ಅಲ್ವಾರ್ (ರಾಜಸ್ಥಾನ): ಇಲ್ಲಿನ ಮನೆಯೊಂದು ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಹರಿಯಾಣ ಮತ್ತು ರಾಜಸ್ಥಾನ ಗಡಿಭಾಗದಲ್ಲಿರುವ ಈ ಕಟ್ಟಡ ಎರಡೂ ರಾಜ್ಯಗಳಿಗೆ ಸೇರಿದ್ದಾಗಿದೆ. ಒಂದು ಬಾಗಿಲು ಹರಿಯಾಣ ಭೂಪ್ರದೇಶಕ್ಕೆ ಸೇರಿದ್ದರೆ, ಇನ್ನೊಂದು ಬಾಗಿಲು ರಾಜಸ್ಥಾನದ ಭೂಪ್ರದೇಶದಲ್ಲಿ ಬರುತ್ತದೆ. ಇದಕ್ಕೆ ವಿದ್ಯುತ್ ಮತ್ತು ನೀರು ಕೂಡ ಎರಡೂ ರಾಜ್ಯಗಳಿಂದ ಬರುತ್ತದೆ.
ಅಲ್ವಾರ್‌ನ ಭಿವಾಂಡಿ ಎಂಬಲ್ಲಿ ಈ ವಿಶೇಷ ಮನೆ ಇದೆ. ಎರಡೂ ರಾಜ್ಯಗಳ ಗಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮನೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇನ್ನೊಂದು ಪಾರ್ಶ್ವದಲ್ಲಿ ನೀರವ ಮೌನ. ಕಾರಣ ಇದು ರಾಜಸ್ತಾನಕ್ಕೆ ಸೇರಿದ್ದಾಗಿದೆ.
ಈ ಮನೆಯಲ್ಲಿ ಎರಡು ಕುಟುಂಬಗಳು ವಾಸಿಸುತ್ತಿವೆ. ಈ ಪೈಕಿ ಒಂದು ಕುಟುಂಬ ಹರಿಯಾಣದಲ್ಲಿ ಸಕ್ರಿಯವಾಗಿದ್ದರೆ, ಇನ್ನೊಂದು ಕುಟುಂಬ ರಾಜಸ್ಥಾನ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಭಿವಾಡಿಯ ಧಾರುಹೇರಾ ಗಡಿಯಲ್ಲಿ ಸುಮಾರು 4 ಸಾವಿರ ಚದರ ಮೀಟರ್‌ನಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಎರಡೂ ರಾಜ್ಯಗಳಿಗೂ ಈ ಮನೆ ಸೇರಿದೆ. ಕುಟುಂಬದ ವ್ಯಕ್ತಿಯಾದ ಕೃಷ್ಣ ದೈಮಾ ಎಂಬುವರು ಹರಿಯಾಣದ ಧರುಹೆರಾದ ವಾರ್ಡ್ ನಂ.3 ರಿಂದ ಎರಡು ಬಾರಿ ಕೌನ್ಸಿಲರ್ ಆಗಿದ್ದಾರೆ. ಹವಾಸಿನ್ ಎಂಬಾತ ಸತತ ಮೂರನೇ ಬಾರಿಗೆ ರಾಜಸ್ಥಾನದ ಭಿವಾಡಿ ಪುರಸಭೆಯ ವಾರ್ಡ್ ನಂ. 2 ರ ಕೌನ್ಸಿಲರ್ ಆಗಿದ್ದಾರೆ.
ಎರಡೂ ರಾಜ್ಯಗಳಿಂದ ಸೌಲಭ್ಯ: ರಾಜಸ್ಥಾನದ ಭಿವಾಂಡಿ ಮತ್ತು ಹರಿಯಾಣದ ಗಡಿಯಲ್ಲಿ ನಿರ್ಮಿಸಲಾದ ಈ ಮನೆಗೆ ರಾಜಸ್ಥಾನದಿಂದ ನೀರು ಮತ್ತು ಹರಿಯಾಣದಿಂದ ವಿದ್ಯುತ್ ಪೂರೈಕೆಯಾಗುತ್ತದೆ. ಎರಡೂ ಕುಟುಂಬಗಳು ಪೂರ್ವಜರ ಕಾಲದಿಂದಲೂ ಇದೇ ಮನೆಯಲ್ಲಿ ವಾಸವಾಗಿದ್ದಾರೆ. ಸದ್ಯ ಇಲ್ಲಿ ಎರಡು ಕುಟುಂಬದ 10 ಮಂದಿ ಇದ್ದೇವೆ. ಭಿವಾಂಡಿ ಮುನ್ಸಿಪಲ್ ಕೌನ್ಸಿಲರ್ ಆಗಿರುವ ಹವಾಸಿನ್ ಅವರಿಗೆ ಈ ಮನೆಯು ವಿಶೇಷ ಎಂದೆನಿಸುತ್ತಿಲ್ಲ. ಕಾರಣ ಇದು ಅವರಿಗೆ ಹೊಸತಲ್ಲ. ಆದರೆ, ಜನರು ಈ ಬಗ್ಗೆ ಕೇಳಿದಾಗ ಆಶ್ಚರ್ಯವಾಗುತ್ತದೆ ಎನ್ನುತ್ತಾರೆ.
ಹವಾಸಿನ್ ಅವರು ಹೇಳುವಂತೆ, ಇನ್ನೊಂದು ಕುಟುಂಬವು ನಮ್ಮ ಚಿಕ್ಕಪ್ಪನದ್ದಾಗಿದೆ. ಅವರು ಮೊದಲಿನಿಂದಲೂ ಹರಿಯಾಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಎರಡು ಬಾರಿ ವಾರ್ಡ್ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ನನ್ನು ಕಾಲೇಜು ವಿದ್ಯಾಭ್ಯಾಸ ಎಲ್ಲವೂ ರಾಜಸ್ಥಾನದಲ್ಲಿ ಮುಗಿದ ಕಾರಣ, ಭಿವಾಂಡಿಯಿಂದ ವಾರ್ಡ್ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿದೆ. ಸತತ ಮೂರನೇ ಬಾರಿಗೆ ಕೌನ್ಸಿಲರ್ ಆಗಿದ್ದೇನೆ. ಆದ್ದರಿಂದ ನಮ್ಮ ಕುಟುಂಬಕ್ಕೆ ಎರಡೂ ರಾಜ್ಯಗಳ ಸಂಬಂಧವಿದೆ ಎಂದು ಹೇಳಿದ್ದಾರೆ.
ಸದ್ಯ ಹರಿಯಾಣದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಚಿಕ್ಕಪ್ಪನಿಗೆ ಸೇರಿದ ಮನೆ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ರಾಜಸ್ಥಾನದಲ್ಲಿ ಯಾವುದೇ ಬೆಳವಣಿಗೆಗಳು ಇಲ್ಲದ ಕಾರಣ ನನಗೆ ಸೇರಿದ ಮನೆಯ ಪಾರ್ಶ್ವದಲ್ಲಿ ಮೌನವಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಉಗ್ರರ ದಾಳಿ ಎಚ್ಚರಿಕೆ; ಮುಂಬೈನಲ್ಲಿ ಹೈಅಲರ್ಟ್ - Mumbai Alert