ETV Bharat / bharat

ಜಮ್ಮು ಕಾಶ್ಮೀರದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಸೋಲು - Jammu Kashmir Election Results - JAMMU KASHMIR ELECTION RESULTS

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಕಾಶ್ಮೀರದ ಇಬ್ಬರೂ ಮಾಜಿ ಸಿಎಂಗಳು ಸೋಲು ಕಂಡಿದ್ದಾರೆ.

ಮೆಹಬೂಬಾ ಮುಫ್ತಿ, ಮಾಜಿ ಸಿಎಂ
ಮೆಹಬೂಬಾ ಮುಫ್ತಿ (IANS)
author img

By ETV Bharat Karnataka Team

Published : Jun 4, 2024, 3:50 PM IST

ಶ್ರೀನಗರ: ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸೋಲು ಅನುಭವಿಸಿದ ಬೆನ್ನಲ್ಲೇ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ಸೋಲು ಕಂಡಿದ್ದಾರೆ.

ಒಮರ್ ಅಬ್ದುಲ್ಲಾ ಅವರು ಅವಾಮಿ ಇತಿಹಾದ್ ಪಕ್ಷದ (ಎಐಪಿ) ಎಂಜಿನಿಯರ್ ರಶೀದ್ ವಿರುದ್ಧ ಸೋತರೆ, ಮೆಹಬೂಬಾ ಮುಫ್ತಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಭ್ಯರ್ಥಿ ಮಿಯಾಂ ಅಲ್ತಾಫ್ ಅಹ್ಮದ್ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

"ಜನರ ತೀರ್ಪನ್ನು ಗೌರವಿಸುತ್ತೇನೆ. ಎಲ್ಲಾ ಅಡೆತಡೆಗಳ ನಡುವೆಯೂ ಕಠಿಣ ಪರಿಶ್ರಮ ಮತ್ತು ಬೆಂಬಲಕ್ಕಾಗಿ ನನ್ನ ಪಿಡಿಪಿ ಕಾರ್ಯಕರ್ತರು ಮತ್ತು ನಾಯಕರಿಗೆ ಧನ್ಯವಾದಗಳು. ನನಗೆ ಮತ ನೀಡಿದ ಜನರಿಗೆ ಕೃತಜ್ಞತೆಗಳು. ಗೆಲುವು ಮತ್ತು ಸೋಲು ಆಟದ ಒಂದು ಭಾಗವಾಗಿದೆ ಮತ್ತು ಈ ಸೋಲು ನಮ್ಮ ಗುರಿಯಿಂದ ನಮ್ಮನ್ನು ವಿಮುಖಗೊಳಿಸಲಾರದು." ಎಂದು ಮುಫ್ತಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಎನ್​ಸಿಯ ಸೈಯದ್ ರುಹುಲ್ಲಾ ಮೆಹ್ದಿ ಅವರು ತಮ್ಮ ಪಿಡಿಪಿ ಪ್ರತಿಸ್ಪರ್ಧಿ ವಹೀದ್ ಪರ್ರಾ ವಿರುದ್ಧ ಸಾಕಷ್ಟು ಹೆಚ್ಚಿನ ಮತಗಳ ಅಂತರದ ಲೀಡ್ ಪಡೆದುಕೊಂಡಿದ್ದಾರೆ. ಜಮ್ಮು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜುಗಲ್ ಕಿಶೋರ್ ಶರ್ಮಾ ಅವರು ಕಾಂಗ್ರೆಸ್‌ನ ರಮಣ್ ಭಲ್ಲಾ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಉಧಂಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಜಿತೇಂದ್ರ ಸಿಂಗ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಚೌಧರಿ ಲಾಲ್ ಸಿಂಗ್ ವಿರುದ್ಧ ಅಜೇಯ ಮುನ್ನಡೆ ಸಾಧಿಸಿದ್ದಾರೆ.

ಮಧ್ಯಪ್ರದೇಶದ ಒಂದು ಕೇಂದ್ರದಲ್ಲಿ ಎಣಿಕೆ ಸ್ಥಗಿತ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಸೀಲ್‌ಗಳು ಹೋಲಿಕೆಯಾಗುತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ರಾಜ್ ಘರ್ ಲೋಕಸಭಾ ಕ್ಷೇತ್ರದ ಮತದಾನ ಕೇಂದ್ರವೊಂದರಲ್ಲಿ ಮತ ಎಣಿಕೆಯನ್ನು ಸ್ಥಗಿತಗೊಳಿಸಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, "ಸಾರಂಗ್ ಪುರ ಮತಗಟ್ಟೆಯ ಇವಿಎಂಗಳ ಸೀಲ್ ಗಳು ಹೋಲಿಕೆಯಾಗುತ್ತಿಲ್ಲ. ಹೀಗಾಗಿ ನಾನು ಆಕ್ಷೇಪ ವ್ಯಕ್ತಪಡಿಸಿದೆ. ನಂತರ ಎಣಿಕೆಯನ್ನು ನಿಲ್ಲಿಸಲಾಯಿತು" ಎಂದು ಹೇಳಿದರು.

ಇವಿಎಂಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸುತ್ತಿರುವ ಪ್ರತಿಪಕ್ಷಗಳ ರಾಜಕಾರಣಿಗಳಲ್ಲಿ ದಿಗ್ವಿಜಯ್ ಕೂಡ ಒಬ್ಬರು. 2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್​ನಲ್ಲಿ ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಸೋಲು ಅನುಭವಿಸಿದ್ದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಈ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರ ರಾಜಗಢದಿಂದ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಕೇರಳದಲ್ಲಿ ಮೊದಲ ಖಾತೆ ತೆರೆದ ಬಿಜೆಪಿ: ನಟ ಸುರೇಶ್​ ಗೋಪಿಗೆ ಭರ್ಜರಿ ಗೆಲುವು - Suresh Gopi Victory

ETV Bharat Logo

Copyright © 2024 Ushodaya Enterprises Pvt. Ltd., All Rights Reserved.