ETV Bharat / bharat

'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷವಾಕ್ಯವನ್ನೇ ತಪ್ಪಾಗಿ ಬರೆದ ಕೇಂದ್ರ ಸಚಿವೆ! ವಿಡಿಯೋ - Union Minister Savitri Thakur - UNION MINISTER SAVITRI THAKUR

ಮಧ್ಯಪ್ರದೇಶದ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ತಮ್ಮದೇ ಸರ್ಕಾರದ 'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷವಾಕ್ಯವನ್ನು ತಪ್ಪಾಗಿ ಬರೆದು ಟೀಕೆಗೆ ಗುರಿಯಾಗಿದ್ದಾರೆ.

UNION MINISTER SAVITRI THAKUR WRITE WRONG SLOGAN
'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷವಾಕ್ಯ ತಪ್ಪಾಗಿ ಬರೆದ ಕೇಂದ್ರ ಸಚಿವೆ (ETV Bharat)
author img

By ETV Bharat Karnataka Team

Published : Jun 19, 2024, 9:20 PM IST

'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷವಾಕ್ಯ ತಪ್ಪಾಗಿ ಬರೆದ ಕೇಂದ್ರ ಸಚಿವೆ (ETV Bharat)

ಇಂದೋರ್(ಮಧ್ಯಪ್ರದೇಶ): ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 'ಬೇಟಿ ಬಚಾವೋ, ಬೇಟಿ ಪಢಾವೋ' ಎಂಬ ವಿಶೇಷ ಕಾರ್ಯಕ್ರಮವನ್ನು ಒಂಭತ್ತು ವರ್ಷಗಳ ಹಿಂದೆ ಜಾರಿಗೆ ತಂದಿತ್ತು. 2015ರಲ್ಲಿ ಅನುಷ್ಠಾನಕ್ಕೆ ತಂದಿರುವ ಈ ಅಭಿಯಾನವು ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಇಂದಿಗೂ ಇದು ಮುಂದುವರೆದಿದೆ. ಆದರೆ, ಈಗ ಮೂರನೇ ಅವಧಿಯ ಎನ್​ಡಿಎ ಸರ್ಕಾರದಲ್ಲಿ ಹೊಸದಾಗಿ ಸಚಿವರಾದ ಸಾವಿತ್ರಿ ಠಾಕೂರ್ ಈ ಘೋಷವಾಕ್ಯವನ್ನು ತಪ್ಪಾಗಿ ಬರೆದು ಪೇಚಿಗೆ ಸಿಲುಕಿರುವ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆಯಿತು.

ದೇಶದೆಲ್ಲೆಡೆ ಈಗ ಶಾಲಾರಂಭದ ದಿನಗಳು. ಮಧ್ಯಪ್ರದೇಶದ ಧಾರ್‌ನಲ್ಲಿ ಮಂಗಳವಾರ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಕಾರ್ಯಕ್ರಮ ಉದ್ಘಾಟಕರಾಗಿ ಪಾಲ್ಗೊಂಡಿದ್ದರು. ಇದೇ ವೇಳೆ, ಶಿಕ್ಷಣ ಇಲಾಖೆಯ ಜಾಗೃತಿ ರಥಕ್ಕೂ ಚಾಲನೆ ನೀಡಿದರು. ಈ ಜಾಗೃತಿ ರಥದ ಮೇಲೆ 'ಬೇಟಿ ಬಚಾವೋ, ಬೇಟಿ ಪಢಾವೋ' ಎಂಬ ಘೋಷವಾಕ್ಯವನ್ನು ಬರೆಯಬೇಕಿತ್ತು.

'ಬೇಟಿ' ಬದಲು 'ಬೇಡಿ' ಎಂದು ಬರೆದರು!: ಆದರೆ, ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್ ತಮ್ಮದೇ ಸರ್ಕಾರದ ಘೋಷವಾಕ್ಯವನ್ನು ತಪ್ಪಾಗಿ ಬರೆದರು. 'ಬೇಟಿ ಬಚಾವೋ, ಬೇಟಿ ಪಢಾವೋ' ಎಂದು ಪೂರ್ಣವಾಗಿ ಬರೆಯಲು ಅವರು ವಿಫಲರಾಗಿದ್ದಾರೆ. 'ಬೇಟಿ' (ಮಗಳು) ಬದಲಿಗೆ 'ಬೇಡಿ ಬಚಾವೋ, ಪಢಾವೋ' ಎಂದು ಬರೆದಿದ್ದಾರೆ. ಇದಾದ ತಕ್ಷಣವೇ ಬರಹವನ್ನು ಅಳಿಸಿ ಹಾಕಲಾಗಿದೆ. ಆದರೆ, ಸಚಿವರು ಘೋಷವಾಕ್ಯವನ್ನು ಸಾರ್ವಜನಿಕವಾಗಿ ತಪ್ಪು ಬರೆದಿರುವ ದೃಶ್ಯಗಳು ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಂಗ್ರೆಸ್​ ಟೀಕೆ: ಸಚಿವೆ ಸಾವಿತ್ರಿ ಠಾಕೂರ್ ಲೋಕಸಭೆ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಾವು 12ನೇ ತರಗತಿ ತೇರ್ಗಡೆಯಾಗಿರುವುದಾಗಿ ಘೋಷಿಸಿದ್ದರು. ಆದರೆ, ಈಗ ಸರ್ಕಾರದ 'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷವಾಕ್ಯವನ್ನು ತಪ್ಪಾಗಿ ಬರೆದು ಟೀಕೆಗೆ ಗುರಿಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ಕಾಂಗ್ರೆಸ್, 'ಇಂತಹ ಸಚಿವರನ್ನು ಪಡೆದಿರುವುದು ದೇಶದ ದೌರ್ಭಾಗ್ಯ. ತಮ್ಮ ಮಾತೃಭಾಷೆಯನ್ನೇ ಬರೆಯಲು ಸಾಧ್ಯವಾಗದವರು ಹೇಗೆ ತಮ್ಮ ಸಚಿವಾಲಯವನ್ನು ಮುನ್ನೆಡೆಸುತ್ತಾರೆ?' ಎಂದು ಕುಟುಕಿದೆ.

ಇದನ್ನೂ ಓದಿ: ಜಗನ್​ ಕಟ್ಟಿಸಿದ್ದ 'ಸಿಎಂ ಕ್ಯಾಂಪ್​ ಕಚೇರಿ'ಯಲ್ಲಿ ಕನ್ನಡಿಯಿಂದ ಹಿಡಿದು ಬಾತ್ ಟಬ್‌​ವರೆಗೂ ವಿದೇಶಿ ವಸ್ತುಗಳೇ! ₹452 ಕೋಟಿ ವೆಚ್ಚ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.