ETV Bharat / bharat

ಬೆಳೆ ನಾಶಪಡಿಸಿದ್ದನ್ನು ವಿರೋಧಿಸಿದ ​ಬುಡಕಟ್ಟು ಯುವತಿಯ ಬಾಯಿಗೆ ಮಲ ತಿನ್ನಿಸಿ ದುಷ್ಕೃತ್ಯ!

ಒಡಿಶಾದಲ್ಲಿ ಟ್ರಾಕ್ಟರ್‌ ಚಾಲಕನೋರ್ವ ತನ್ನ ವಿರುದ್ಧ ಪ್ರತಿಭಟಿಸಿದ್ದ ಬುಡಕಟ್ಟು ಯುವತಿಯ ಬಾಯಿಗೆ ಬಲವಂತವಾಗಿ ಮಲ ತಿನ್ನಿಸಿದ್ದಾನೆ.

ಬಂಗೋಮುಂಡ ಪೊಲೀಸ್ ಠಾಣೆ, ಒಡಿಶಾ
ಬಂಗೋಮುಂಡ ಪೊಲೀಸ್ ಠಾಣೆ, ಒಡಿಶಾ (ETV Bharat)
author img

By ETV Bharat Karnataka Team

Published : 3 hours ago

ಬಲಂಗಿರ್(ಒಡಿಶಾ)​: ತನ್ನ ಜಮೀನಿನಲ್ಲಿದ್ದ ಬೆಳೆಯನ್ನು ಟ್ರಾಕ್ಟರ್‌ ಮೂಲಕ ನಾಶಪಡಿಸಿದ್ದನ್ನು ವಿರೋಧಿಸಿದ ​ಬುಡಕಟ್ಟು ಯುವತಿಯ ಬಾಯಿಗೆ ಬಲವಂತವಾಗಿ ಮಾನವ ಮಲ ತಿನ್ನಿಸಿದ ಅಮಾನವೀಯ ಘಟನೆ ಒಡಿಶಾದ ಬಲಂಗಿರ್​ ಜಿಲ್ಲೆಯಲ್ಲಿ ನಡೆದಿದೆ.

ನವೆಂಬರ್​ 16ರಂದು ಬಂಗೋಮುಂಡ ಪೊಲೀಸ್ ಠಾಣಾ ವ್ಯಾಪ್ತಿಯ ಜುರಬಂಧ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸ್​ ಅಧಿಕಾರಿಗಳು ಖಚಿತಪಡಿಸಿದ್ದಾರೆ.

"20 ವರ್ಷದ ಬುಡಕಟ್ಟು ಸಮುದಾಯದ ಯುವತಿ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಅಭಯ್ ಬಾಗ್ ಎಂಬಾತ ಆಕೆಯ ಕೃಷಿ ಭೂಮಿಗೆ ಟ್ರ್ಯಾಕ್ಟರ್​ ಹತ್ತಿಸಿ ಬೆಳೆ ಹಾನಿಗೊಳಿಸಿದ್ದಾನೆ.​ ಇದನ್ನು ಆಕೆ ವಿರೋಧಿಸಿದ್ದಾಳೆ. ಬಳಿಕ ಯುವತಿ ಗ್ರಾಮದ ಸಮೀಪದ ಕೊಳದಿಂದ ಹಿಂತಿರುಗುತ್ತಿದ್ದಾಗ ಆರೋಪಿ ಟ್ರ್ಯಾಕ್ಟರ್ ಚಾಲಕ, ಆಕೆಯ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ಮನುಷ್ಯನ ಮಲ ತಿನ್ನಿಸಿದ್ದಾನೆ" ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಯುತ್ತಿದೆ" ಎಂದು ಕಾಂತಾಬಂಜಿ ಎಸ್‌ಡಿಪಿಒ ಗೌರಂಗ್ ಚರಣ್ ಸಾಹು ಹೇಳಿದರು.

"ಆರೋಪಿ ಚಾಲಕನನ್ನು ಬಂಧಿಸಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ" ಎಂದು ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿ ಖಿಲಾರಿ ರಿಷಿಕೇಶ್ ಜ್ಞಾನಂಡಿಯೊ ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ, "ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಬಿಜೆಡಿ ಸಂಸದ ನಿರಂಜನ್ ಬಿಶಿ ಭುವನೇಶ್ವರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದಾರೆ.

ಅಮಾನವೀಯ ಘಟನೆ ಬುಡಕಟ್ಟು ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:68 ಜನರ ಬಲಿ ಪಡೆದ ಕಲ್ಲಕುರಿಚಿ ಕಳ್ಳಭಟ್ಟಿ ದುರಂತದ ತನಿಖೆ ಸಿಬಿಐಗೆ ಹಸ್ತಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.