ಹೈದರಾಬಾದ್: ಜಾಗತಿಕ ಉದ್ಯೋಗ ಮಾರುಕಟ್ಟೆಯ ಸವಾಲಿನ ನಡುವೆ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್ಐಟಿ) ವರಾಂಗಲ್ನ ಉತ್ತಮ ಪ್ರದರ್ಶನ ತೋರಿಸಿದೆ. ಇಲ್ಲಿನ ವಿದ್ಯಾರ್ಥಿಯೊಬ್ಬ ವಾರ್ಷಿಕ 88 ಲಕ್ಷ ಪ್ಯಾಕೇಜ್ ಉದ್ಯೋಗ ಪಡೆಯುವ ಮೂಲಕ ಇದೀಗ ಸದ್ದು ಮಾಡಿದ್ದಾರೆ.
ಎನ್ಐಟಿಯ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ (ಇಸಿಇ) ವಿಭಾಗದ ಬಿಟೆಕ್ ವಿದ್ಯಾರ್ಥಿ ರವಿ ಶಾ 88 ಲಕ್ಷ ವಾರ್ಷಿಕ ಪ್ಯಾಕೇಜ್ ಹುದ್ದೆ ಆಫರ್ ಪಡೆದಿದ್ದಾರೆ. ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಪ್ಯಾಕೇಜ್ಗೆ ಆಯ್ಕೆಯಾದ ವಿದ್ಯಾರ್ಥಿ ಇವರಾಗಿದ್ದಾರೆ. ಪಂಜಾಬ್ ಮೂಲದ ಲುಧಿಯಾನದ ನಿವಾಸಿ ಇವರಾಗಿದ್ದು, ಇವರ ತಂದೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಕೋಡಿಂಗ್ನಲ್ಲಿ ಪಡೆದ ತರಬೇತಿ ಮತ್ತು ಕ್ಲಬ್ಗಳಲ್ಲಿ ಪಡೆದ ಮಾರ್ಗಸೂಚಿ ತಾವು ಇಷ್ಟು ದೊಡ್ಡದ ಮಟ್ಟದ ವೇತನ ಪಡೆಯಲು ಸಹಾಯ ಮಾಡಿದೆ ಎಂದಿದ್ದಾರೆ ರವೀಶ್.
ಇವರ ನಂತರದಲ್ಲಿ 12 ವಿದ್ಯಾರ್ಥಿಗಳು ವಾರ್ಷಿಕ 68 ಲಕ್ಷ ರೂ. ಪ್ಯಾಕೇಜ್ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ಎನ್ಐಟಿಯಲ್ಲಿ ನಡೆದ ಕ್ಯಾಂಪಸ್ ನೇಮಕಾತಿಯಲ್ಲಿ ಶೇ 82ರಷ್ಟು ಬಿಟೆಕ್ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದು, 2023-24ರ ಶೈಕ್ಷಣಿಕ ವರ್ಷದ ಒಟ್ಟಾರೆ ಪ್ರದರ್ಶನದ ಶೇ 76ರಷ್ಟಿದೆ. ಕ್ಯಾಂಪಸ್ ನೇಮಕಾತಿಯಲ್ಲಿ ಭಾಗಿಯಾದ ಬಹುತೇಕ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳಾಗಿದೆ. ಇನ್ನು ಕನಿಷ್ಠ ವಾರ್ಷಿಕ ವೇತನ 15.6 ಲಕ್ಷವನ್ನು ವಿದ್ಯಾರ್ಥಿಗಳಿಗೆ ಆಫರ್ ಮಾಡಲಾಗಿತ್ತು.
2023-24ರ ಶೈಕ್ಷಣಿಕ ವರ್ಷದ ಈ ಕ್ಯಾಂಪಸ್ ಸಂದರ್ಶನದಲ್ಲಿ 250 ಖಾಸಗಿ ವಲಯದ ಕಂಪನಿಗಳು ಮತ್ತು 10 ಸಾರ್ವಜನಿಕ ವಲಯದ ಕಂಪನಿಗಳು ಭಾಗಿಯಾಗಿದ್ದವು. 1,483 ಅರ್ಹ ವಿದ್ಯಾರ್ಥಿಗಳು ಸಂದರ್ಶನ ಎದುರಿಸಿದ್ದು, 1,128 ವಿದ್ಯಾರ್ಥಿಗಳು ಉದ್ಯೋಗ ಪಡೆಯುವಲ್ಲಿ ಯಶಸ್ಸು ಕಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಸಾಫ್ಟ್ವೇರ್ ಇಂಜಿನಿಯರಿಂಗ್, ಡೇಟಾ ಅನಾಲಿಸ್ಟ್, ಡೇಟಾ ಸೈನ್ಸ್, ಡೇಟಾ ಇಂಜಿನಿಯರಿಂಗ್, ಪ್ರೊಡಕ್ಟಟ್ ಅನಾಲಿಸಿಸ್, ಪ್ರೊಡಕ್ಟ್ ಇಂಜಿನಿಯರಿಂಗ್, ಕನ್ಸಲ್ಟಂಟ್, ಮ್ಯಾನೇಜ್ಮೆಂಟ್ ಮತ್ತು ಗ್ರಾಜುಯೇಡೆಟ್ ಇಂಜಿನಿಯರಿಮಗ್ ಟ್ರೈನಿಯಂತಹ ಪ್ರಮುಖ ಹುದ್ದೆಗಳಿಗೆ ನೇಮಕಾತಿ ನಡೆಸಲಾಗಿದೆ.
ಇದನ್ನೂ ಓದಿ: ಐಸಿಟಿ ಜೊತೆ ಕೈಜೋಡಿಸಿದ ಇನ್ಫೋಸಿಸ್; 48 ಸಾವಿರ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಉದ್ಯೋಗಾವಕಾಶ