ETV Bharat / bharat

ದೆಹಲಿಯಲ್ಲಿ ಯುಪಿಯ ಮೋಸ್ಟ್​ ವಾಂಟೆಡ್‌​​ ಲೇಡಿ ಡಾನ್​ ಬಂಧನ - Lady Don Arrested

ದೀಪಕ್​ ಅಗ್ರೊಲ್-ಕರ್ಮ್​ವೀರ್​ ಕಾಲ ಎಂಬ ನಟೋರಿಯಸ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಈ ಮಹಿಳೆಯನ್ನು ಹುಡುಕಿ ಕೊಟ್ಟವರಿಗೆ ಪೊಲೀಸರು 25 ಸಾವಿರ ರೂ ಬಹುಮಾನ ಘೋಷಿಸಿದ್ದರು.

up-woman-wanted-in-murder-case-arrested-in-delhi
ಸಾಂದರ್ಭಿಕ ಚಿತ್ರ (ETV Bharat)
author img

By PTI

Published : May 28, 2024, 1:20 PM IST

ನವದೆಹಲಿ: ಕೊಲೆ ಪ್ರಕರಣ ಸಂಬಂಧ 25 ಸಾವಿರ ರೂಪಾಯಿ ಘೋಷಿತ ಬಹುಮಾನ ಹೊಂದಿದ್ದ 22 ವರ್ಷದ ಲೇಡಿ ಡಾನ್‌ವೋರ್ವಳನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಕೈಲಿ ತನ್ವರ್ ಎಂಬಾಕೆಯ ವಿರುದ್ಧ ವಿವಿಧೆಡೆ ಹಲವು ಪ್ರಕರಣಗಳು ದಾಖಲಾಗಿವೆ.

ಉತ್ತರ ಪ್ರದೇಶದ ಗಾಜಿಯಾಬಾದ್​ ನಿವಾಸಿಯಾಗಿರುವ ಕೈಲಿ ತನ್ವರ್​, ದೀಪಕ್​ ಅಕ್ರೊಲಾ-ಕರ್ಮವೀರ್​​ ಕಾಲಾ ಎಂಬ ನಟೋರಿಯಸ್ ಗ್ಯಾಂಗ್​ನಲ್ಲಿ ಗುರುತಿಸಿಕೊಂಡಿದ್ದಳು. ಇದೀಗ ಈಕೆಯನ್ನು ದೆಹಲಿಯ ಫತೇಪುರ್​ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.

ಉತ್ತರ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಪೊಲೀಸರು ಈಕೆಗೆ ಶೋಧ ನಡೆಸುತ್ತಿದ್ದರು. ದೆಹಲಿಯ ಫತೇಫುರ್​​ ಬಸ್​ ನಿಲ್ದಾಣದ ಸಮೀಪ ತನ್ವರ್​​ ವಾಸವಿದ್ದ ಬಗ್ಗೆ ಗುಪ್ತಚರ ಮೂಲಗಳಿಂದ ಸಿಕ್ಕ ಮಾಹಿತಿ ಆಧರಿಸಿ ಕೊನೆಗೂ ಆರೋಪಿಯನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್​ ಆಯುಕ್ತ (ವಿಶೇಷ ಘಟಕ) ಅಮಿತ್​ ಕೌಶಿಕ್​ ತಿಳಿಸಿದರು.

ನಟೋರಿಯಸ್​ ಗ್ಯಾಂಗ್​ನಲ್ಲಿ ಗುರುತಿಸಿಕೊಂಡಿರುವ ತನ್ವರ್​, ಪೊಲೀಸ್​ ವಿಚಾರಣೆ ವೇಳೆ ಹತ್ಯೆಗೆ ಕಾರಣ ಬಿಚ್ಚಿಟ್ಟಿದ್ದಾಳೆ. ಕೊಲೆಗೆ ಹಳೇ ದ್ವೇಷವೇ ಪ್ರಮುಖ ಕಾರಣವಾಗಿತ್ತು ಎಂದು ಆಕೆ ತಿಳಿಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿ-ವಾರಣಾಸಿ ವಿಮಾನಕ್ಕೆ ಬಾಂಬ್ ಬೆದರಿಕೆ: ತುರ್ತು ನಿರ್ಗಮನ ದ್ವಾರದಿಂದ ಹೊರಬಂದ ಪ್ರಯಾಣಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.