ETV Bharat / bharat

ಒಂದೇ ರನ್​ವೇ; ಸೆಕೆಂಡ್​ಗಳಲ್ಲೇ ಒಂದು ವಿಮಾನ ಟೇಕ್ ಆಫ್, ಮತ್ತೊಂದು ಲ್ಯಾಂಡಿಂಗ್! ತಪ್ಪಿದ ಅನಾಹುತ - TWO PLANES ON SAME RUNWAY

ಒಂದೇ ರನ್​ವೇಯಲ್ಲಿ ವಿಮಾನ ಟೇಕ್ ಆಫ್ ಆಗುವ ಸೆಕೆಂಡ್​ಗಳಲ್ಲೇ ಮತ್ತೊಂದು ವಿಮಾನ ಲ್ಯಾಂಡಿಂಗ್ ಆಗಿರುವ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Representative image
ಸಾಂದರ್ಭಿಕ ಚಿತ್ರ (ETV Bharat)
author img

By PTI

Published : Jun 9, 2024, 4:26 PM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಧಾನಿ ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಇಂಡಿಗೋ ವಿಮಾನ ರನ್‌ವೇಯಿಂದ ಟೇಕ್ ಆಫ್ ಆದ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲೇ ಅದೇ ರನ್​ವೇ ಮೇಲೆ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್​ ಆಗಿದೆ. ಸೆಕೆಂಡ್​ಗಳಲ್ಲಿ ಏನಾದರೂ ವ್ಯತ್ಯಾಸವಾಗಿದ್ದರೂ, ಎರಡೂ ವಿಮಾನಗಳ ಮಧ್ಯೆ ಅಪಘಾತದ ಸಂಭವ ಇತ್ತು. ಹೀಗಾಗಿ ಈ ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಈ ಘಟನೆ ನಡೆದಿದೆ. ಒಂದೇ ರನ್‌ವೇಯಿಂದ ಒಂದು ವಿಮಾನ ಲ್ಯಾಂಡಿಂಗ್ ಮತ್ತು ಇನ್ನೊಂದು ವಿಮಾನ ಟೇಕ್ ಆಫ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಈ ಸಮಯದಲ್ಲಿ ಕರ್ತವ್ಯದಲ್ಲಿದ್ದ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಅಧಿಕಾರಿಯನ್ನು ಪದಚ್ಯುತಗೊಳಿಸಲಾಗಿದೆ. ಮತ್ತೊಂದೆಡೆ, ಈ ಘಟನೆ ಬಗ್ಗೆ ಇಂಡಿಗೋ ವಿಮಾನಯಾನ ಸಂಸ್ಥೆ ಕೂಡ ತನಿಖೆ ಪ್ರಾರಂಭಿಸಿದೆ.

ಕೆಲ ಸೆಕೆಂಡ್​ಗಳಲ್ಲೇ ಎರಡು ವಿಮಾನಗಳು ಲ್ಯಾಂಡಿಂಗ್​, ಟೇಕ್ಆಫ್​ ಆದ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಘಟನೆಯಲ್ಲಿ ಭಾಗಿಯಾಗಿರುವ ಏರ್ ಟ್ರಾಫಿಕ್ ಕಂಟ್ರೋಲರ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ಕ್ರಾಸಿಂಗ್ ರನ್‌ವೇಗಳೊಂದಿಗೆ ಏಕ-ರನ್‌ವೇ ಕಾರ್ಯಾಚರಣೆ ನಡೆಸಲಾಗುತ್ತದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ರನ್‌ವೇ ಆರ್​​ಡಬ್ಲ್ಯೂ 27ರಲ್ಲಿ ಗಂಟೆಗೆ ಸುಮಾರು 46 ವಿಮಾನಗಳು ಆಗಮನ ಮತ್ತು ನಿರ್ಗಮನ ಆಗುತ್ತವೆ. ಎಟಿಸಿ ಸೂಚನೆ ಮೇರೆಗೆ ವಿಮಾನವು ಸಂಚಾರ ಮತ್ತು ಲ್ಯಾಂಡಿಂಗ್​ಅನ್ನು ಮುಂದುವರೆಸಿತ್ತು ಎಂದು ಇಂಡಿಗೋ ಸಂಸ್ಥೆ ಹೇಳಿದೆ. ಜೂನ್ 8ರಂದು ಇಂದೋರ್‌ನಿಂದ ಇಂಡಿಗೋ 6ಇ 6053 ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಈ ವೇಳೆ, ಎಟಿಸಿ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಿತ್ತು. ಅಂತೆಯೇ, ಪೈಲಟ್ ಇನ್ ಕಮಾಂಡ್ ವಿಧಾನ ಮತ್ತು ಲ್ಯಾಂಡಿಂಗ್​ಅನ್ನು ಮುಂದುವರೆಸಿದರು. ಇದೇ ವೇಳೆ, ಪ್ರಯಾಣಿಕರ ಸುರಕ್ಷತೆಯೇ ನಮಗೆ ಮಹತ್ವದ್ದಾಗಿದೆ. ಈ ಘಟನೆ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಇಂಡಿಗೋ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮೂಲದ ಪ್ರಕಾರ, ನಿಯಮದಂತೆ ನಿರ್ಗಮಿಸುವ ವಿಮಾನಗಳು ರನ್‌ವೇಯ ಅಂತ್ಯ ದಾಟಬೇಕು ಅಥವಾ ತಿರುವು ತೆಗೆದುಕೊಳ್ಳಬೇಕು. ಅದರ ನಂತರವೇ ಎಟಿಸಿ ಆಗಮಿಸುವ ವಿಮಾನಗಳಿಗೆ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಬಹುದು. ಆದಾಗ್ಯೂ, ಶನಿವಾರದ ಘಟನೆ ಸಂದರ್ಭದಲ್ಲಿ ಈ ನಿಯಮ ಅನುಸರಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಂಬೈ ವಿಮಾನ ನಿಲ್ದಾಣವು ಹೆಚ್ಚಿನ ಸಾಂದ್ರತೆಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದರರ್ಥ ವಿಮಾನಗಳ ಚಲನೆಯ ಸಂಖ್ಯೆ ಹೆಚ್ಚಾಗಿರುತ್ತದೆ. ಏರ್ ಟ್ರಾಫಿಕ್ ಕಂಟ್ರೋಲರ್‌ಗಳು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳ ಪ್ರಕಾರ, ಕೆಲ ಷರತ್ತುಗಳ ಮೇರೆಗೆ ಮೂರು ನಿಮಿಷಗಳಲ್ಲಿ ಎರಡು ಆಗಮನ ಮತ್ತು ಎರಡು ನಿರ್ಗಮನಗಳಿಗೆ ಅನುಮತಿಸಬಹುದು. ವಿಮಾನ ಮತ್ತು ಪ್ರಯಾಣಿಕರ ಸುರಕ್ಷತೆಯೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಸಾಂದ್ರತೆಯ ದಟ್ಟಣೆ ಇರುವಾಗ ಎಟಿಸಿಗಳು ಗಮನಾರ್ಹ ಒತ್ತಡ ಇರುತ್ತವೆ ಎಂದೂ ಮೂಲಗಳು ತಿಳಿಸಿವೆ. ಸದ್ಯಕ್ಕೆ ಎಲ್ಲ ಮಾನದಂಡಗಳನ್ನು ಎಟಿಸಿ ಮತ್ತು ಪೈಲಟ್‌ಗಳು ಅನುಸರಿಸಿದ್ದಾರೆಯೇ ಎಂಬ ಬಗ್ಗೆ ಡಿಜಿಸಿಎ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: 2 ವಿಮಾನಗಳಿಗೆ ಏಕಕಾಲದಲ್ಲಿ ಟೇಕ್‌ಆಫ್, ಲ್ಯಾಂಡಿಂಗ್‌ಗೆ ಅವಕಾಶ! ದೆಹಲಿ ಏರ್‌ಪೋರ್ಟ್‌ನಲ್ಲಿ ತಪ್ಪಿದ ಅತಿದೊಡ್ಡ ದುರಂತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.