ETV Bharat / bharat

ಐಐಎಸ್​​ಸಿಯಲ್ಲಿ 2,100 ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ತಂತ್ರಜ್ಞಾನ ತರಬೇತಿ: ಕೇಂದ್ರ ಸರ್ಕಾರ - Semiconductor Technology Training

ಐಐಎಸ್​​ಸಿ ಮೂಲಕ 2,100 ಬುಡಕಟ್ಟು ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಸೆಮಿಕಂಡಕ್ಟರ್ ತಂತ್ರಜ್ಞಾನ ತರಬೇತಿ
ಸೆಮಿಕಂಡಕ್ಟರ್ ತಂತ್ರಜ್ಞಾನ (ETV Bharat)
author img

By PTI

Published : Aug 8, 2024, 8:02 PM IST

ನವದೆಹಲಿ: ದೇಶದಲ್ಲಿ ಸೆಮಿಕಂಡಕ್ಟರ್​ ತಯಾರಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರ ಯುವಕರಿಗೆ ಈ ಬಗ್ಗೆ ತರಬೇತಿ ಆರಂಭಿಸಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮುಂದಿನ ಮೂರು ವರ್ಷಗಳಲ್ಲಿ ಬುಡಕಟ್ಟು ಸಮುದಾಯದ 1,500 ಮಂದಿಗೆ ಮೂಲ ತರಬೇತಿ ಮತ್ತು 600 ವಿದ್ಯಾರ್ಥಿಗಳಿಗೆ ಅರೆವಾಹಕ ತಂತ್ರಜ್ಞಾನದಲ್ಲಿ ಸುಧಾರಿತ ತರಬೇತಿಯನ್ನು ನೀಡಲಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಗುರುವಾರ ತಿಳಿಸಿದೆ.

ಬಿಜೆಪಿ ಸಂಸದ ಸಿ.ಎಂ.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ದುರ್ಗಾದಾಸ್ ಉಯಿಕೆ, ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಮತ್ತು ಕ್ಯಾರೆಕ್ಟರೈಸೇಶನ್ ತರಬೇತಿಯನ್ನು ಭಾರತೀಯ ವಿಜ್ಞಾನ ಕೇಂದ್ರದ ನ್ಯಾನೊ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಿಂದ ಕೊಡಿಸಲಾಗುತ್ತಿದೆ ಎಂದರು.

ಮುಂದಿನ ಮೂರು ವರ್ಷಗಳಲ್ಲಿ 2100 ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಸುಧಾರಿತ ಮಟ್ಟದಲ್ಲಿ 6.0 ಮತ್ತು ಅರೆವಾಹಕದಲ್ಲಿ 6.5 ತರಬೇತಿಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ. 2023-24 ರ ಹಣಕಾಸು ವರ್ಷದಲ್ಲಿ ಕೇಂದ್ರ ವಲಯದ ಯೋಜನೆಯಾದ ಬುಡಕಟ್ಟು ಸಂಶೋಧನಾ ಮಾಹಿತಿ, ಶಿಕ್ಷಣ, ಸಂವಹನ ಮತ್ತು ಕಾರ್ಯಕ್ರಮಗಳ (TRI-ECE) ಅಡಿಯಲ್ಲಿ ಈ ತರಬೇತಿ ಸಿಗಲಿದೆ ಎಂದರು.

ಸೆಮಿಕಂಡಕ್ಟರ್​​ ತರಬೇತಿ ಪಡೆಯಲು ಬಯಸುವ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿರಬೇಕು. ಅಂಥವರು ಅರ್ಜಿ ಸಲ್ಲಿಸಲು ಅರ್ಹರು. ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ತರಬೇತಿ ನೀಡಲು ಐಐಎಸ್​​ಸಿ ಸೇರಿದಂತೆ 6 ದೊಡ್ಡ ನ್ಯಾನೊ ಕೇಂದ್ರಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ರಚಿಸಿದೆ ಎಂದು ಅವರು ಹೇಳಿದರು.

ಈ ನ್ಯಾನೋ ಕೇಂದ್ರಗಳಲ್ಲಿನ ಕಾರ್ಯಕ್ರಮಗಳು ಮೀಸಲಾತಿ ನೀತಿಗಳ ಪ್ರಕಾರ ಬುಡಕಟ್ಟು ಸಮುದಾಯದ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ಹೊಂದಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಇದನ್ನೂ ಓದಿ: ಲೋಕಸಭೆಯಲ್ಲಿ ವಕ್ಫ್​ ತಿದ್ದುಪಡಿ ವಿಧೇಯಕ ಮಂಡನೆ: ಪ್ರತಿಪಕ್ಷಗಳ ವಿರೋಧ, ಸಂಸದೀಯ ಮಂಡಳಿಗೆ ಶಿಫಾರಸು - Waqf Bill

ETV Bharat Logo

Copyright © 2024 Ushodaya Enterprises Pvt. Ltd., All Rights Reserved.