ETV Bharat / bharat

ಕಾಟನ್​​​ ಕ್ಯಾಂಡಿ ನಿಷೇಧಿಸಿದ ತಮಿಳುನಾಡು: ಈ ಕಾರಣಕ್ಕೆ ಬ್ಯಾನ್​ - ಕ್ಯಾಟನ್​ ಕ್ಯಾಂಡಿ ನಿಷೇಧಿಸಿದ

ತಮಿಳುನಾಡಿನಲ್ಲಿ ಪಂಜು ಮಿಠಾಯಿ ಎಂದೇ ಖ್ಯಾತಿ ಪಡೆದಿರುವ ಕಾಟನ್​ ಕ್ಯಾಂಡಿಯಲ್ಲಿ ಕ್ಯಾನ್ಸರ್​ಕಾರಕ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಇದರ ಮಾರಾಟದ ಮೇಲೆ ನಿಷೇಧ ಹೇರಿದೆ.

http://10.10.50.85:6060/reg-lowres/17-February-2024/cotton-candy_1702newsroom_1708153030_843.jpg

author img

By ETV Bharat Karnataka Team

Published : Feb 17, 2024, 12:58 PM IST

ಚೈನ್ನೈ( ತಮಿಳುನಾಡು)​: ಬಾಯಲ್ಲಿ ಇಟ್ಟರೆ ಕರಗುವಂತಹ ಬಣ್ಣ ಬಣ್ಣದ ಚಿಣ್ಣರ ಅಚ್ಚುಮೆಚ್ಚಿನ ಕಾಟನ್​ ಕ್ಯಾಂಡಿಯನ್ನು ಇತ್ತೀಚಿಗೆ ಪಾಂಡಿಚೇರಿ ಸರ್ಕಾರ ನಿಷೇಧಿಸಿದೆ. ಇದೀಗ ಅದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕೂಡ ಈ ಕಾಟನ್​​​ ಕ್ಯಾಂಡಿ ನಿಷೇಧಿಸಿ, ಶನಿವಾರ ಆದೇಶಿಸಿದೆ.

ಕಾಟನ್​ ಕ್ಯಾಂಡಿಯಲ್ಲಿನ ಬಣ್ಣಕ್ಕಾಗಿ ಬಳಕೆ ಮಾಡುತ್ತಿರುವ ವಸ್ತುವೂ ವಿಷಕಾರಿಯಾಗಿದ್ದು, ಕ್ಯಾನ್ಸರ್​ ಕಾರಕ ರಾಸಾಯನಿಕ ಅಂಶವನ್ನು ಹೊಂದಿರುವ ಹಿನ್ನಲೆ ಕಾಟನ್​ ಕ್ಯಾಂಡಿಯನ್ನು ತಮಿಳುನಾಡು ಸರ್ಕಾರ ನಿಷೇಧ ಹೇರಿದೆ. ಕಾಟನ್​ ಕ್ಯಾಂಡಿಯಲ್ಲಿ ರೋಡಮಿನ್ ಬಿ ಎಂಬ ಕೃತಕ ಬಣ್ಣವನ್ನು ಬಳಕೆ ಮಾಡಲಾಗುತ್ತಿದೆ. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆ 2006ರ ಸೆಕ್ಷನ್​ ಅಡಿ ಇದು ಅಸುರಕ್ಷಿತ ಎಂದು ದೃಢಪಟ್ಟಿದೆ. ಇದೀಗ ಕಾಟನ್​ ಕ್ಯಾಂಡಿಯಲ್ಲಿ ಈ ಅಂಶ ಇರುವ ಸಂಬಂಧ ಸರ್ಕಾರ ಆಹಾರ ವಿಶ್ಲೇಷಣೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದೆ. ಈ ವೇಳೆ, ಇದರಲ್ಲಿ ಹಾನಿಕಾರ ರಾಸಾಯನಿಕ ಇರುವುದು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006ರ ಪ್ರಕಾರ ರೋಡಮಿನ್​ ಬಿ ಎಂಬ ಕೃತಕ ಬಣ್ಣವನ್ನು ಸಾರ್ವಜನಿಕ ಸಮಾರಂಭಗಳಲ್ಲಿ ತಯಾರಿಕೆ, ಪ್ಯಾಕೇಜಿಂಗ್, ಆಮದು ಮಾಡಿಕೊಳ್ಳುವುದು, ಮಾರಾಟ ಮಾಡುವುದು, ಸೇವೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ.

ಈ ಕುರಿತು ಮಾತನಾಡಿರುವ ಆರೋಗ್ಯ ಮತ್ತು ಸಾರ್ವಜನಿಕ ಕಲ್ಯಾಣ ಸಚಿವ ಮಾ ಸುಬ್ರಮಣಿಯನ್​​, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಆಯುಕ್ತರು ಎಲ್ಲ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಏನಿದು ರೋಡಮಿನ್​ ಬಿ?: ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್​ಐಎಚ್​) ಪ್ರಕಾರ, ರೊಡಮಿನ್​ ಅನ್ನು ಆರ್​ಎಚ್​ಬಿ ಎಂದು ಕೂಡ ಕರೆಯಲಾಗುವುದು. ಈ ರೋಡಮಿನ್​ ಬಿ ಎಂಬುದು ಸಿಂಥೆಟಿಕ್​ ಡೈ ಆಗಿ ಹಲವು ಉದ್ಯಮದಲ್ಲಿ ಬಳಕೆ ಮಾಡಲಾಗುವುದು. ಇದನ್ನು ಹೆಚ್ಚಾಗಿ ಜವಳಿ, ಇಂಕ್​ ಮತ್ತು ಕಾಸ್ಮೆಟಿಕ್​ನಲ್ಲಿ ಬಳಕೆ ಮಾಡಲಾಗುತ್ತದೆ. ಆರ್​ಎಚ್​ಬಿ ದೇಹದ ಒಳಗೆ ಆಹಾರದ ಮೂಲಕ ಸೇರಿದಲ್ಲಿ ಇದು ಅಂಗಾಂಶದ ಮೇಲೆ ಒತ್ತಡ ಹಾಕುತ್ತದೆ. ಜೊತೆಗೆ ಕ್ಯಾನ್ಸರ್​ ಅಥವಾ ಯಕೃತ್​​​​ ಕಾರ್ಯಾಚರಣೆಗೆ ತೊಡಕು ಮೂಡಿಸುವಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಂಶವು ಇದು ದೇಹಕ್ಕೆ ಸೇರಿದಲ್ಲಿ ಅದು ವಿಷಕಾರಿಯಾಗುತ್ತದೆ.

ಭಾರತದಲ್ಲಿ ಅಗ್ಗದ ದರದಲ್ಲಿ ಈ ಆಹಾರ ಉತ್ಪನ್ನದ ಬಣ್ಣವೂ ದೊರೆಯುವುದರಿಂದ ಇದನ್ನು ಅಕ್ರಮವಾಗಿ ಬಳಕೆ ಮಾಡಲಾಗುತ್ತಿದೆ. ಆಹಾರ ಸುರಕ್ಷತಾ ನಿಯಮದಡಿ ಇದನ್ನು ಬಳಕೆ ಮಾಡದಂತೆ ಕೆಲವು ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಅಮೇಥಿಯಲ್ಲಿ ಹೊಸ ಮನೆ ಕಟ್ಟಿಸಿದ ಸ್ಮೃತಿ ಇರಾನಿ: ಫೆಬ್ರವರಿ 22ಕ್ಕೆ ಗೃಹಪ್ರವೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.