ETV Bharat / bharat

ಈ ವರ್ಷ 194 ನಕ್ಸಲರ ಹತ್ಯೆ, 801 ಬಂಧನ, 742 ಮಂದಿ ಶರಣಾಗತಿ: ಅಮಿತ್​ ಶಾ - union home minister Amit Shah - UNION HOME MINISTER AMIT SHAH

ನಕ್ಸಲ್​ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರಿ ಯಶಸ್ಸು ಸಾಧಿಸಿದ ಭದ್ರತಾ ಪಡೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮಿತ್​ ಶಾ
ಅಮಿತ್​ ಶಾ (ANI)
author img

By ANI

Published : Oct 7, 2024, 6:46 PM IST

ನವದೆಹಲಿ: ಛತ್ತೀಸ್​ಗಢದಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 31 ನಕ್ಸಲರು ಹತ್ಯೆಯಾಗಿದ್ದರು. ನಕ್ಸಲ್‌ಮುಕ್ತ ರಾಷ್ಟ್ರಕ್ಕಾಗಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿರುವ ನಡುವೆ ಭಾರಿ ಯಶಸ್ಸು ಸಿಕ್ಕಿದೆ. ಭದ್ರತಾ ಪಡೆಗಳ ಈ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ ಶ್ಲಾಘಿಸಿದ್ದಾರೆ.

ನಕ್ಸಲ್‌ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಇಲ್ಲಿನ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜನವರಿಯಿಂದ 194 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. 801 ಜನರ ಬಂಧನ, 742 ಮಂದಿ ಶರಣಾಗತರಾಗಿದ್ದಾರೆ. ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಛತ್ತೀಸ್‌ಗಢ ಸರ್ಕಾರ ದೊಡ್ಡ ಯಶಸ್ಸು ಸಾಧಿಸಿದೆ ಎಂದರು.

ಈಶಾನ್ಯ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರದಲ್ಲಿ ಸುಮಾರು 13 ಸಾವಿರ ಮಂದಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ. ನಕ್ಸಲ್​​ವಾದದಲ್ಲಿ ತೊಡಗಿಕೊಂಡಿರುವ ಯುವಕರು ಇದರಿಂದ ಹೊರಬಂದು ಮುಖ್ಯವಾಹಿನಿಗೆ ಸೇರುವಂತೆ ಅಮಿತ್​ ಶಾ ಮನವಿ ಮಾಡಿದರು.

ಹಿಂಸಾಚಾರ ಗಮನಾರ್ಹ ಇಳಿಕೆ: ಭಾರತದಾದ್ಯಂತ ಹಿಂಸಾಚಾರ ಮತ್ತು ಭಯೋತ್ಪಾದನೆ ಸಂಬಂಧಿತ ಘಟನೆಗಳು ಗಮನಾರ್ಹ ಇಳಿಕೆ ಕಂಡಿವೆ. 10 ವರ್ಷಗಳ ಹಿಂದೆ 16,463 ಹಿಂಸಾತ್ಮಕ ಘಟನೆಗಳು ದಾಖಲಾಗುತ್ತಿದ್ದವು. ಇದೀಗ ಆ ಸಂಖ್ಯೆ 7,700ಕ್ಕೆ ಇಳಿದಿದೆ. ಮುಂದಿನ ವರ್ಷದ ವೇಳೆಗೆ ಇದು ಮತ್ತಷ್ಟು ಕುಸಿಯಲಿದೆ. ನಾಗರಿಕರು ಮತ್ತು ಭದ್ರತಾ ಪಡೆಗಳ ಸಾವುಗಳು ಶೇಕಡಾ 70 ರಷ್ಟು ಕಡಿಮೆಯಾಗಿದೆ. ಹಿಂಸಾಚಾರ ವರದಿಯಾಗುವ ಜಿಲ್ಲೆಗಳ ಸಂಖ್ಯೆ 96ರಿಂದ 42ಕ್ಕೆ ಇಳಿದಿದೆ. ಹಿಂಸಾಚಾರ ಕೇಸ್​ ದಾಖಲಾಗುವ ಪೊಲೀಸ್ ಠಾಣೆಗಳ ಸಂಖ್ಯೆಯೂ 465 ರಿಂದ 171ಕ್ಕೆ ಇಳಿದಿದೆ. ಇದರಲ್ಲಿ 50 ಠಾಣೆಗಳು ಹೊಸದಾಗಿ ರಚಿತವಾಗಿವೆ. ಅಂದರೆ 120 ಪೊಲೀಸ್ ಠಾಣೆಗಳು ಮಾತ್ರ ಹಿಂಸಾಚಾರ ಕೇಸ್​​ ವರದಿ ಮಾಡುತ್ತಿವೆ ಎಂದು ಅಂಕಿಅಂಶ ನೀಡಿದರು.

ನಕ್ಸಲ್​ಪೀಡಿತ ಪ್ರದೇಶಗಳಲ್ಲಿ ಭದ್ರತಾ ಸಂಬಂಧಿತ ವೆಚ್ಚ (ಎಸ್​​ಆರ್​​ಇ) 2004-2014ರ ನಡುವೆ 1180 ಕೋಟಿ ರೂಪಾಯಿ ಮಾತ್ರ ಮೀಸಲಿಡಲಾಗಿದೆ. ಅದೇ 2014-2024ರ ನಡುವೆ ಇದು 3,006 ಕೋಟಿ ರೂಪಾಯಿಗೆ ಹೆಚ್ಚಾಗಿದೆ. ಅಂದರೆ ಮೂರು ಪಟ್ಟು ಹೆಚ್ಚಳ. ಕಳೆದೊಂದು ದಶಕದಲ್ಲಿ ಇದಕ್ಕಾಗಿ ಕೇಂದ್ರ ಸರ್ಕಾರ 3590 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದೆ ಎಂದು ಗೃಹ ಸಚಿವರು ತಿಳಿಸಿದರು.

ಪೊಲೀಸ್​ ಠಾಣೆ ಹೆಚ್ಚಳ: 2019ರ ಮೊದಲು ಭದ್ರತಾ ಪಡೆಗಳಿಗೆ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತಿತ್ತು. ಇದೀಗ, ಕಾರ್ಯಾಚರಣೆ ನಡೆಸುವ ಪಡೆಗಳಿಗೆ ನೆರವಾಗಲು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಆರು, ವಾಯುಪಡೆಯ ಆರು ಸೇರಿದಂತೆ ಸಂಖ್ಯೆ 12 ಹೆಲಿಕಾಪ್ಟರ್​​ಗಳು ಕಾರ್ಯಾಚರಣೆ ನಡೆಸುತ್ತವೆ. ಕಳೆದ 10 ವರ್ಷಗಳಲ್ಲಿ 544 ವಿಶೇಷ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಕಳೆದ 10 ವರ್ಷಗಳಲ್ಲಿ ರಸ್ತೆ ಜಾಲವನ್ನು 11,500 ಕಿ.ಮೀ.ಗೆ ಹೆಚ್ಚಿಸಲಾಗಿದೆ. 15,300 ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ 5139 ಟವರ್‌ಗಳಿಗೆ 4ಜಿ ನೆಟ್​ವರ್ಕ್​ ನೀಡಲಾಗಿದೆ. 2014 ರ ಮೊದಲು 38 ಏಕಲವ್ಯ ಮಾದರಿ ಶಾಲೆಗಳಿದ್ದವು. ಈಗ 216 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ 165 ಕಾರ್ಯಾರಂಭ ಮಾಡಿವೆ ಎಂದು ಹೇಳಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 7 ಕಾರ್ಮಿಕರು ಸಾವು, ಹಲವರಿಗೆ ಗಾಯ - Coal Mine Blast

ETV Bharat Logo

Copyright © 2024 Ushodaya Enterprises Pvt. Ltd., All Rights Reserved.