ETV Bharat / bharat

ಪಿಎಚ್‌ಡಿ ಪ್ರವೇಶ ಪರೀಕ್ಷೆಗೆ ಬದಲು ನೆಟ್ ಸ್ಕೋರ್ ನಿಯಮ ನಿಲ್ಲಿಸಿ: ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಆಗ್ರಹ - JNU Students Union - JNU STUDENTS UNION

ಪಿಎಚ್‌ಡಿ ಪ್ರವೇಶ ಪರೀಕ್ಷೆಗಳಿಗೆ ಬದಲಿಯಾಗಿ ನೆಟ್ ಸ್ಕೋರ್ ಹೇರುವುದನ್ನು ಯುಜಿಸಿ ನಿಲ್ಲಿಸಬೇಕು ಎಂದು ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟ ಒತ್ತಾಯ ಮಾಡಿದೆ.

UGC  NET  PhD entrance exam  JNUSU JNU Students Union
ಪಿಎಚ್‌ಡಿ ಪ್ರವೇಶ ಪರೀಕ್ಷೆಗೆ ಬದಲು ನೆಟ್ ಸ್ಕೋರ್ ಹೇರುವುದನ್ನು ಯುಜಿಸಿ ನಿಲ್ಲಿಸಲು ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟ ಆಗ್ರಹ
author img

By ANI

Published : Apr 27, 2024, 7:15 AM IST

ನವದೆಹಲಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಕೇಂದ್ರ ಕಚೇರಿಯಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟದ (ಜೆಎನ್‌ಯುಎಸ್‌ಯು) ಸದಸ್ಯರು ಪ್ರತಿಭಟನೆ ನಡೆಸಿದರು. ನಂತರ, ಯುಜಿಸಿಯ ಜಂಟಿ ಕಾರ್ಯದರ್ಶಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಜೆಎನ್‌ಯುಎಸ್‌ಯು) ಪದಾಧಿಕಾರಿಗಳನ್ನು ಭೇಟಿ ಮಾಡಿದರು.

ಪಿಎಚ್‌ಡಿ ಪ್ರವೇಶ ಪರೀಕ್ಷೆಗಳನ್ನು NET ಅಂಕಗಳೊಂದಿಗೆ ಬದಲಾಯಿಸುವ ಅನಿಯಂತ್ರಿತ ನಿರ್ಧಾರವು ಬಹಳಷ್ಟು ವಿದ್ಯಾರ್ಥಿಗಳನ್ನು, ವಿಶೇಷವಾಗಿ ವಿಭಾಗಗಳಿಂದ, ಸಂಶೋಧನೆಯಿಂದ ದೂರವಿಡುತ್ತದೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯಗಳ ಬಾಗಿಲುಗಳ ಮುಚ್ಚಿವೆ ಎಂದು ಜೆಎನ್​ಯುಎಸ್​ಯು ಹೇಳಿದೆ.

ಯುಜಿಸಿ ಈ ನಿರ್ಧಾರದಿಂದ, ಉನ್ನತ ಶಿಕ್ಷಣವನ್ನು ಪ್ರವೇಶಿಸುವ ವ್ಯಾಪ್ತಿಯನ್ನು ಮತ್ತಷ್ಟು ಸಂಕುಚಿತಗೊಳಿಸುತ್ತಿದೆ ಎಂದು ಜೆಎನ್​ಯುಎಸ್​ಯು ಪದಾಧಿಕಾರಿಗಳು ಕಿಡಿಕಾರಿದ್ದಾರೆ. ಯುಜಿಸಿ ಜಂಟಿ ಕಾರ್ಯದರ್ಶಿ ಅವರು, ಈ ಅಂಶಗಳ ಬಗ್ಗೆ ಆಂತರಿಕ ಸಭೆ ನಡೆಸುವುದಾಗಿ ಪ್ರತಿಕ್ರಿಯಿಸಿದ್ದಾರೆ. ವಿಶ್ವವಿದ್ಯಾನಿಲಯಗಳು ತಮ್ಮ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಸ್ವಾಯತ್ತತೆಯನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ. ಜೆಎನ್​ಯು ಆಡಳಿತವು ತನ್ನ ಸ್ವತಂತ್ರ ಪ್ರವೇಶ ಪರೀಕ್ಷೆಗಳನ್ನು ನಡೆಸಲು ತನ್ನ ಸ್ವಾಯತ್ತತೆಯನ್ನು ಚಲಾಯಿಸಲು ನಿರಾಕರಿಸಿದೆ. ಬದಲಿಗೆ NET ಅಂಕಗಳನ್ನು ಪಿಎಚ್‌ಡಿ ಪ್ರವೇಶಕ್ಕೆ ಬಳಸಲಾಗುವುದು ಎಂದು ಸುತ್ತೋಲೆಯನ್ನು ಹೊರಡಿಸಿದೆ.

ಜೆಎನ್‌ಯು ನಿರ್ವಾಹಕರು ವಿದ್ಯಾರ್ಥಿಗಳ ಅಭಿಪ್ರಾಯವನ್ನು ತೆಗೆದುಕೊಳ್ಳದೇ ಯುಜಿ ಮತ್ತು ಪಿಜಿ ಪ್ರವೇಶಕ್ಕಾಗಿ ಜೆಎನ್‌ಯುಇಇ ಅನ್ನು ರದ್ದುಗೊಳಿಸಲು ಈ ಹಿಂದೆ ನಿರ್ಧರಿಸಿದ್ದರು. ಮತ್ತೊಮ್ಮೆ, ಜೆಎನ್‌ಯು ಆಡಳಿತವು ಈ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಯಾವುದೇ ರೀತಿಯ ಸಮಾಲೋಚನೆ ಮಾಡಿಲ್ಲ. ಜೆಎನ್‌ಯು ವಿಸಿ ಶಾಂತಿಶ್ರೀ ಧೂಳಿಪಾಡಿ ಪಂಡಿತ್ ಅವರು, ಜೆಎನ್​ಯುಎಸ್​ಯು ಅನ್ನು ಅಕಾಡೆಮಿಕ್ ಕೌನ್ಸಿಲ್ ಸಭೆಗಳಿಗೆ ಆಹ್ವಾನಿಸಲು ನಿರಾಕರಿಸಿದ್ದಾರೆ. ಒಂದ ವೇಳೆ ಸಭೆ ಕರೆದರೆ, ಅಲ್ಲಿ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಈ ವರ್ಷ ಮತ್ತು ಇನ್ನು ಮುಂದೆ ಪಿಎಚ್‌ಡಿ ಪ್ರವೇಶ ಪರೀಕ್ಷೆಯನ್ನು ಜೆಎನ್‌ಯುಇಇ ಮೂಲಕ ಮಾಡಬೇಕು ಎಂದು ಒತ್ತಾಯಿಸಲು ಜೆಎನ್‌ಯುಎಸ್‌ಯು ಏಪ್ರಿಲ್ 29 ರಂದು ಪ್ರವೇಶ ನಿರ್ದೇಶಕರನ್ನು ಭೇಟಿ ಮಾಡಲಿದೆ.

ಇದನ್ನೂ ಓದಿ: 2ನೇ ಹಂತದ ಲೋಕಸಭೆ ಚುನಾವಣೆ: 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಶೇ.63ರಷ್ಟು ವೋಟಿಂಗ್​ - 2nd Phase Election

ETV Bharat Logo

Copyright © 2025 Ushodaya Enterprises Pvt. Ltd., All Rights Reserved.