ಹೈದರಾಬಾದ್: ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ತೆಲಂಗಾಣ ರಾಜ್ಯ ಆ್ಯಂಟಿ ನಾರ್ಕೊಟಿಕ್ಸ್ ಬ್ಯೂರೊ (ಟಿಎಸ್ಎನ್ಎಬಿ) ಬಂಧಿಸಿದೆ. ನಾನಕ್ರಮ್ಗುಡದಲ್ಲಿ ನೀತು ಬಾಯಿ ಎಂಬ ಮಹಿಳೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಮೇಲೆ ಬಂಧಿಸಲಾಗಿದೆ. ಇನ್ನು ಕಳೆದ ಎಂಟು ವರ್ಷದಲ್ಲಿ ಮಹಿಳೆಯ ಬ್ಯಾಂಕ್ ಖಾತೆಗಳಲ್ಲಿ ಕೋಟ್ಯಾಂತರ ರೂ ಜಮೆಯಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಮಹಿಳೆಯ ಬ್ಯಾಂಕ್ ಖಾತೆಯಲ್ಲಿ 1.63 ಕೋಟಿ ಪತ್ತೆಯಾಗಿದ್ದು, ಹೈದರಾಬಾದ್ನ ವಿವಿಧ ಭಾಗದಲ್ಲಿ 2 ಕೋಟಿ ರೂಗೂ ಅಧಿಕ ಆಸ್ತಿ ಹೊಂದಿರುವುದು ಕೂಡಾ ಪತ್ತೆಯಾಗಿದೆ.
ನಾನಕ್ರಮ್ಗುಡನ ಮನೆಯಲ್ಲಿ ಡ್ರಗ್ ಪೆಡ್ಲರ್ ಎಂಬ ಮಾಹಿತಿ ಮೇಲೆ ಟಿಎಸ್ಎನ್ಎಬಿ ಮಾರ್ಚ್ 13ರಂದು ದಾಳಿ ಮಾಡಿದಾಗ, ಮಹಿಳೆ ಗಾಂಜಾ ಮಾರಾಟ ಮಾಡುತ್ತಿರುವುದು ಕಂಡು ಬಂದಿತು. ಟಿಎಸ್ಎನ್ಎಬಿ ತಂಡವೂ ನೀತುಬಾಯಿ ಜೊತೆಗೆ ಆಕೆಯ ಗಂಡ ಮುನ್ನುಸಿಂಗ್ (53), ಆಪ್ತ ಸಂಬಂಧಿ ಸುರೇಖಾ (38), ಮಮತಾ (50) ವಶಕ್ಕೆ ಪಡೆದು, ಗಾಂಜಾ ಕೊಳ್ಳುತ್ತಿದ್ದ 13 ಜನರನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ. ಧುಲ್‌ಪೇಟೆಯ ಅಂಗುರಿ ಬಾಯಿ ಮತ್ತು ಗೌತಮ್ ಸಿಂಗ್ ಮತ್ತು ನಾನಕ್ರನ್‌ಗುಡದ ನೇಹಾಬಾಯಿ ಎಂಬ ಮೂವರು ತಲೆಮರೆಸಿಕೊಂಡಿದ್ದು, ಅವರಿಗೆ ಶೋಧ ಆರಂಭವಾಗಿದೆ ಎಂದು ಟಿಎಸ್ಎನ್ಎಬಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಟಿಎಸ್ಎನ್ಎಬಿ ನಿರ್ದೇಶಕ ಸಂದೀಪ್ ಸಂದಿಲ್ಯಾ, 22.6 ಕೆಜಿ ಗಾಂಜಾ, ಎರಡು ಫೋನ್ ಮತ್ತು 22.10 ಲಕ್ಷ ಹಣ ಅನ್ನು ಬಂಧಿತರಿಂದ ಸೀಜ್ ಮಾಡಲಾಗಿದೆ ಎಂದರು.
ಸುಲಭವಾಗಿ ದುಡ್ಡು ಸಂಪಾದಿಸಬಹುದು ಎಂಬ ಉದ್ದೇಶದಿಂದ ನೀತುಬಾಯಿ ಮತ್ತು ಅವರ ಸಂಬಂಧಿಕರು ಡ್ರಗ್ ಪೆಡ್ಲಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಧುಲ್‌ಪೇಟೆಯ ಅಂಗುರಿಬಾಯಿ ಯಿಂದ 8 ಸಾವಿರ ಮೌಲ್ಯದ ಒಂದು ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು 5 ಗ್ರಾಂನ ಚಿಕ್ಕ ಪ್ಯಾಕೆಟ್ ಮಾಡಿ 500 ರೂಗೆ ಮಾರಾಟ ಮಾಡುತ್ತಿದ್ದರು. ಈ ಮೂಲಕ ಕೆಜಿ ಗಾಂಜಾಕ್ಕೆ 50 ಸಾವಿರ ಸಂಪಾದಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನೀತು ಬಾಯಿ ಬಳಿಯ 4 ಕೋಟಿ ಆಸ್ತಿ ಪತ್ತೆಯಾಗಿದ್ದು, ಆಕೆ ಮತ್ತು ಆಕೆಯ ಗಂಡ ಮತ್ತಿತ್ತರನ್ನು ಎನ್ಡಿಪಿಎಸ್ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದರು.
ಇದನ್ನೂ ಓದಿ: ಜೈಲಲಿದ್ದು ಬಂದರೂ ಬದಲಾಗದ ವ್ಯಕ್ತಿ: ಎರಡನೇ ಬಾರಿ ಗಾಂಜಾ ಮಾರಾಟ ಸಾಬೀತಾಗಿ 6 ವರ್ಷ ಕಠಿಣ ಶಿಕ್ಷೆ