ರಾಂಚಿ(ಜಾರ್ಖಂಡ್): ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ಇಂದು ಪೊಲೀಸರು ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಸಿಕಿಂದರ್ ಸಿಂಗ್ ಮತ್ತು ಶುಕರ್ ರಾಮ್ ಮೃತಪಟ್ಟಿದ್ದು, ಇತರ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ.
ಇಲ್ಲಿನ ಬೇರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಫೀಮು ಬೆಳೆ ನಾಶಗೊಳಿಸಿ ಪೊಲೀಸರು ಮರಳುತ್ತಿದ್ದರು. ಈ ವೇಳೆ, ಟಿಪಿಸಿ ನಕ್ಸಲ್ ಸಂಘಟನೆಯು ಪೊಲೀಸ್ ಪಡೆಗಳ ಮೇಲೆ ಹಠಾತ್ ದಾಳಿ ನಡೆಸಿದೆ. ಆಗ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಸಿಕಿಂದರ್ ಸಿಂಗ್, ಶುಕರ್ ರಾಮ್ ಹುತಾತ್ಮರಾಗಿದ್ದಾರೆ. ಕೃಷ್ಣ, ಆಕಾಶ್ ಮತ್ತು ಸಂಜಯ್ ಎಂಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳ ತಿಳಿಸಿವೆ. ಶುಕರ್ ರಾಮ್ ಪಾಲಮು ಜಿಲ್ಲೆಯ ನಿವಾಸಿಯಾಗಿದ್ದು, ಸಿಕಿಂದರ್ ಸಿಂಗ್ ಬಿಹಾರದ ಗಾಯಾ ಮೂಲದವರು ಎಂದು ತಿಳಿದು ಬಂದಿದೆ.
ಈ ಘಟನೆಯನ್ನು ಖಚಿತಪಡಿಸಿರುವ ಎಸ್ಡಿಪಿಒ ಸಂದೀಪ್ ಸುಮನ್, "ದಾಳಿಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಂಡು ರಾಜಧಾನಿ ರಾಂಚಿಗೆ ಏರ್ಲಿಫ್ಟ್ ಮಾಡಲಾಗುವುದು. ದಾಳಿಕೋರ ನಕ್ಸಲರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.
ಜನವರಿ 30ರಂದು ಛತ್ತೀಸ್ಗಢದಲ್ಲಿ ನಕ್ಸಲರು ದಾಳಿ ಮಾಡಿದ್ದರು. ಬಿಜಾಪುರ-ಸುಕ್ಮಾ ಜಿಲ್ಲೆಯ ಗಡಿಯಲ್ಲಿ ನಡೆಸಿದ್ದ ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ, ಇತರ 14 ಜನ ಸಿಬ್ಬಂದಿ ಗಾಯಗೊಂಡಿದ್ದರು. ಅಂದೂ ಕೂಡ ಎರಡು ಕಡೆಗಳಿಂದ ಗುಂಡಿನ ಚಕಮಕಿ ಉಂಟಾಗಿತ್ತು. ಫೆಬ್ರವರಿ 4ರಂದು ಭದ್ರತಾ ಸಿಬ್ಬಂದಿ ಇಬ್ಬರು ಮಹಿಳಾ ನಕ್ಸಲರನ್ನು ಎನ್ಕೌಂಟರ್ ಮಾಡಿದ್ದರು.
ಇದನ್ನೂ ಓದಿ: ಛತ್ತೀಸ್ಗಢ: ಇಬ್ಬರು ಮಹಿಳಾ ನಕ್ಸಲರ ಹತ್ಯೆ