ETV Bharat / bharat

ಮನೆಯಲ್ಲಿ ತಂದೆ, ತಾಯಿ-ಮಗ ಶವವಾಗಿ ಪತ್ತೆ; ನಿಗೂಢ ಸಾವಿನ ಹಿಂದೆ ಬಿದ್ದ ಪೊಲೀಸ್​ ಇಲಾಖೆ

author img

By ETV Bharat Karnataka Team

Published : Mar 3, 2024, 5:08 PM IST

ತಂದೆ, ತಾಯಿ ಮತ್ತು ಮಗ ಮೂವರು ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಕಂಡು ಬಂದಿದೆ.

family Found Dead  Suspect suicide  ಶವವಾಗಿ ಪತ್ತೆ  ಪೊಲೀಸ್​ ಇಲಾಖೆ  ನಿಗೂಢ ಸಾವು
ನಿಗೂಢ ಸಾವಿನ ಹಿಂದೆ ಬಿದ್ದ ಪೊಲೀಸ್​ ಇಲಾಖೆ

ಕೇಂದ್ರಪಾರ (ಒಡಿಶಾ): ಆಘಾತಕಾರಿ ಘಟನೆಯೊಂದರಲ್ಲಿ ಜಿಲ್ಲೆಯ ರಾಜನಗರ ತಾಲೂಕಿನ ರಾಜೇಂದ್ರನಗರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು (ತಂದೆ, ತಾಯಿ, ಮಗ) ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಮೃತರನ್ನು ಶ್ರೀದಾಮ್​ ಮಂಡಲ (53), ಅವರ ಪತ್ನಿ ಜಯಂತಿ ಮಂಡಲ (45), ಪುತ್ರ ಪರಿಖಿತ ಮಂಡಲ (27) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಶ್ರೀದಾಮ್ ಛಾವಣಿಯ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಗ್ರಾಮಸ್ಥರು ಶ್ರೀದಾಮ್ ಅವರ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶ್ರೀದಾಮ್ ಅವರ ಮೃತದೇಹವನ್ನು ಛಾವಣಿಯಿಂದ ಕೆಳಗಿಳಿಸಿದ್ದಾರೆ. ಆಗ ಅವರ ಪತ್ನಿ ಮತ್ತು ಮಗ ಮನೆಯೊಳಗೆ ಶವವಾಗಿ ಬಿದ್ದಿರುವುದು ಗೊತ್ತಾಗಿದೆ.

ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸರು ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದ್ದು, ಘಟನೆಯ ತನಿಖೆಗಾಗಿ ವೈಜ್ಞಾನಿಕ ತಂಡದ ಸಹಾಯವನ್ನು ತೆಗೆದುಕೊಂಡಿದ್ದಾರೆ. ಆದರೆ ಸಾವಿನ ಹಿಂದಿನ ಕಾರಣ ಅಸ್ಪಷ್ಟವಾಗಿದ್ದು, ಪೊಲೀಸರ ತನಿಖೆ ಬಳಿಕವೇ ಸಾವಿನ ಸತ್ಯ ಹೊರ ಬೀಳಲಿದೆ.

ಓದಿ: ಧಾರವಾಡ: ತಾಯಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.