ಫತೇಪುರ್ (ಉತ್ತರ ಪ್ರದೇಶ): ಫತೇಪುರ್ ಜಿಲ್ಲೆಯ ಡಿಎಂ( ಜಿಲ್ಲಾಧಿಕಾರಿ) ಸಿ.ಇಂದುಮತಿ ದೂರುದಾರರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಸೋಮವಾರ ನಡೆದಿದೆ. ನೀನು ನನ್ನನ್ನು ತಳ್ಳಿ ಮುಂದೆ ಸಾಗುತ್ತಿರುವೆ. ನಾನು ನಿಂತಿದ್ದೇನೆ, ಅದು ಕಾಣಿಸುತ್ತಿಲ್ಲವೇ ನಿಮಗೆ ಎಂದು ಡಿಎಂ ಛೀಮಾರಿ ಹಾಕಿದರು. ಈ ವೇಳೆ ಡಿ.ಎಂ.ಇಂದುಮತಿ ತುಂಬಾ ಕೋಪಗೊಂಡಿದ್ದರು. ಡಿಎಂ ದೂಡಾ ಕಚೇರಿ ಪರಿಶೀಲಿಸುತ್ತಿದ್ದಾಗ, ಈ ವೇಳೆ ದೂರುದಾರರು ಅಲ್ಲಿಗೆ ಬಂದಿದ್ದರು. ಮುಂದೆ ಸಾಗುತ್ತಿದ್ದ ಡಿಎಂ ಅವರನ್ನು ತಳ್ಳಲಾಗಿದೆ. ಈ ವೇಳೆ ಕೋಪಗೊಂಡ ಡಿಎಂ, ದೂರುದಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ತಳ್ಳಿದವನ ವಿರುದ್ಧ ಕಿಡಿಕಾರಿದರ ಜಿಲ್ಲಾಧಿಕಾರಿ: ನಂತರ ಡಿಎಂ ಗರಂ ಆಗಿ, 'ನಿನಗೆ ಹುಚ್ಚು ಹಿಡಿದಿದೆಯೇ? ಒಬ್ಬ ಮಹಿಳೆ ನಿಂತಿದ್ದಾಳೆ ಮತ್ತು ನೀವು ತಳ್ಳುತ್ತಾ ಮುಂದೆ ಹೋಗುತ್ತಿದ್ದೀರಿ. ನೀನು ಯಾರು, ಯಾವ ಉದ್ದೇಶಕ್ಕೆ ಬಂದಿದ್ದೀಯಾ? ಎಂದು ದೂರುದಾರನನ್ನು ಗದರಿಸಿದ್ದಾರೆ. ಡಿಎಂ ಸಿ.ಇಂದುಮತಿ ಅವರ ಈ ವರ್ತನೆ 46 ಸೆಕೆಂಡ್ ವಿಡಿಯೋದಲ್ಲಿ ಕಾಣಬಹುದು.
ಸಬ್ ರಿಜಿಸ್ಟ್ರಾರ್‌ಗೆ ಛೀಮಾರಿ ಹಾಕಿದ ಡಿಸಿ: ಸೋಮವಾರ ಡಿಎಂ ಸಿ.ಇಂದುಮತಿ ಅವರು ದಿಢೀರ್ ದುಡಾ ಕಚೇರಿಗೆ ಆಗಮಿಸಿದ್ದರು. ಅವರ ಜೊತೆ ಎಡಿಎಂ (ಆಡಳಿತ) ಅವ್ನಿಶ್ ತ್ರಿಪಾಠಿ, ಎಡಿಎಂ (ಹಣಕಾಸು) ವಿನಯ್ ಪಾಠಕ್ ಮತ್ತು ಎಸ್‌ಡಿಎಂ ಸದರ್ ಕೂಡ ಇದ್ದರು. ಅಧಿಕಾರಿಗಳು ಮೊದಲು ಸಬ್ ರಿಜಿಸ್ಟ್ರಾರ್ ಹಾಗೂ ದುಡಾ ಕಚೇರಿಗೆ ಭೇಟಿ ನೀಡಿದರು. ಡಿಎಂ ದಿಢೀರ್ ಆಗಮನದಿಂದ ಕಚೇರಿಗಳಲ್ಲಿ ಗೊಂದಲ ಉಂಟಾಯಿತು. ಹಲವರು ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಡಿಎಂ ಅವರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಳೆಯ ದಾಖಲೆಗಳನ್ನು ಪರಿಶೀಲಿಸಿದರು. ಆಸ್ತಿ ಮಾರಾಟ ಮತ್ತು ಖರೀದಿ ಮಾಡಲು ಬಂದವರನ್ನು ವಿಚಾರಿಸಿದರು. ಆವರಣದಲ್ಲಿ ಅಶುಚಿತ್ವ ಕಂಡು ಬಂದಿದ್ದಕ್ಕೆ ಸಬ್ ರಿಜಿಸ್ಟ್ರಾರ್‌ಗೆ ಛೀಮಾರಿ ಹಾಕಿದರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೂರುಗಳು ಬಂದಿದ್ದರಿಂದ ಈ ತಪಾಸಣೆ ನಡೆಸಲಾಗಿದೆ ಎಂದು ಎಡಿಎಂ ಅವನೀಶ್ ತ್ರಿಪಾಠಿ ತಿಳಿಸಿದ್ದಾರೆ. ಕೆಲ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿದ್ದು, ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ಕಚೇರಿಗಳ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಡಿಎಂ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
2012ರ ಬ್ಯಾಚ್‌ನ ಐಎಎಸ್ ಅಧಿಕಾರಿ ಸಿ.ಇಂದುಮತಿ ತಮಿಳುನಾಡಿನ ಪೂಲಂಪಟ್ಟಿ ಗ್ರಾಮದವರು. 1 ಅಕ್ಟೋಬರ್ 1984 ರಂದು ಜನಿಸಿದ ಸಿ.ಇಂದುಮತಿ ಅವರು ಎಂಜಿನಿಯರಿಂಗ್ ಮಾಡಿದ್ದಾರೆ. ಇದರ ನಂತರ, ಅವರು UPSC ಪರೀಕ್ಷೆಯಲ್ಲಿ 151ನೇ ಸ್ಥಾನ ಗಳಿಸಿದರು. 2016 ಮತ್ತು 2017ರ ಅವಧಿಯಲ್ಲಿ ಸಿ. ಇಂದುಮತಿ ಅವರು ಫತೇಪುರ್ ಜಿಲ್ಲೆಯ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದರು.
ವಿಷಯ ತಾರಕಕ್ಕೇರಿದಾಗ ದೂಡಾ ಕಚೇರಿಯ ತಪಾಸಣೆ ವೇಳೆ ಗ್ಯಾಲರಿಯಲ್ಲಿದ್ದ ಡಿಎಂ ಅವರನ್ನು ತಳ್ಳಿ ವ್ಯಕ್ತಿಯೊಬ್ಬ ಹೊರಬರಲು ಯತ್ನಿಸುತ್ತಿದ್ದ ಎಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರೆಸ್ನೋಟ್ ಹೊರಡಿಸಲಾಗಿತ್ತು. ಆತನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಸರಿಯಾದ ಉತ್ತರ ನೀಡಲಿಲ್ಲ. ದುಡಾ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಈ ವ್ಯಕ್ತಿ ಈ ಹಿಂದೆ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.
ಕಪಾಳಮೋಕ್ಷ ಮಾಡಿದವರ ವಿರುದ್ಧ ಪ್ರಕರಣ ದಾಖಲು: ಇದೀಗ ಕಪಾಳಮೋಕ್ಷ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಿದ್ಧಾಂತ್ ಪ್ರತಾಪ್ ಸಿಂಗ್ ಅವರ ದೂರಿನ ಮೇರೆಗೆ ಸದರ್ ಕೊತ್ವಾಲಿಯಲ್ಲಿ ಸೆಕ್ಷನ್ 352 ಬಿಎನ್‌ಎಸ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದರಲ್ಲಿ ಕೊಳಕು ಪದಗಳನ್ನು ಅಥವಾ ನಿಂದನೀಯ ಭಾಷೆಯನ್ನು ಅವಮಾನಿಸಲು ಅಥವಾ ಕಿರುಕುಳ ನೀಡಲು ಬಳಸುವ ಪದ ಬಳಕೆ ಆರೋಪ. ಇನ್ನೊಬ್ಬ ವ್ಯಕ್ತಿಗೆ ದೈಹಿಕ ಹಾನಿ ಅಥವಾ ಆಸ್ತಿ ಹಾನಿಯನ್ನುಂಟುಮಾಡುವ ಬೆದರಿಕೆಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೀರಾ ಗ್ರೂಪ್ ಮುಖ್ಯಸ್ಥೆ ನೌಹೀರಾ ಶೇಖ್ ಬಂಧನ ಪ್ರಕರಣ: ಜಪ್ತಿಯಾದ ದಾಖಲೆಗಳ ಬಗ್ಗೆ ಇಡಿ ಮಾಹಿತಿ - ED