ETV Bharat / bharat

ಯುಪಿ: ಜನರಲ್ಲಿ ಆತಂಕ ಮೂಡಿಸಿದ್ದ 5ನೇ ತೋಳ ಸೆರೆ; ಮುಂದುವರೆದ ಕಾರ್ಯಾಚರಣೆ - Wolf Captured

author img

By PTI

Published : Sep 10, 2024, 2:31 PM IST

ಘಘ್ರಾ ನದಿ ತೀರದಲ್ಲಿ ಪಗ್​ ಮಾರ್ಗ್​​​ ತಂತ್ರದ ಮೂಲಕ ಐದನೇ ತೋಳವನ್ನು ಸೆರೆ ಹಿಡಿಯಲಾಗಿದೆ.

up-forest-department-captures-fifth-killer-wolf
ತೋಳ (ANI)

ಬಹ್ರೈಚ್(ಉತ್ತರ ಪ್ರದೇಶ): ಕಳೆದ ಮೂರು ತಿಂಗಳಿಂದ ಜನರ ಮೇಲೆ ದಾಳಿ ಮಾಡುತ್ತಿದ್ದ ನರಭಕ್ಷಕ ತೋಳಗಳನ್ನು ಹಿಡಿಯುವ ಆಪರೇಷನ್​ ಬೇಡಿಯಾ ಅಡಿಯಲ್ಲಿ ಐದನೇ ತೋಳವನ್ನು ಸೆರೆ ಹಿಡಿಯಲಾಗಿದ್ದು, ಇನ್ನೊಂದು ತೋಳಕ್ಕೆ ಬಲೆ ಬೀಸಲಾಗಿದೆ. ಜುಲೈ ಮಧ್ಯಭಾಗದಲ್ಲಿ ಇಲ್ಲಿನ ಅರಣ್ಯದಂಚಿನ ಗ್ರಾಮ ಪ್ರದೇಶಗಳಲ್ಲಿ ದಾಳಿ ಮಾಡುತ್ತಿದ್ದ ಆರು ತೋಳಗಳು ಇದುವರೆಗೆ 8 ಜನರನ್ನು ಸಾಯಿಸಿದ್ದು, 20ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿವೆ.

ಹರಬ್ನಸ್ಪುರ್​ ಗ್ರಾಮದ ಘಘ್ರಾ ನದಿ ತೀರದಲ್ಲಿ ಪಗ್ಮಾರ್ಕ್​ ತಂತ್ರದ ಮೂಲಕ ಐದನೇ ತೋಳವನ್ನು ಹಿಡಿಯಲಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಅಜಿತ್​ ಸಿಂಗ್​ ತಿಳಿಸಿದ್ದಾರೆ.

ಆರು ತೋಳಗಳಲ್ಲಿ ಐದು ಸಿಕ್ಕಿವೆ. ತಪ್ಪಿಸಿಕೊಂಡಿರುವ ಆರನೇ ತೋಳ ಅಲ್ಫಾ ಗುಂಪಿನ ನಾಯಕನಾಗಿರಬಹುದು. ಅದು ಸೆರೆ ಸಿಗುವವರೆಗೆ ಸಮಸ್ಯೆ ತಪ್ಪಿದ್ದಲ್ಲ. ಅದನ್ನೂ ಕೂಡ ಶೀಘ್ರದಲ್ಲೇ ಸೆರೆ ಹಿಡಿಯಲಾಗುವುದು ಎಂದರು.

ಅದರೆ, ಈ ವಿಚಾರವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರೇಣು ಸಿಂಗ್​ ನಿರಾಕರಿಸಿದ್ದು, ಆರನೇ ತೋಳ ಕುಂಟ ತೋಳವಾಗಿದೆ. ಇದು ನಿಜವೂ ಆಗಲಾರದು. ಈಗ ಸೆರೆ ಸಿಕ್ಕಿರುವುದು ಹೆಣ್ಣು ತೋಳ ಎಂದಿದ್ದಾರೆ.

ಸೋಮವಾರ ರಾತ್ರಿ ಈ ಪ್ರದೇಶದಲ್ಲಿ ತೋಳದ ಕಾಲಿನ ಹೆಜ್ಜೆ ಗುರುತು ಆಧರಿಸಿ ಅರಣ್ಯ ಇಲಾಖೆ ತಂಡ ಸೆರೆಗೆ ಸಿದ್ದತೆ ನಡೆಸಿತ್ತು. ಆದಾಗ್ಯೂ ರಾತ್ರಿ ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ನಾಲ್ಕು ತಂಡ ಈ ಪ್ರದೇಶದಲ್ಲಿ ತೋಳ ಸೆರೆ ಹಿಡಿದಿದೆ. ಈ ವೇಳೆ ತೋಳ ಪರಾರಿಯಾಗಲು ಯತ್ನಿಸಿತ್ತು. ಆದರೆ, ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯದಿಂದ ನೆಟ್​ ಮೂಲಕ ಸೆರೆ ಹಿಡಿಯಲಾಗಿದ್ದು, ಬೋನಿಗೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಗಸ್ಟ್​ 29ರಂದು ನಾಲ್ಕನೇ ತೋಳ ಸೆರೆ ಹಿಡಿದ ಬಳಿಕ ಉಳಿದ ಎರಡು ತೋಳಗಳು ಎಚ್ಚರವಹಿಸಿದ್ದವು. ಈ ಹಿನ್ನೆಲೆಯಲ್ಲಿ ಐದನೇ ತೋಳ ಸೆರೆಗೆ ಹಳೆಯ ಪಗ್​ಮಾರ್ಕ್​ ತಂತ್ರ ಬಳಸಿ ಹಿಡಿಯಲಾಗಿದೆ. ಇದೀಗ ಸೆರೆ ಹಿಡಿದಿರುವ ತೋಳವನ್ನು ವನ್ಯಜೀವಿ ತಜ್ಞರ ಸಲಹೆ ಮೇರೆಗೆ ಮೃಗಾಲಯಕ್ಕೆ ಕಳುಹಿಸಲಾಗುವುದು ಎಂದರು.

ಬಹ್ರೈಚ್​ ಜಿಲ್ಲೆಯಲ್ಲಿಯ ಮಹಸಿ ತಹಶೀಲ್​​ನಲ್ಲಿ ತೋಳಗಳು ದಾಳಿ ನಡೆಸಿದ್ದು, ಜುಲೈ 17ರಿಂದ ಆಪರೇಷನ್​ ಬೇಡಿಯಾ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಿತ್ತು. ತೋಳಗಳ ಹಾವಳಿ ತಡೆಯಲು ಮತ್ತು ಅವುಗಳ ಚಲನವಲನ ಕಂಡುಹಿಡಿಯಲು ಡ್ರೋನ್‌ಗಳನ್ನೂ ಬಳಸಲಾಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮುಂದುವರಿದ ತೋಳಗಳ ದಾಳಿ: ಬಿಹಾರದಲ್ಲೂ ಹೆಚ್ಚಿದ ಉಪಟಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.