Union Budget 2024: ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಕೇಂದ್ರ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಮಾಜದ ಎಲ್ಲ ವರ್ಗದವರಿಗೂ ಇದರಿಂದ ಅನುಕೂಲವಾಗಲಿದೆ. ಯುವಕರು ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ದಲಿತ ಮತ್ತು ಹಿಂದುಳಿದ ಸಮುದಾಯಗಳ ಜನರು ಬಲಿಷ್ಠರಾಗುತ್ತಾರೆ. ಬಜೆಟ್ ಮಂಡನೆ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಜೆಟ್ ಮಹಿಳೆಯರ ಆರ್ಥಿಕ ಸಹಭಾಗಿತ್ವ ಖಚಿತಪಡಿಸುತ್ತದೆ. ಇದಲ್ಲದೇ, ಆರ್ಥಿಕ ಅಭಿವೃದ್ಧಿಯೂ ಹೊಸ ವೇಗ ಪಡೆಯಲಿದೆ ಎಂದು ಹೇಳಿದರು.
#WATCH | On Union Budget, PM Modi says, " today, defence exports are at a record high. many provisions have been made in this budget to make the defence sector self-reliant. focus also laid on the tourism sector in this budget...a decision has also been taken on the reduction of… pic.twitter.com/l4UhHxtfVM
— ANI (@ANI) July 23, 2024
ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಈ ಬಜೆಟ್ ಹೊಸ ಮಧ್ಯಮ ವರ್ಗದ ಸಬಲೀಕರಣಕ್ಕಾಗಿದೆ. ಈ ಬಜೆಟ್ ಯುವಕರಿಗೆ ಅನಿಯಮಿತ ಅವಕಾಶಗಳನ್ನು ಒದಗಿಸುತ್ತದೆ. ಈ ಬಜೆಟ್ ಹೊಸ ಪ್ರಮಾಣವನ್ನು ನೀಡುತ್ತದೆ. ಈ ಬಜೆಟ್ ಹೊಸ ಮಧ್ಯಮ ವರ್ಗಕ್ಕೆ ಬಲವನ್ನು ನೀಡುತ್ತದೆ ಮತ್ತು ಮಹಿಳೆಯರು, ಸಣ್ಣ ಉದ್ಯಮಿಗಳು ಮತ್ತು MSME ಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
#WATCH | Post Budget 2024: Prime Minister Narendra Modi says " for msmes, a new scheme to increase ease of credit has been announced in the budget. announcements have been made to take export and manufacturing ecosystem to every district in this budget...this budget will bring new… pic.twitter.com/C0615OJjdt
— ANI (@ANI) July 23, 2024
ಪ್ರಧಾನಿ ತಮ್ಮ ಭಾಷಣದಲ್ಲಿ, ಇದು ಬುಡಕಟ್ಟು ಸಮುದಾಯ, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸಬಲೀಕರಣಗೊಳಿಸುವ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಉತ್ಪಾದನೆ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಗಮನ ನೀಡಲಾಗಿದೆ" ಎಂದು ಹೇಳಿದರು.
ಕೇಂದ್ರ ಬಜೆಟ್‌ನಲ್ಲಿ, ಬಿಹಾರದಲ್ಲಿ ಮೂರು ಎಕ್ಸ್‌ಪ್ರೆಸ್‌ವೇಗಳನ್ನು ಮತ್ತು ಬಕ್ಸಾರ್‌ನಲ್ಲಿ ಗಂಗಾ ನದಿಗೆ ಎರಡು ಹೊಸ ಸೇತುವೆಗಳನ್ನು ನಿರ್ಮಿಸಲು 26 ಸಾವಿರ ಕೋಟಿ ರೂಪಾಯಿಗಳನ್ನು ನೀಡಲು ಪ್ರಸ್ತಾಪಿಸಲಾಗಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಆಂಧ್ರಪ್ರದೇಶಕ್ಕೆ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಲು 15 ಸಾವಿರ ಕೋಟಿ ನೀಡಲಿದೆ.