ETV Bharat / bharat

ಪತಿಯೊಂದಿಗೆ ಜಗಳ, ತವರು ಮನೆಗೆ ಬಂದ ಮಗಳು, ಆತ್ಮಹತ್ಯೆಗೆ ಶರಣಾದ ಕುಟುಂಬ

author img

By ETV Bharat Karnataka Team

Published : Feb 24, 2024, 5:30 PM IST

ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಂದೇ ಕುಟುಂಬದ ತಾಯಿ, ತಂದೆ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

family committed suicide  Coimbatore  ಆತ್ಮಹತ್ಯೆಗೆ ಶರಣಾದ ಕುಟುಂಬ  ಕೊಯಮತ್ತೂರು
ಪತಿಯೊಂದಿಗೆ ಜಗಳ, ತವರು ಮನೆಗೆ ಬಂದ ಮಗಳು, ಆತ್ಮಹತ್ಯೆಗೆ ಶರಣಾದ ಕುಟುಂಬ

ಕೊಯಮತ್ತೂರು (ತಮಿಳುನಾಡು): ನಗರದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಇಲ್ಲಿನ ಗೌಂಡಂಪಾಳ್ಯದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ದಂಪತಿಯಾದ ಗಣೇಶನ್​, ವಿಮಲಾ ಮತ್ತು ಇವರ ಮಗಳು ದಿಯಾ ಗಾಯತ್ರಿ (25) ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ: ಗೌಂಡಂಪಾಳ್ಯಂ ಟಿ.ವಿ.ಎಸ್. ನಗರದ ಪಕ್ಕದ ಜವಾಹರ್ ನಗರದ ನಿವಾಸಿಗಳಾದ ಗಣೇಶನ್ ಮತ್ತು ವಿಮಲಾ ದಂಪತಿಗೆ ದಿಯಾ ಗಾಯತ್ರಿ ಎಂಬ ಮಗಳಿದ್ದಳು. ಅವರು ಐಟಿ ಉದ್ಯೋಗಿಯಾಗಿದ್ದರು. ಯುವತಿ ಕುಟುಂಬಸ್ಥರು ಕೊಯಂಬತ್ತೂರಿನ ವಡವಳ್ಳಿ ಪ್ರದೇಶದ ಐಟಿ ಉದ್ಯೋಗಿ ದೀಕ್ಷಿತ್​ ಜೊತೆ ಕಳೆದ ವರ್ಷ ನವೆಂಬರ್ 3 ರಂದು ಮದುವೆ ಮಾಡಿಕೊಟ್ಟಿದ್ದರು. ವಿವಾಹದ ನಂತರ ಇಬ್ಬರೂ ಬೆಂಗಳೂರಿನಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದರು.

ಮದುವೆಯಾದ ಒಂದು ತಿಂಗಳಲ್ಲೇ ಕಳೆದ ಡಿಸೆಂಬರ್‌ನಲ್ಲಿ ಗಾಯತ್ರಿ ಹಾಗೂ ಪತಿ ದೀಕ್ಷಿತ್ ನಡುವೆ ಮನಸ್ತಾಪ ಉಂಟಾಗಿತ್ತು. ಇದಾದ ಬಳಿಕ ಗಾಯತ್ರಿ ತನ್ನ ಪೋಷಕರ ಮನೆಗೆ ಬಂದಿದ್ದಾಳೆ. ಇದರಿಂದ ಮೂವರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ಗಣೇಶನ್, ವಿಮಲಾ ಹಾಗೂ ಪುತ್ರಿ ದಿಯಾ ಗಾಯತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಗಣೇಶನ್ ಕೊಯಮತ್ತೂರಿನಲ್ಲಿರುವ ತನ್ನ ಸಹೋದರನನ್ನು ಸಂಪರ್ಕಿಸಿ ಮಗಳ ಸ್ಥಿತಿಯ ಬಗ್ಗೆ ತಿಳಿಸಿದ್ದನಂತೆ. ಬಳಿಕ ಗಣೇಶನ್​ ಅನ್ನು ಸಂಪರ್ಕಿಸಲು ಆತನ ಸಹೋದರ ಹಲವಾರು ಬಾರಿ ಸೆಲ್‌ ಫೋನ್‌ಗೆ ಕರೆ ಮಾಡಿದರೂ ತೆಗೆಯಲಿಲ್ಲ.

ಒಳಗಿನಿಂದ ಬಾಗಿಲು ಹಾಕಿದ್ದರಿಂದ ಅನುಮಾನಗೊಂಡು ಅಕ್ಕಪಕ್ಕದ ಮನೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಗಣೇಶನ್, ವಿಮಲಾ, ಗಾಯತ್ರಿ ಮನೆಯೊಳಗೆ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ಇದನ್ನು ಕಂಡು ಬೆಚ್ಚಿಬಿದ್ದ ಅವರು ಕೂಡಲೇ ಗೌಂಡಂಪಾಳ್ಯಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಅಲ್ಲಿಗೆ ಆಗಮಿಸಿ 3 ಜನರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಅಲ್ಲದೆ, ಮಗಳು ಪತಿಯಿಂದ ದೂರವಾದ ಕಾರಣ ಮೂವರು ಕಳೆದ ಒಂದು ತಿಂಗಳಿಂದ ಮಾನಸಿಕವಾಗಿ ನೊಂದಿದ್ದರು. ಇದರಿಂದ ಮನನೊಂದು ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅಲ್ಲದೇ ಈ ಸಂಬಂಧ ದಿಯಾ ಗಾಯತ್ರಿ ಪತಿಯನ್ನು ವಿಚಾರಣೆಗೆ ಒಳಪಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಓದಿ: ಹಾವೇರಿ: ಅಳಿಯನಿಗೆ ಮದ್ಯ ಕುಡಿಸಿ ಚಾಕುವಿನಿಂದ ಇರಿದು ಕೊಂದ ಮಾವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.