಮ್ಮ ಕೇಂದ್ರಗಳಿಗೆ ವಾಪಸ್ ತೆರಳಿದರು. ಜಿಲ್ಲಾಡಳಿತ ಮತ್ತು ಜನರು ಭಾವನಾತ್ಮಕ ಬೀಳ್ಕೊಡುಗೆಯ ವಿಡಿಯೋವನ್ನು ಕೊಚ್ಚಿ ಡಿಫೆನ್ಸ್ ಪಬ್ಲಿಕ್ ರಿಲೇಷನ್ಸ್ನ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
#WayanadLandslide
— PRO Defence Kochi (@DefencePROkochi) August 8, 2024
Soldiers of #122 Inf Bn of #TerritorialArmy being felicitated by Teachers & staff of MountTabor School where the RescueTeams for #Wayanad were accomodated.#HeroesInUniform
𝔹𝕙𝕒𝕣𝕒𝕥 🇮🇳 𝕄𝕒𝕥𝕒 𝕂𝕚 𝕁𝕒𝕚 !!!@giridhararamane @IaSouthern@SpokespersonMoD pic.twitter.com/UsCKBlXznH
ಪ್ರಕೃತಿಯ ರೌದ್ರಾವತಾರಕ್ಕೆ ಊರುಗಳೇ ಕಣ್ಮರೆ: ವಯನಾಡ್‌ನಲ್ಲಿ ಎಡೆಬಿಡದೆ ಸುರಿದ ಭಾರೀ ಮಳೆಯಿಂದಾಗಿ ಜುಲೈ 30ರಂದು ಮೆಪ್ಪಾಡಿ, ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಭಾರೀ ಭೂಕುಸಿತ ಉಂಟಾಗಿತ್ತು. ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಕೆಲವೆಡೆ ಮನೆಗಳಿದ್ದವು ಎಂಬ ಕುರುಹು ಕೂಡಾ ಸಿಗದಷ್ಟು ಮಣ್ಣು ಹಾಗು ನೀರುಪಾಲಾಗಿವೆ. ಪ್ರಕೃತಿಯ ರೌದ್ರಾವತಾರಕ್ಕೆ ನೀರಿನ ಹರಿವೇ ಬದಲಾಗಿ, ಊರುಗಳನ್ನೇ ಕೊಚ್ಚಿಕೊಂಡು ಹೋಗಿ ಹೊಸ ದಾರಿ ಸೃಷ್ಟಿಯಾಗಿದೆ.
ಇದನ್ನೂ ಓದಿ: ವಯನಾಡ್ ಭೂಕುಸಿತ: ನಿಜಕ್ಕೂ ಏನಾಗಿರಬಹುದು? - Wayanad landslides