ETV Bharat / bharat

ಭೀಕರ ರಸ್ತೆ ಅಪಘಾತ: ಐವರು ಸಾವು - BUS ACCIDENT

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಮೃತಪಟ್ಟ ಘಟನೆ ನಡೆದಿದೆ.

ಭೀಕರ ರಸ್ತೆ ಅಪಘಾತ
ಭೀಕರ ರಸ್ತೆ ಅಪಘಾತ (ETV Bharat)
author img

By ANI

Published : Nov 9, 2024, 10:07 AM IST

ಫಿರೋಜಾಬಾದ್ (ಉತ್ತರ ಪ್ರದೇಶ): ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ ತಡರಾತ್ರಿ ನಿಂತಿದ್ದ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಶಿಕೋಹಾಬಾದ್‌ನ ಜಂಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಫಿರೋಜಾಬಾದ್ ಗ್ರಾಮಾಂತರ ಪೊಲೀಸ್ ಅಧೀಕ್ಷಕ (ಎಸ್‌ಪಿ) ಅಖಿಲೇಶ್ ಭಡೋರಿಯಾ ಮಾಹಿತಿ ನೀಡಿದ್ದಾರೆ.

ಮೃತರು ಲಕ್ನೋ ನಿವಾಸಿಗಳಾಗಿದ್ದು, ಲಕ್ನೋದ ಮೊಹದ್ದೀನ್‌ಪುರದ ನಿವಾಸಿ ಸಂದೀಪ್ ಎಂಬುವರು ನಾಲ್ಕು ವರ್ಷದ ತಮ್ಮ ಪುತ್ರನ ಮುಡಿ ಕೊಡುವ ಸಂಸ್ಕಾರ ಮುಗಿಸಿಕೊಂಡು ಮಥುರಾದಿಂದ ಹಿಂತಿರುಗುತ್ತಿದ್ದರು. ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಥಾನಾ ನಾಸಿರ್‌ಪುರ ಬಳಿ ನಿಂತಿದ್ದ ಟ್ರಕ್​ಗೆ ಇವರ ಬಸ್​ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಸ್​ ಚಾಲಕನ ನಿರ್ಲಕ್ಷ್ಯ ಹಾಗೂ ನಿಯಂತ್ರಣ ಕಳೆದುಕೊಂಡಿರುವುದು ಘಟನೆಗೆ ಕಾರಣ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಮೊಹದ್ದೀನ್‌ಪುರದ ಸಂದೀಪ್ ಅವರ ಕುಟುಂಬವು ತಮ್ಮ ನಾಲ್ಕು ವರ್ಷದ ಮಗ ಸಿದ್ಧಾರ್ಥ್‌ನ ಕೇಶ ಮುಂಡನೆಗಾಗಿ ಬಸ್​ನಲ್ಲಿ ಮಥುರಾಗೆ ಹೋಗಿತ್ತು. ಕುಟುಂಬದವರು ಮತ್ತು ಸಂಬಂಧಿಕರು ಸೇರಿ ಸುಮಾರು 20 ಜನರಿದ್ದರು. ಮಥುರಾದಿಂದ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಪಘಾತ ಭೀಕರವಾಗಿತ್ತು. ಜನರ ಕಿರುಚಾಟ ಕೇಳಿ ಯಾರೋ ಪೊಲೀಸ್ ನಿಯಂತ್ರಣ ಕೊಠಡಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಯುಪಿಇಡಿಎ ತಂಡ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್‌ನಲ್ಲಿ ಸಿಲುಕಿದ್ದ ಜನರನ್ನು ಹೊರತೆಗೆದು ನಂತರ ಅವರನ್ನು ಚಿಕಿತ್ಸೆಗಾಗಿ ಶಿಕೋಹಾಬಾದ್‌ನ ಜಂಟಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನೆಯಲ್ಲಿ ಐವರು ಅಸುನೀಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸಂದೀಪ್ ಅವರ ಪತ್ನಿ ನೀತು (42), ಮಗಳು ಲುವಶಿಖಾ (13) ಮತ್ತು ನೈತಿಕ್ ಸಜ್ಜನ್ (15) ಎಂಬುವರು ಸ್ಥಳದಲ್ಲೇ ಮೃತಪಟ್ಟರೆ, ಚಿಕಿತ್ಸೆ ವೇಳೆ ಇತರ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್: 36 ಪ್ರಯಾಣಿಕರ ಸಾವು, ಪರಿಹಾರ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.