ETV Bharat / bharat

ವಿಜಯ್​​ ಪಕ್ಷ ಸಕ್ರಿಯವಾಗುತ್ತಿದ್ದಂತೆ ತಮಿಳುನಾಡು ಬಿಜೆಪಿಯಲ್ಲಿ ಅಣ್ಣಾಮಲೈ ರಾಜೀನಾಮೆಗೆ ಹೆಚ್ಚಿದ ಒತ್ತಡ - ANNAMALAIS REMOVAL AS TN CHIEF

2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಲವು ಭೇಟಿ ಮತ್ತು ಹೆಚ್ಚಿನ ಪ್ರಚಾರದ ನಡುವೆಯೂ ಒಂದು ಸೀಟು ಗೆಲ್ಲುವಲ್ಲಿ ಬಿಜೆಪಿ ವಿಫಲವಾಯಿತು ಎಂಬ ಅಂಶವನ್ನು ನಾಯಕರು ಒತ್ತಿ ಹೇಳಿದ್ದಾರೆ.

TN BJP some Leader writes letter to high command to remove annamalai from president post
ಕೆ ಅಣ್ಣಾಮಲೈ (IANS)
author img

By ETV Bharat Karnataka Team

Published : Nov 9, 2024, 10:51 AM IST

ಚೆನ್ನೈ: ತಮಿಳು ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಬೃಹತ್​ ಸಮಾವೇಶವನ್ನು ನಟ ವಿಜಯ್​ ಯಶಸ್ವಿಯಾಗಿ ನಿರ್ವಹಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದರ ಬೆಳವಣಿಗೆ ಬೆನ್ನ ಹಿಂದೆ ಇದೀಗ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಪಕ್ಷದ ಒಂದು ಬಣ ಒತ್ತಾಯಿಸಿದೆ.

ಕೆ. ಅಣ್ಣಾಮಲೈ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮೂರು ತಿಂಗಳ ಕಾಲ ಅಂತಾರಾಷ್ಟ್ರೀಯ ಸಂಬಂಧಗಳ ಅಧ್ಯಯನಕ್ಕೆ ತೆರಳಿದ್ದು, ಇದೇ ನವೆಂಬರ್​ 28ರಂದು ಚೆನ್ನೈಗೆ ಮರಳುತ್ತಿದ್ದಾರೆ. ಈ ನಡುವೆ ಪಕ್ಷದ ಕೆಲ ನಾಯಕರು ಅಣ್ಣಾಮಲೈ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಕೋರಿ ಹೈಕಮಾಂಡ್​ಗೆ ಲಿಖಿತ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ವಿಜಯ್​ ಟಿವಿಕೆ ಪಕ್ಷ ಸಕ್ರಿಯ ರಾಜಕೀಯ ಪ್ರವೇಶ ಮಾಡುತ್ತಿದ್ದಂತೆ ತಮಿಳುನಾಡಿನಲ್ಲಿ ಬಿಜೆಪಿಯ ನಿರೀಕ್ಷೆಗಳು ಮಸುಕಾಗಿದೆ. ಹಾಗೇ ಭವಿಷ್ಯದಲ್ಲಿ ಯಶಸ್ಸಿಗೆ ದೃಢವಾದ ರಾಜಕೀಯ ಮೈತ್ರಿ ಕೂಡ ಅಗತ್ಯವಾಗಿದೆ ಎಂದು ವಾದಿಸಿದ್ದಾರೆ. ಮುಂಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿಯ ಮಾಜಿ ಮಿತ್ರ ಪಕ್ಷವಾದ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ರಾಷ್ಟ್ರೀಯ ನಾಯಕತ್ವವನ್ನು ಒತ್ತಾಯಿಸಿದ್ದಾರೆ. ಭವಿಷ್ಯದಲ್ಲಿ ಬಿಜೆಪಿಯ ಏಕಾಂಗಿ ಹೋರಾಟ ಪಕ್ಷಕ್ಕೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಲವು ಬಾರಿ ಭೇಟಿ ಮತ್ತು ಹೆಚ್ಚಿನ ಪ್ರಚಾರದ ನಡುವೆಯೂ ಒಂದೇ ಒಂದು ಸೀಟು ಗೆಲ್ಲುವಲ್ಲಿ ಕೂಡ ಬಿಜೆಪಿ ವಿಫಲವಾಯಿತು ಎಂಬ ಅಂಶವನ್ನು ನಾಯಕರು ಒತ್ತಿ ಹೇಳಿದ್ದಾರೆ.

ರಾಜಕೀಯ ಅನಾನುಭವ ಹೊಂದಿರುವ ಅಣ್ಣಾಮಲೈ ಅವರು ಬಿಜೆಪಿ ತನ್ನ ಸ್ವಂತ ಬಲದಿಂದ ತಮಿಳುನಾಡನ್ನು ಗೆಲ್ಲಬಹುದೆಂಬ ಕಲ್ಪನೆ ಹೊಂದಿದ್ದಾರೆ. ಆದರೆ ಇದು ಅವಾಸ್ತವಿಕ. ಎಐಎಡಿಎಂಕೆ ರಾಜ್ಯದಲ್ಲಿ ಶೇ 33ರಷ್ಟು ಮತಹಂಚಿಕೆ ಹೊಂದಿದ್ದರೆ ಡಿಎಂಕೆ ಎರಡನೇ ಸ್ಥಾನದಲ್ಲಿದೆ ಎಂದಿದ್ದಾರೆ.

ಈ ನಾಯಕರ ಪ್ರಕಾರ, ಅಣ್ಣಾಮಲೈ ದ್ರಾವಿಡ ನಾಯಕರ ಕುರಿತು ಟೀಕಿಸುವ ಮೂಲಕ ಎಐಎಡಿಎಂಕೆ ಜೊತೆಗಿನ ಸಂಬಂಧವನ್ನು ಹಳಸಿದ್ದಾರೆ. ಇತರ ಪಕ್ಷಗಳೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುವ ಹೊಸ ನಾಯಕ ಬಂದಾಗ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆ. ತಮಿಳುನಾಡಿನಲ್ಲಿ ಬಿಜೆಪಿಯ ಯಶಸ್ಸು ಮೈತ್ರಿಗಳ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಸಿಎಂಗಾಗಿ ತರಿಸಿದ್ದ ಸಮೋಸಾ, ಕೇಕ್​ಗಳು ಮಂಗಮಾಯ: CID ತನಿಖೆಗೆ ಆದೇಶಿಸಿದ ಹಿಮಾಚಲ ಸರ್ಕಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.