ETV Bharat / bharat

ಪರಿಸರದ ಮೇಲೆ ಪೊಲೀಸ್​ ಪ್ರೀತಿ; ದುಡಿದ ಹಣವೆಲ್ಲ ಗಿಡ ನೆಡುವುದಕ್ಕೇ ಖರ್ಚು, ₹ 35 ಲಕ್ಷ​ ಸಾಲ​! - Chandigarh Tree Man - CHANDIGARH TREE MAN

Tree Man Of Chandigarh : ಆತ ಪರಿಸರ ಪ್ರೇಮಿ.. ತನ್ನ ಸಂಪೂರ್ಣ ಮಾಸಿಕ ಸಂಬಳ ಸಸಿಗಳನ್ನು ಬೆಳೆಸುವುದಕ್ಕೆ ಖರ್ಚು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಗಿಡ ನೆಡಲು ಸುಮಾರು 35 ಲಕ್ಷ ರೂಪಾಯಿ ಬ್ಯಾಂಕ್ ಸಾಲವನ್ನು ತೆಗೆದುಕೊಂಡಿದ್ದಾರೆ.

CONSTABLE DEVENDRA SURA  TREE MAN OF CHANDIGARH  HARYANA TREE MAN  HOT WEAHER SOLUTION
ದೇವೇಂದ್ರ ಸುರಾ (ಕೃಪೆ: ETV Bharat Haryana)
author img

By ETV Bharat Karnataka Team

Published : Jun 1, 2024, 1:04 PM IST

ಚಂಡೀಗಢ (ಹರಿಯಾಣ): ಹರಿಯಾಣ, ಚಂಡೀಗಢ ಸೇರಿದಂತೆ ಉತ್ತರ ಭಾರತ ಬಿಸಿಲಿನ ತಾಪಮಾನಕ್ಕೆ ತತ್ತರಿಸಿದೆ. ಹರಿಯಾಣದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿದೆ. ಬೇಸಿಗೆಯ ತಾಪ ತಾಳಲಾರದೆ ಜನ ಸಾಯುತ್ತಿದ್ದಾರೆ. ಈ ಕ್ರಮದಲ್ಲಿ ಹರಿಯಾಣ ಮತ್ತು ಚಂಡೀಗಢದ ಜನತೆ ಕಳೆದ 10 ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ವ್ಯಕ್ತಿಯನ್ನು ಸ್ಮರಿಸುತ್ತಿದ್ದಾರೆ. ಬ್ಯಾಂಕಿನಲ್ಲಿ ಲಕ್ಷ ಲಕ್ಷ ಸಾಲ ಪಡೆದು 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ ಆ ವ್ಯಕ್ತಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆ ವ್ಯಕ್ತಿ ಯಾರು? ಅವರು ಮಾಡಿರುವ ಪರಿಸರ ಜಾಗೃತಿಯ ಕಾರ್ಯ ಯಾವುದೆಂದು ತಿಳಿಯೋಣ ಬನ್ನಿ..

CONSTABLE DEVENDRA SURA  TREE MAN OF CHANDIGARH  HARYANA TREE MAN  HOT WEAHER SOLUTION
ಪೊಲೀಸ್​ ಕಾನ್​​ಸ್ಟೇಬಲ್​​ ದೇವೇಂದ್ರ ಸುರಾ (ಕೃಪೆ: ETV Bharat Haryana)

ಯಾರೀ 'ಟ್ರೀ ಮ್ಯಾನ್': ಹರಿಯಾಣದ ಸೋನಿಪತ್ ಜಿಲ್ಲೆಯ ದೇವೇಂದ್ರ ಸುರಾ ಚಂಡೀಗಢದಲ್ಲಿ ಪೊಲೀಸ್ ಕಾನ್​​ಸ್ಟೇಬಲ್​ ಕೆಲಸ ಮಾಡುತ್ತಿದ್ದಾರೆ. 2014ರಿಂದ ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಸಂಬಳವೆಲ್ಲ ಗಿಡಗಳನ್ನು ನೆಡುವುದಕ್ಕೆ ಖರ್ಚಾಗುತ್ತದೆ. ಹಾಗಾಗಿಯೇ ಹರಿಯಾಣದ ಜನರು ಅವರನ್ನು ಪ್ರೀತಿಯಿಂದ ‘ಟ್ರೀ ಮ್ಯಾನ್’ ಎಂದು ಕರೆಯುತ್ತಾರೆ. ದೇವೇಂದ್ರ ಸುರ ಅವರು ತಮ್ಮ ಸ್ವಂತ ಜಿಲ್ಲೆಯ ಸೋನಿಪತ್‌ನಲ್ಲಿ ನರ್ಸರಿ ಸ್ಥಾಪಿಸಿದ್ದು, ಅದಕ್ಕೆ ಜನತಾ ನರ್ಸರಿ ಎಂದು ಹೆಸರಿಟ್ಟಿದ್ದಾರೆ.

2.25 ಗಿಡ ನೆಟ್​ ಪೊಲೀಸ್ ಕಾನ್​ಸ್ಟೇಬಲ್​​: ನಾನು ಸಾಮಾನ್ಯ ಜೀವನವನ್ನು ನಡೆಸುತ್ತೇನೆ. ನಾನು ಪ್ರಕೃತಿಯನ್ನು ತುಂಬಾ ಪ್ರೀತಿಸುತ್ತೇನೆ. ನಾನು ಪ್ರತಿ ವರ್ಷ ಸಾವಿರಾರು ಮರಗಳನ್ನು ನೆಡುತ್ತೇನೆ. ಕಳೆದ ಹತ್ತು ವರ್ಷಗಳಲ್ಲಿ ವಿವಿಧ ಪ್ರದೇಶಗಳಲ್ಲಿ 2.25 ಲಕ್ಷ ಸಸಿಗಳನ್ನು ನೆಡಲಾಗಿದೆ. ಇದುವರೆಗೆ ವಿವಿಧ ಬ್ಯಾಂಕ್​ಗಳಲ್ಲಿ ತೋಟಕ್ಕೆ 35 ಲಕ್ಷ ರೂ. ಸಾಲ ಮಾಡಿದ್ದೇನೆ. ನಾನು ನನ್ನ ಸಂಬಳವನ್ನು ಗಿಡ ನೆಡಲು ಮಾತ್ರ ಖರ್ಚು ಮಾಡುತ್ತೇನೆ. ನನ್ನ ತಂದೆ (ನಿವೃತ್ತ ಜವಾನ್) ಮನೆಯ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ. ಸಸ್ಯ ಸಂವರ್ಧನೆಯಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಆದರೆ ಚಂಡೀಗಢ ಡಿಜಿಪಿ, ಎಸ್‌ಎಸ್‌ಪಿ ಮತ್ತು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ನನಗೆ ಸಹಾಯ ಮಾಡಿದರು. ನನ್ನ ಬಳಿ ಎರಡು ಸೈಕಲ್ ಇವೆ. ಅದರ ಮೇಲೆ ಕೆಲವು ಪ್ರಯಾಣಗಳನ್ನು ಮಾಡುತ್ತೇನೆ. ನಾನು ದೂರದ ಸ್ಥಳಗಳಿಗೆ ಹೋಗಬೇಕಾದರೆ ರೈಲು ಅಥವಾ ಬಸ್ಸಿನಲ್ಲಿ ಹೋಗುತ್ತೇನೆ ಎಂದು ಪೊಲೀಸ್ ಕಾನ್​​ಸ್ಟೇಬಲ್​​ ದೇವೇಂದ್ರ ಸುರಾ ತಿಳಿಸಿದರು.

'ಯುವಕರ ಸಹಕಾರ': ಬಿಡುವಿನ ವೇಳೆಯಲ್ಲಿ ಸೋನಿಪತ್, ರೋಹ್ಟಕ್, ಮಹೇಂದ್ರಗಢ್ ಮತ್ತು ಕರ್ನಾಲ್ ಸೇರಿದಂತೆ ಹರಿಯಾಣದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ನಿಸರ್ಗವನ್ನು ಪ್ರೀತಿಸುವ ಯುವಕರ ಸಹಕಾರದಿಂದ ಎಲ್ಲೆಂದರಲ್ಲಿ ಗಿಡ ನೆಡುವ ಬಗ್ಗೆ ಪ್ರಚಾರ ಮಾಡುತ್ತೇನೆ. ಪಂಚಾಯಿತಿ ಜಾಗ ಹಾಗೂ ಇತರೆ ಸರ್ಕಾರಿ ಖಾಲಿ ಜಾಗಗಳಲ್ಲಿ ಸಸಿ ನೆಡುತ್ತೇನೆ. ಹಲವು ಜಿಲ್ಲೆಗಳಿಂದ ಯುವಕರು ಸಸಿ ನೆಡಲು ಕರೆ ನೀಡುತ್ತಿದ್ದಾರೆ ಎಂದು ದೇವೇಂದ್ರ ಸುರಾ ಸಂತಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿಯಿಂದ ಸನ್ಮಾನ (ಕೃಪೆ: ETV Bharat Haryana)

ಕೇಂದ್ರ ಸಚಿವ ನಿತಿನ್ ಗಡ್ಕರಿಯಿಂದ ಸನ್ಮಾನ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 2023 ರಲ್ಲಿ ಐಐಟಿ ದೆಹಲಿಯಲ್ಲಿ ಕಾನ್​​ಸ್ಟೇಬಲ್​ ದೇವೇಂದ್ರ ಸುರಾ ಅವರನ್ನು ಪರಿಸರ ಮತ್ತು ಪ್ರಕೃತಿ ಸಂರಕ್ಷಣೆಯಲ್ಲಿ ಮಾಡಿದ ಕೆಲಸಕ್ಕಾಗಿ ಸನ್ಮಾನಿಸಿದರು. ದೇವೇಂದ್ರ ಪ್ರಸ್ತುತ ಚಂಡೀಗಢ ಪೊಲೀಸ್ ಇಲಾಖೆಯಲ್ಲಿ ವಿಐಪಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಓದಿ: ಬಿತ್ತನೆ ಬೀಜ, ಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲ ಎಂದ ಬೊಮ್ಮಾಯಿ; ಕೃಷಿ ಸಚಿವರು ಹೇಳಿದ್ದೇನು? - Basavaraj Bommai

ETV Bharat Logo

Copyright © 2025 Ushodaya Enterprises Pvt. Ltd., All Rights Reserved.