ETV Bharat / bharat

ಬಿಲ್​ ಗೇಟ್ಸ್​ಗೆ 'ವೋಕಲ್​ ಫಾರ್​ ಲೋಕಲ್​' ಗಿಫ್ಟ್​ ಹ್ಯಾಂಪರ್​ ನೀಡಿದ ಪ್ರಧಾನಿ ಮೋದಿ - Modi Gift to Bill Gates

ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಅವರಿಗೆ ಭಾರತದ ಸಂಸ್ಕೃತಿ, ಕಲೆ ಪ್ರತಿಬಿಂಬಿಸುವ ಸ್ವದೇಶಿ ಉತ್ಪನ್ನಗಳನ್ನು ಹೊತ್ತ ವೋಕಲ್​ ಫಾರ್​ ಲೋಕಲ್​ ಗಿಫ್ಟ್​ ಹ್ಯಾಂಪರ್​ ಅನ್ನು ಪ್ರಧಾನಿ ಉಡುಗೊರೆಯಾಗಿ ನೀಡಿದರು.

Modi Gift to Bill Gates
ಬಿಲ್​ ಗೇಟ್ಸ್​ಗೆ 'ವೋಕಲ್​ ಫಾರ್​ ಲೋಕಲ್​' ಗಿಫ್ಟ್​ ಹ್ಯಾಂಪರ್​ ನೀಡಿದ ಪ್ರಧಾನಿ ಮೋದಿ
author img

By ETV Bharat Karnataka Team

Published : Mar 29, 2024, 8:14 PM IST

ನವದೆಹಲಿ: ನವದೆಹಲಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮೈಕ್ರೋಸಾಫ್ಟ್​ನ ಸಹ- ಸಂಸ್ಥಾಪಕ ಹಾಗೂ ಸಿಇಒ ಬಿಲ್​ ಗೇಟ್ಸ್​ ಸುದೀರ್ಘವಾದ ಚರ್ಚೆ ಬಳಿಕ ವಿಶೇಷ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು. ಬಿಲ್ ​ಗೇಟ್ಸ್​ ಪ್ರಧಾನಿ ಮೋದಿ ಅವರಿಗೆ ಪೌಷ್ಠಿಕಾಂಶ ಕುರಿತ ಪುಸ್ತಕವನ್ನು ಉಡುಗೊರೆ ನೀಡಿದ್ದು, ಅದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಅವರು 'ವೋಕಲ್​ ಪಾರ್ ಲೋಕಲ್​' ಗಿಫ್ಟ್​ ಹ್ಯಾಂಪರ್​ ಅನ್ನು ಉಡುಗೊರೆಯಾಗಿ ನೀಡಿದರು.

ಬಿಲ್​ ಗೇಟ್ಸ್​ಗೆ 'ವೋಕಲ್​ ಫಾರ್​ ಲೋಕಲ್​' ಗಿಫ್ಟ್​ ಹ್ಯಾಂಪರ್​ ನೀಡಿದ ಪ್ರಧಾನಿ ಮೋದಿ

ಬಿಲ್ ​ಗೇಟ್ಸ್​ಗೆ ನೀಡಿದ ಗಿಫ್ಟ್​ ಹ್ಯಾಂಪರ್​ನಲ್ಲಿ ಕಾಶ್ಮೀರದ ಪಶ್ಮಿನಾ ಶಾಲು ಇತ್ತು. ಅದಲ್ಲದೇ ಭಾರತದ ಕೇಸರಿ, ಪ್ರಸಿದ್ಧ ಚಹಾಪುಡಿಗಳಾದ ಡಾರ್ಜಿಲಿಂಗ್​ ಹಾಗೂ ನೀಲಗಿರಿ ಚಹಾ, ತೂತುಕುಡಿಯ ಮುತ್ತು ಹಾಗೂ ಟೆರಾಕೋಟಾ ಮೂರ್ತಿ, ಭಾರತದ ರೋಮಾಂಚಕ ಸಂಸ್ಕೃತಿ ಪ್ರತಿನಿಧಿಸುವ ಒಂದು ಚಿಕಣಿ ಕಲಾಕೃತಿಯನ್ನು ಬಿಲ್​ ಗೇಟ್ಸ್​ ಅವರಿಗೆ ಪ್ರಧಾನಿ ಉಡುಗೊರೆಯಾಗಿ ನೀಡಿದರು.

ಶುಕ್ರವಾರ ಪ್ರಧಾನಿ ಮೋದಿ ಹಾಗೂ ಬಿಲ್​ಗೇಟ್ಸ್​ ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್, ಯುಪಿಐ ಪಾವತಿ, ತಂತ್ರಜ್ಞಾನ, ಕೋವಿಡ್- 19 ​ನಂತಹ ವಿಷಯಗಳ ಕುರಿತು ಸುದೀರ್ಘವಾದ ಚರ್ಚೆ ನಡೆಸಿದರು. ಮಾತುಕತೆ ವೇಳೆ ಬಿಲ್​ ಗೇಟ್ಸ್​ ಭಾರತದ ತಾಂತ್ರಿಕ ಪ್ರಗತಿಯನ್ನು ಶ್ಲಾಘಿಸಿದರು. ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಆವಿಷ್ಕಾರದಲ್ಲಿ ದೇಶದ ಪ್ರಮುಖ ಪಾತ್ರದ ಬಗ್ಗೆ ಹೊಗಳಿದರು.

ಹಾಗೆಯೇ ನಮೋ ಡ್ರೋನ್​ ದೀದಿ ಯೋಜನೆಯ ಬಗ್ಗೆ ಬಿಲ್​ ಗೇಟ್ಸ್​ ಅವರಿಗೆ ವಿವರಿಸಿದ ಪ್ರಧಾನಿ ಮೋದಿ ದೇಶದಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸಲು ಸಹಾಯ ಮಾಡುವ ಕುರಿತು ಹೇಳಿದರು. ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿರುವ ಕೇಂದ್ರದ ಉಪಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಬಿಲ್​ ಗೇಟ್ಸ್​ ಅವರಿಗೆ ವಿವರಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣಾ ಪ್ರಚಾರ: ಮಂಗಳೂರಿಗೆ ಮೋದಿ, ಶಾ, ಯೋಗಿ ಕರೆತರಲು ಬಿಜೆಪಿ ನಾಯಕರ ಪ್ರಯತ್ನ - LOK SABHA ELECTION 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.