40 ನಿಮಿಷಕ್ಕೂ ಹೆಚ್ಚು ಕಾಲ ಬಜೆಟ್ ಮಂಡನೆ ಮುಕ್ತಾಯ.
ಕೇಂದ್ರ ಮಧ್ಯಂತರ ಬಜೆಟ್ : ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ - ಕೇಂದ್ರ ಮಧ್ಯಂತರ ಬಜೆಟ್ 2024
Published : Feb 1, 2024, 10:45 AM IST
|Updated : Feb 1, 2024, 5:00 PM IST
12:14 February 01
ಬಜೆಟ್ ಮಂಡನೆ ಮುಕ್ತಾಯ
12:14 February 01
ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಸಮಿತಿ ರಚನೆ
- 7 ಲಕ್ಷ ಆದಾಯ ಇರುವವರಿಗೆ ತೆರಿಗೆಯಿಂದ ವಿನಾಯಿತಿ
- ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು
- 3 ಪ್ರಮುಖ ರೈಲ್ವೆ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ
- ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಸಮಿತಿ ರಚನೆ ಪ್ರಸ್ತಾವ
- ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲನಕ್ಷೆ ತಯಾರಿ
12:06 February 01
ಲಕ್ಷದ್ವೀಪ ಸೇರಿ ದ್ವೀಪಖಂಡಗಳಲ್ಲಿ ಅಭಿವೃದ್ಧಿಗೆ ಒತ್ತು
- ಲಕ್ಷದ್ವೀಪ ಸೇರಿದಂತೆ ಭಾರತದ ದ್ವೀಪಗಳಲ್ಲಿ ಬಂದರು ಸಂಪರ್ಕ, ಸೌಕರ್ಯಗಳಿಗೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.
- ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ರಾಜ್ಯಗಳಿಗೆ 50 ವರ್ಷಗಳವರೆಗೆ 75,000 ಕೋಟಿ ರೂಪಾಯಿ ದೀರ್ಘಕಾಲೀನ ಬಡ್ಡಿರಹಿತ ಸಾಲ.
12:01 February 01
ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
- ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ. ಆಮದು ಸುಂಕಗಳು ಸೇರಿದಂತೆ ನೇರ ಮತ್ತು ಪರೋಕ್ಷ ತೆರಿಗೆಯಲ್ಲಿ ಈ ಹಿಂದಿನ ನಿಯಮವನ್ನೇ ಮುಂದುವರಿಸಲಾಗುತ್ತದೆ: ಸೀತಾರಾಮನ್
- ಸ್ಟಾರ್ಟಪ್‌ಗಳು ಮತ್ತು ಐಎಫ್ಎಸ್ಸಿ ಘಟಕಗಳಿಗೆ ಕೆಲವು ತೆರಿಗೆ ವಿನಾಯಿತಿಗಳು ಮಾರ್ಚ್ 31, 2023 ರಂದು ಮುಕ್ತಾಯಗೊಳ್ಳಲಿವೆ. ಇದನ್ನು ಮಾರ್ಚ್ 31, 2025 ರವರೆಗೆ ವಿಸ್ತರಿಸಲಾಗುತ್ತಿದೆ.
11:57 February 01
ಬಡವರಿಗೆ ಸೂರು ಕಟ್ಟಿಕೊಳ್ಳಲು ವಸತಿ ಯೋಜನೆ ಘೋಷಣೆ
- ಮಧ್ಯಮ ವರ್ಗದವರಿಗೆ ಸ್ವಂತ ಮನೆ ಖರೀದಿಸಲು ಅಥವಾ ನಿರ್ಮಿಸಲು ಸರ್ಕಾರ 'ವಸತಿ ಯೋಜನೆ' ಪ್ರಾರಂಭಿಸಲಿದೆ.
- ಮೂರು ಪ್ರಮುಖ ರೈಲ್ವೆ ಕಾರಿಡಾರ್‌ಗಳ ನಿರ್ಮಾಣ
- ಮುಂದಿನ 5 ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ 2 ಕೋಟಿ ಮನೆಗಳ ನಿರ್ಮಿಸುವ ಗುರಿ.
- ನಮ್ಮ ಸರ್ಕಾರವೇ ಅಧಿಕಾರಕ್ಕೆ ಬಂದು ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ: ನಿರ್ಮಲಾ ಸೀತಾರಾಮನ್
11:40 February 01
ಪಿಎಂ ಆವಾಸ್ ಯೋಜನೆಯಡಿ 2 ಕೋಟಿ ಮನೆ ಹೆಚ್ಚುವರಿ ನಿರ್ಮಾಣ
- ಲಖಪತಿ ದೀದಿ ಯೋಜನೆಯ ಗುರಿ 2 ಕೋಟಿಯಿಂದ 3 ಕೋಟಿಗೆ ಹೆಚ್ಚಳ.
- ಗರ್ಭಕೋಶ ಕ್ಯಾನ್ಸರ್ ತಡೆಗಟ್ಟಲು ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಲು ಸರ್ಕಾರ ಪ್ರೋತ್ಸಾಹ.
- ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ ನಿರ್ಮಿಸಲಾಗುತ್ತಿರುವ 3 ಕೋಟಿ ಮನೆ ಸದ್ಯದಲ್ಲೇ ಪೂರ್ಣ.
- ಮುಂದಿನ 5 ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳ ನಿರ್ಮಾಣ ಗುರಿ.
11:36 February 01
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್
- ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ ಮಾಡುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದರು.
11:31 February 01
2047 ರ ವೇಳೆಗೆ ವಿಕಸಿತ ಭಾರತದ ಕನಸು ಸಾಕಾರ: ನಿರ್ಮಲಾ
- 2047 ರ ವೇಳೆಗೆ ದೇಶವನ್ನು 'ವಿಕಸಿತ ಭಾರತ'ವನ್ನಾಗಿ ಮಾಡುವ ದೂರದೃಷ್ಟಿಯನ್ನು ಹಾಕಿಕೊಂಡಿದ್ದೇವೆ. ಹಿಂದಿನ ಸರ್ಕಾರಗಳು ಸಾಮಾಜಿಕ ನ್ಯಾಯವನ್ನು ಕೇವಲ ರಾಜಕೀಯ ಘೋಷಣೆಯನ್ನಾಗಿ ಮಾಡಿಕೊಂಡಿದ್ದವು. ನಮ್ಮ ಸರ್ಕಾರಕ್ಕೆ ಇದು ಆಡಳಿತ ಮಾದರಿಯಾಗಿದೆ. ಭಾರತ-ಮಧ್ಯಪ್ರಾಚ್ಯ ಯುರೋಪ್ ಕಾರಿಡಾರ್ ದೇಶದ ಜೊತೆಗೆ ಇತರ ರಾಷ್ಟ್ರಗಳಿಗೂ ಬದಲಾವಣೆಯ ಪ್ರಮುಖ ಅಂಶವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
- 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಮೂಲಕ ದೇಶದಲ್ಲಿ ಆಹಾರ ಕೊರತೆಯನ್ನು ನಿರ್ಮೂಲನೆ ಮಾಡಲಾಗಿದೆ. ದೇಶ ಆರ್ಥಿಕ ಸ್ಥಿರತೆಯನ್ನು ಹೊಂದಿದೆ. ಹೂಡಿಕೆಗಳು ಸದೃಢವಾಗಿವೆ. ನಮ್ಮ ಆರ್ಥಿಕತೆಯು ಉತ್ತಮವಾಗಿದೆ ಎಂದು ಹಣಕಾಸು ಸಚಿವೆ ತಿಳಿಸಿದರು.
11:22 February 01
ನಾಲ್ಕು ಆಧಾರಸ್ತಂಭಗಳ ಮೇಲೆ ಸರ್ಕಾರ ಕೆಲಸ: ನಿರ್ಮಲಾ
- ಸ್ಕಿಲ್ ಇಂಡಿಯಾ ಯೋಜನೆಯಲ್ಲಿ 1.4 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 4 ಕೋಟಿ ರೈತರಿಗೆ ಬೆಳೆ ವಿಮೆ ನೀಡಲಾಗಿದೆ. ಸಬ್ಕಾ ಸಾಥ್‌ನ ಅಡಿಯಲ್ಲಿ ಕಳೆದ 10 ವರ್ಷಗಳಲ್ಲಿ 25 ಕೋಟಿ ಬಡವರನ್ನು ಬಂಧ ಮುಕ್ತಗೊಳಿಸಲಾಗಿದೆ. ಇದಕ್ಕಾಗಿ ಸರ್ಕಾರ ವಿವಿಧ ರೀತಿಯ ನೆರವು ನೀಡಿದೆ ಎಂದು ನಿರ್ಮಲಾ ತಿಳಿಸಿದರು.
- ದೇಶದ ಅಭಿವೃದ್ಧಿ ನಾಲ್ಕು ಪ್ರಮುಖ ಆಧಾರ ಸ್ತಂಭಗಳ ಮೇಲೆ ನಿಂತಿದೆ. ಬಡವರು, ಮಹಿಳೆಯರು, ಯುವಕರು ಮತ್ತು ಅನ್ನದಾತರೇ ನಮ್ಮ ಆಧಾರಸ್ತಂಭ. ಅವರ ಅಭಿವೃದ್ಧಿಗಾಗಿ ಸರ್ಕಾರ ಪಣ ತೊಟ್ಟಿದೆ ಎಂದು ವಿತ್ತ ಸಚಿವೆ ಹೇಳಿದರು.
11:14 February 01
10 ವರ್ಷಗಳಲ್ಲಿ ದೇಶದ ಆರ್ಥಿಕತೆ ಏರಿಕೆ- ಹಣಕಾಸು ಸಚಿವೆ
- ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎರಡನೇ ಅವಧಿಯಲ್ಲಿ ಸರ್ಕಾರವು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸದ ಆಧಾರದ ಮೇಲೆ ಕೆಲಸ ಮಾಡಿತು.
- ನಮ್ಮ ಮೇಲಿನ ವಿಶ್ವಾಸವನ್ನೂ ಬಲಪಡಿಸಲಾಯಿತು. ಕಳೆದ 10 ವರ್ಷಗಳಲ್ಲಿ ದೇಶದ ಆರ್ಥಿಕತೆಯು ಅದ್ಭುತ ರೀತಿಯಲ್ಲಿ ಏರಿಕೆ ಕಂಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಹೇಳಿದರು.
11:10 February 01
ಮುಂದಿನ ಬಾರಿಯೂ ನಮ್ಮದೇ ಸರ್ಕಾರ ರಚನೆ ವಿಶ್ವಾಸ: ನಿರ್ಮಲಾ
- ಯುವ ಭಾರತವು ಎತ್ತರದ ಆಕಾಂಕ್ಷೆಗಳನ್ನು ಹೊಂದಿದೆ. ಉಜ್ವಲ ಭವಿಷ್ಯಕ್ಕಾಗಿ ಭರಪೂರ ಭರವಸೆ ಮತ್ತು ವಿಶ್ವಾಸವನ್ನು ಹೊಂದಿದೆ.
- 10 ವರ್ಷಗಳಲ್ಲಿ ನಮ್ಮ ಸರ್ಕಾರವು ಮಾಡಿದ ಉತ್ತಮ ಕೆಲಸದ ಆಧಾರದ ಮೇಲೆ ಮುಂದಿನ ಚುನಾವಣೆಯಲ್ಲಿ ಮತ್ತೆ ಜನಾದೇಶದೊಂದಿಗೆ ಆರಿಸಿ ಬರಲಿದೆ ಎಂದು ನಿರ್ಮಲಾ ಆಶಿಸಿದರು.
11:04 February 01
ಬಜೆಟ್ ಓದಲು ಶುರು ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
- ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಓದಲು ಶುರು ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
10:51 February 01
ಮಧ್ಯಂತರ ಬಜೆಟ್ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಬಜೆಟ್ ಮಂಡನೆಗೂ ಮೊದಲು ಸಂಸತ್ತಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡನೆಗೆ ಒಪ್ಪಿಗೆ ಪಡೆದುಕೊಳ್ಳಲಾಯಿತು. ಲೇಖಾನುದಾನಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿತು. ಇನ್ನು ಕೆಲವೇ ನಿಮಿಷಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನ ಲೋಕಸಭೆಗೆ ಆಗಮಿಸಿ ಬಜೆಟ್ ಮಂಡನೆ ಮಾಡಲಿದ್ದಾರೆ.
10:47 February 01
ರಾಷ್ಟ್ರಪತಿ ಭೇಟಿಯಾಗಿ ಒಪ್ಪಿಗೆ ಪಡೆದ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಗೂ ಮೊದಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸಚಿವ ಡಾ.ಭಾಗವತ್ ಕಿಶನ್ರಾವ್ ಕರಡ್ ಮತ್ತು ಪಂಕಜ್ ಚೌಧರಿ, ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಅವರಿಂದ ಒಪ್ಪಿಗೆ ಪಡೆದರು. ರಾಷ್ಟ್ರಪತಿಗಳು ನಿರ್ಮಲಾ ಅವರಿಗೆ ಸಿಹಿ ತಿನ್ನಿಸಿದರು.
10:34 February 01
union budget live
ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಇಂದಿನ ಕೊನೆಯ ಮಧ್ಯಂತರ ಬಜೆಟ್ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಆರನೇ ಬಜೆಟ್ ಆಗಿದೆ. ಮಧ್ಯಂತರ ಬಜೆಟ್ ಮಂಡಿಸಲು ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿಗೆ ಬಂದಿದ್ದಾರೆ.