ಲಕ್ನೋ (ಉತ್ತರಪ್ರದೇಶ): ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಡಿಎಸ್‌ಪಿಯೊಬ್ಬರಿಗೆ ಯುಪಿ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ. ಈ ಕೃತ್ಯ ಎಸಗಿದ ಅವರಿಗೆ ಹಿಂಬಡ್ತಿ ನೀಡಿ ಕಾನ್ಸ್ಟೇಬಲ್ ಹುದ್ದೆಗೆ ನಿಯೋಜಿಸುವ ಮೂಲಕ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಕೃಪಾ ಶಂಕರ್ ಕನೌಜಿಯಾ ಅವರು ಕಾನ್ಸ್ಟೇಬಲ್ ಹುದ್ದೆಯಿಂದ ಹಂತ ಹಂತವಾಗಿ ಏರಿ ಡಿಎಸ್‌ಪಿ ಹುದ್ದೆ ಪಡೆದಿದ್ದರು. ಆದರೆ ಮೂರು ವರ್ಷಗಳ ಹಿಂದೆ ಮಹಿಳೆಯೊಂದಿಗಿನ ವಿವಾಹೇತರ ಸಂಬಂಧದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಘಟನೆಯ ವೇಳೆ ಅವರು ಉನ್ನಾವೊದಲ್ಲಿ ವೃತ್ತ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಾರಣ ನೀಡಿ ಎಸ್ಪಿ ಅನುಮತಿ ಪಡೆದು ರಜೆ ತೆಗೆದುಕೊಂಡಿದ್ದರು. ಮನೆಗೆ ಹೋಗುವ ಬದಲು ಕಾನ್ಪುರದ ಹೋಟೆಲ್ವೊಂದಕ್ಕೆ ಮಹಿಳಾ ಕಾನ್ಸ್ಟೇಬಲ್ ಜೊತೆ ತೆರಳಿದ್ದರು. ಈ ವೇಳೆ ತಮ್ಮ ಫೋನ್‌ಗಳನ್ನು ಸ್ವಿಚ್ಡ್ ಆಫ್ ಮಾಡಿದ್ದರು.
DSP Demoted To Constable: ಕನೌಜಿಯಾ ಅವರ ಫೋನ್ ಲಭ್ಯವಾಗದ ಕಾರಣ, ಅವರ ಪತ್ನಿ ಉನ್ನಾವ್ ಎಸ್ಪಿಯನ್ನು ಸಂಪರ್ಕಿಸಿದರು. ಪೊಲೀಸರು ತಕ್ಷಣ ಈ ಬಗ್ಗೆ ತನಿಖೆ ಆರಂಭಿಸಿದರು. ಆಗ ಕಾನ್ಪುರದ ಹೋಟೆಲ್‌ನಲ್ಲಿ ಕೃಪಾ ಶಂಕರ್ ಫೋನ್‌ನ ಕೊನೆಯ ಬಾರಿಗೆ ಸ್ವಿಚ್ಡ್ ಆಫ್ ಆಗಿರುವುದು ಪತ್ತೆ ಆಗಿತ್ತು. ತಕ್ಷಣ ಅಲ್ಲಿಗೆ ಬಂದ ಪೊಲೀಸರು ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದರು. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅಂದಿನ ಲಖನೌ ರೇಂಜ್ ಐಜಿಪಿ ತನಿಖೆಗೆ ಆದೇಶಿಸಿದ್ದರು.
ಅಶಿಸ್ತಿನ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಇತ್ತೀಚೆಗಷ್ಟೇ ತನಿಖೆಯನ್ನು ಪೂರ್ಣಗೊಳಿಸಿದ ಪೊಲೀಸರು, ಗೋರಖ್‌ಪುರ ಬೆಟಾಲಿಯನ್‌ನ 'ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ'ಯಲ್ಲಿ ಕಾನ್ಸ್ಟೇಬಲ್ ಆಗಿ ಪದವಿಯಿಂದ ಕೆಳಗಿಳಿಸಿದರು.