ವಾರಾಣಸಿ, ಉತ್ತರಪ್ರದೇಶ: ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಎರಡು ಮನೆಗಳು ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸಿಕ್ಕಿಬಿದ್ದಿದ್ದ ಏಳು ಮಂದಿಯನ್ನು ನಂತರ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಎಂಟು ಜನರು ಅವಶೇಷಗಳಡಿ ಸಿಲುಕಿದ್ದರು ಆದರೆ, ನಂತರ ಅವರಲ್ಲಿ ಐವರನ್ನು ರಕ್ಷಿಸಲಾಯಿತು ಎಂದು ನಗರ ಪೊಲೀಸ್ ಆಯುಕ್ತ ಮೋಹಿತ್ ಅಗರವಾಲ್ ಮಾಹಿತಿ ನೀಡಿದ್ದಾರೆ.
ಈ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಮನೆಗಳು ಕುಸಿದಿವೆ ಎಂದು ಪೊಲೀಸ್ ಅಧಿಕಾರಿ ಕೌಶಲ್ ಶರ್ಮಾ ಹೇಳಿದ್ದಾರೆ. ಚೌಕ್ ಪ್ರದೇಶದ ಖೋಯಾ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ನಿರ್ಮಿಸಲಾಗಿದ್ದ ಎರಡು ಹಳೆಯ ಮನೆಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಎನ್‌ಡಿಆರ್‌ಎಫ್ ತಂಡವು ಅವಶೇಷಗಳಿಂದ ಐವರನ್ನು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ರವಾನಿಸಿದೆ. ಕಬೀರ್ ಚೌರಾ ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳುವುದು ಮತ್ತು ಗಾಯಾಳುಗಳಿಗೆ ಸಹಾಯ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಎನ್‌ಡಿಆರ್‌ಎಫ್ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಎರಡು ಮನೆಗಳು ಕುಸಿದಿದ್ದು, ಎಂಟು ಮಂದಿ ಸಿಲುಕಿಕೊಂಡಿದ್ದರು. ಕುಸಿದ ಕಟ್ಟಡದಿಂದ ಇಬ್ಬರು ತಾವಾಗಿಯೇ ಹೊರಬರುವಲ್ಲಿ ಯಶಸ್ವಿಯಾದರು ಮತ್ತು ಏಳು ಮಂದಿಯನ್ನು ನಂತರ ರಕ್ಷಣೆ ಮಾಡಲಾಯಿತು ಎಂದು ವಾರಾಣಸಿ ವಿಭಾಗದ ಕಮಿಷನರ್ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲಿ ಶ್ವಾನ ದಳವು ಬೀಡುಬಿಟ್ಟಿದ್ದು, ಅವಶೇಷಗಳ ಅಡಿ ಸಿಲುಕಿದವರನ್ನು ಹುಡುಕಲು ನೆರವು ನೀಡಿತು.
ಮನೆಗಳ ಕುಸಿತದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗುವ ಗೇಟ್ ಸಂಖ್ಯೆ 4 ಅನ್ನು ಮುಚ್ಚಲಾಗಿದೆ, ಗೇಟ್ ಸಂಖ್ಯೆ 1 ಮತ್ತು 2 ರಿಂದ ಸಂದರ್ಶಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಘಟನೆಯ ಸ್ಥಳದಲ್ಲಿ ಅಧಿಕಾರಿಗಳು ಭದ್ರತಾ ಉದ್ದೇಶಗಳಿಗಾಗಿ ಮಾಧ್ಯಮಗಳಿಗೂ ನಿರ್ಬಂಧ ವಿಧಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಇದನ್ನು ಓದಿ: 22ನೇ ವಯಸ್ಸಿನಲ್ಲೇ IPS ಆಗಿದ್ದ ಅಧಿಕಾರಿ ಕಾಮ್ಯಾ ಮಿಶ್ರಾ ರಾಜೀನಾಮೆ: ಕಾರಣ ಏನು ಅಂತೀರಾ? - IPS KAMYA MISHRA RESIGNED