ETV Bharat / bharat

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮ; 51 ಸಾವಿರ ಜನರಿಗೆ ಅನ್ನ ಸಂತರ್ಪಣೆ ಮಾಡಿದ ಅಂಬಾನಿ ಕುಟುಂಬ

author img

By ETV Bharat Karnataka Team

Published : Feb 29, 2024, 1:38 PM IST

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಶೀಘ್ರದಲ್ಲೇ ವಿವಾಹವಾಗಲಿದ್ದು, ಅದಕ್ಕೂ ಮುನ್ನ ಮೂರು ದಿನಗಳ ಕಾಲ ವಿವಾಹಪೂರ್ವ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸಲಾಗಿದ್ದು, ಸಕಲ ರೀತಿಯ ಸಿದ್ಧತೆ ನಡೆದಿದೆ.

Watch: Anant Ambani, Radhika Merchant Serve Food Ahead of Lavish Wedding in Jamnagar
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮ

ಹೈದರಾಬಾದ್: ಅಂಬಾನಿ ಕುಟುಂಬದ ಕಿರಿಯ ಮಗ ಮತ್ತು ಉದ್ಯಮಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ. ಗುಜರಾತ್‌ನ ಜಾಮ್‌ನಗರದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ವಿವಾಹಪೂರ್ವ ಕಾರ್ಯಕ್ರಮಗಳು ಜರುಗಲಿವೆ.

ವಿವಾಹಪೂರ್ವ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಜಾಮ್‌ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ಉದ್ಯಮಿ ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸೇರಿದಂತೆ ಅಂಬಾನಿ ಕುಟುಂಬದ ಇತರ ಸದಸ್ಯರು ಸ್ಥಳೀಯ ಹಳ್ಳಿಗರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ಉಣಬಡಿಸಿದರು. ರಾಧಿಕಾ ಅವರ ಅಜ್ಜಿ ಮತ್ತು ಪೋಷಕರಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುಮಾರು 51 ಸಾವಿರ ಸ್ಥಳೀಯ ನಿವಾಸಿಗಳಿಗೆ ಈ ಊಟದ ವ್ಯವಸ್ಥೆ ಮಾಡಲಾಗಿತ್ತು. ತರಹೇವಾರಿ ಸ್ವೀಟ್​ ಸೇರಿದಂತೆ ಭರ್ಜರಿ ಭೋಜನ ಸವಿದ ಗ್ರಾಮಸ್ಥರು ನವವಧು-ವರರಿಗೆ ಆಶೀರ್ವಾದ ಮಾಡಿದರು. ಕೆಲವರು ಉಡುಗೊರೆ ನೀಡಿ ಅನಂತ್ ಮತ್ತು ರಾಧಿಕಾ ಅವರಿಗೆ ಶುಭಮಸ್ತು ಹೇಳಿದರು. ಭೋಜನದ ನಂತರ ಆಹ್ವಾನಿತರು ಸಾಂಪ್ರದಾಯಿಕ ಜನಪದ ಸಂಗೀತ ಆನಂದಿಸಿದರು. ಖ್ಯಾತ ಗುಜರಾತಿ ಗಾಯಕಿ ಕೀರ್ತಿದನ್ ಗಧ್ವಿ ತಮ್ಮ ಗಾಯನದ ಮೂಲಕ ನೆರದಿದ್ದವರನ್ನು ಆನಂದಗೊಳಿಸಿದರು.

ವಿವಾಹದಂತಹ ಸಂಭ್ರಮಕ್ಕೂ ಮುನ್ನ ಮುಕೇಶ್ ಅಂಬಾನಿ ಅವರ ಕುಟುಂಬವು ಈ ರೀತಿ ಅನ್ನ ಸಂತರ್ಪಣೆ ಸಂಪ್ರದಾಯನ್ನು ನಡೆಸಿಕೊಂಡು ಬಂದಿರುವುದು ವಾಡಿಕೆ. ಈ ಹಿಂದೆ ನೀತಾ ಅಂಬಾನಿ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿಯೂ ದೇಶದಾದ್ಯಂತ ಇದೇ ರೀತಿ ಅನ್ನದಾನ ಆಯೋಜಿಸಲಾಗಿತ್ತು.

ಕೊರೊನಾ ವೇಳೆ ದೇಶದಲ್ಲಿ ಜನರು ಬಿಕ್ಕಟ್ಟಿನಲ್ಲಿದ್ದಂಥ ಸಂದರ್ಭದಲ್ಲೂ ರಿಲಯನ್ಸ್ ಫೌಂಡೇಷನ್, ಅನಂತ್ ಅಂಬಾನಿ ಹಾಗೂ ಅವರ ತಾಯಿ ನೀತಾ ಅಂಬಾನಿ ನೇತೃತ್ವದಲ್ಲಿ, ವಿಶ್ವದ ಅತಿದೊಡ್ಡ ಆಹಾರ ವಿತರಣೆ ಯೋಜನೆಯನ್ನು ಜಾರಿಗೆ ತಂದಿತು. ಆ ಸಂಪ್ರದಾಯವನ್ನು ಮುಂದುವರಿಸಿದ್ದು, ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಅನ್ನ ಸಂತರ್ಪಣೆಯನ್ನು ಪ್ರಾರಂಭಿಸಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಡ್ ಅವರ ವಿವಾಹದ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸಲಾಗಿದ್ದು ಸಕಲ ರೀತಿಯ ಸಿದ್ಧತೆ ನಡೆದಿದೆ. ಈ ಮೂರು ದಿನಗಳ ಕಾಲ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಸುಮಾರು 2,500 ಭಕ್ಷ್ಯಗಳನ್ನು ಬಡಿಸಲಾಗುತ್ತದೆಯಂತೆ. ಶುಕ್ರವಾರದಿಂದ 3ರ ಭಾನುವಾರದ ವರೆಗೆ ಮೂರು ದಿನಗಳ ವರೆಗೆ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ದಕ್ಷಿಣ ಭಾರತ ಶೈಲಿಯ ಬಾಳೆಲೆ ಊಟ ಸವಿದು ಖುಷಿಪಟ್ಟ ಅಮೆರಿಕ ರಾಯಭಾರಿ: ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.