ಭರತ್ಪುರ (ಛತ್ತೀಸ್ಗಢ): ಸ್ನೇಹ ಎಂಬುದು ಎಲ್ಲ ಸಂಬಂಧಗಳನ್ನು ಮೀರಿದ ಬಾಂಧವ್ಯ. ಅದು ಇಂತಹವರ ನಡುವೆಯೇ ಇರಬೇಕು ಎಂಬ ನಿಯಮವಿಲ್ಲ. ಅಂತಹುದ್ದೇ ಒಂದು ಕಥೆ ಈ ಸಾಧು ಮತ್ತು ಕರಡಿಯದ್ದು.
ಛತ್ತೀಸ್ಗಢದ ಮನೆಂದ್ರಗಢ ಬಿರ್ಮಿರಿ ಭರತ್ಪುರ್ ಸಾಧು ಸೀತಾರಾಮ್ ಮತ್ತು ಕರಡಿ ನಡುವಿನ ಸಂಬಂಧ ದಶಕಗಳಿಗೂ ಮೀರಿದ್ದು. 2013ರಲ್ಲಿ ಮಧ್ಯಪ್ರದೇಶದ ಶಾಹ್ದೊಲ್ ಜಿಲ್ಲೆಯ ಭರತ್ಪುರ್ಗೆ ಬಂದರು. ಈ ವೇಳೆ ಸಾಧುಗೆ ಒಂದು ಕರಡಿಯ ಗೆಳೆತನ ಶುರುವಾಯಿತು. ಅದಕ್ಕೆ ಪ್ರೀತಿಯಿಂದ ರಾಮ್ ಎಂಬ ಹೆಸರನ್ನು ಇಟ್ಟರು. ನಿಧಾನವಾಗಿ ಕರಡಿಯ ಕುಟುಂಬವೂ ದೊಡ್ಡದಾಗಿದೆ. ಒಂದು ಕರಡಿಯಿಂದ ಏಳು ಸದಸ್ಯರವರಿಗೆ ಅದರ ಕುಟುಂಬ ಬೆಳವಣಿಗೆ ಕಂಡಿದೆ. ಈ ಕರಡಿಗಳು ನಿತ್ಯ ಸಾಧು ಸೀತಾರಾಮ್ ಬಳಿಗೆ ತಪ್ಪದೇ ಭೇಟಿ ನೀಡುತ್ತವೆ. ಸಾಧು ಕೂಡ ಅವುಗಳಿಗೆ ಉಣಿಸುವುದಕ್ಕೆ ಮರೆಯುವುದಿಲ್ಲ.
ಸಾಧು ಈ ಎಲ್ಲಾ ಕರಡಿಗೆ ಹೆಸರಿಟ್ಟಿದ್ದು, ಲಲ್ಲಿ, ಮುನ್ನು, ಚುನ್ನು, ಗೋಲು, ಸೋನು, ಮೋನು ಮತ್ತು ಸತ್ತನಂದ್ ಎಂದು ನಾಮಕರಣ ಮಾಡಿದ್ದಾರೆ. ಸಾಧು ಇರುವ ದೇಗುಲದ ಸಮೀಪವೇ ಬರುವು ಈ ಕರಡಿಗಳು ಯಾವುದೇ ಭಕ್ತರಿಗೆ ಹಾನಿ ಮಾಡುವುದಿಲ್ಲ ಎಂಬುದು ನೆನಪಿಡಬೇಕಾದ ಅಂಶ.
ಸಾಧು- ಮತ್ತು ಕರಡಿಗಳ ಗೆಳೆತನದ ಬಗ್ಗೆ ಸ್ಥಳೀಯರು ಹೇಳುವುದು ಇಷ್ಟು: ಈ ಕುರಿತು ಮಾತನಾಡಿರುವ ಕಾರ್ಮಿಕ ಗೆಂಡ್ ಲಾಲ್, ಕರಡಿಗಳು ಸಾಧು ಗುಡಿಸಿಲಿಗೆ ನಿತ್ಯ ಭೇಟಿ ನೀಡುತ್ತವೆ. ಆಹಾರ ಸೇವಿಸಿ, ನೀರು ಕುಡಿದು ಬಳಿಕ ಇಲ್ಲಿಂದ ಹೊರಡುತ್ತವೆ. ಈ ಎಲ್ಲಾ ಕರಡಿಗಳು ಗುಹೆಯಲ್ಲಿ ವಾಸವಾಗಿದ್ದು, ಈ ಗುಹೆಗೆ ರಾಜ ಮದ ಎಂದು ಕರೆಯಲಾಗಿದೆ. ಸಾಧು ಇರುವ ಸ್ಥಳದಿಂದ 200 ಮೀಟರ್ ದೂರದಲ್ಲಿದೆ ಈ ಗುಹೆ.
ಈ ಗುಹೆಯಲ್ಲಿ ನಾಲ್ಕು ಕೋಣೆಗಳಿವೆ. ಒಂದು ಕಾಲದಲ್ಲಿ ಈ ಗುಹೆ ವಿಶ್ರಾಂತಿ ಸ್ಥಳವಾಗಿತ್ತು. ಇಲ್ಲಿನ ರಾಜ ಈ ಗುಹೆಗೆ ವಿಶ್ರಾಂತಿ ಪಡೆಯಲು ಬರುತ್ತಿದ್ದ. ಅಷ್ಟೇ ಅಲ್ಲ ಯುದ್ದದ ಸಂದರ್ಭದಲ್ಲಿ ರಕ್ಷಣೆ ಮಾಡಿಕೊಳ್ಳಲು ಈ ಗುಹೆಯನ್ನೇ ಆಶ್ರಯ ತಾಣವಾಗಿ ಮಾಡಿಕೊಂಡಿದ್ದ. ಇದೀಗ ಈ ಗುಹೆಯನ್ನೇ ಕರಡಿಗಳು ಬಳಸಿಕೊಳ್ಳುತ್ತಿವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ರಾಜ ತನ್ನ ವಾಸಕ್ಕೆ ಈ ಗುಹೆ ನಿರ್ಮಾಣ ಮಾಡಿದ್ದು, ಈ ವೇಳೆ ಆತ ರಾತ್ರಿ ಸಮಯ ಅಲ್ಲಿ ಕಳೆಯುತ್ತಿದ್ದ. ಗುಹೆಯಲ್ಲಿ ಶಸ್ತ್ರಾಸ್ತ್ರಗಳು ಇವೆ ಎನ್ನುತ್ತಾರೆ ಗ್ರಾಮಸ್ಥ ಗಣೇಶ್ ತಿವಾರಿ.
ಸಾಧು ಸೀತಾರಾಮ - ಕರಡಿಗಳೊಂದಿಗೆ ಹೊಂದಿರುವ ಗೆಳೆತನ ಇಲ್ಲಿನ ಜನರಲ್ಲಿ ಅಚ್ಚರಿಯನ್ನು ತಂದಿದೆ. ಇದು ಧಾರ್ಮಿಕರ ನಂಬಿಕೆಯ ಸಂಕೇತವಾಗಿದೆ. ಸಾಧುಗೆ ಯಾರೂ ಇಲ್ಲ. ಆತನ ಕುಟುಂಬಸ್ಥರು ಅವರ ಬಳಿ ಇಲ್ಲ. ಅವರು ತಮ್ಮ ಸಂಪೂರ್ಣ ಜೀವನವನ್ನು ಕಾಡಿನಲ್ಲಿ ಕಳೆದಿದ್ದು, ಕರಡಿ ಅವರ ಸ್ನೇಹಿತನಾಗಿ, ಕುಟುಂಬ ಸದಸ್ಯನಾಗಿದೆ ಎನ್ನುತ್ತಾರೆ ಇಲ್ಲಿನ ಜನರು.
ಇದನ್ನೂ ಓದಿ: ನಾಯಿ ಮರಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಹಿಳೆಯರು: ಪ್ರಕರಣ ದಾಖಲು