ETV Bharat / bharat

ಟ್ರಕ್​ ಡಿಕ್ಕಿ: ಗುಜರಾತ್‌ ಮೂಲದ ಮೂವರು ಪಾದಯಾತ್ರಿಗಳು ಸಾವು - ROAD ACCIDENT

ಟ್ರಕ್​​ ಡಿಕ್ಕಿ ಹೊಡೆದ ಪರಿಣಾಮ ತೀರ್ಥಕ್ಷೇತ್ರಗಳಿಗೆ ತೆರಳುತ್ತಿದ್ದ ಮೂವರು ಪಾದಯಾತ್ರಿಗಳು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಗುಜರಾತ್‌ ಮೂಲದ ಮೂವರು ಪಾದಯಾತ್ರಿಗಳು ಸಾವು
ಗುಜರಾತ್‌ ಮೂಲದ ಮೂವರು ಪಾದಯಾತ್ರಿಗಳು ಸಾವು (ETV Bharat)
author img

By ETV Bharat Karnataka Team

Published : Jun 9, 2024, 4:30 PM IST

ವನಪರ್ತಿ (ತೆಲಂಗಾಣ): ಟ್ರಕ್​​ ಡಿಕ್ಕಿ ಹೊಡೆದ ಪರಿಣಾಮ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಗುಜರಾತ್​ ಮೂಲದ ಮೂವರು ಯಾತ್ರಾರ್ಥಿಗಳು ಮೃತಪಟ್ಟಿರುವ ಘಟನೆ ವನಪರ್ತಿ ಜಿಲ್ಲೆಯಲ್ಲಿ ನಡೆದಿದೆ.

ಈ ಮೂವರು ಯಾತ್ರಿಕರು ಪಾದಯಾತ್ರೆ ಮೂಲಕ ತೀರ್ಥಕ್ಷೇತ್ರಗಳಿಗೆ ತೆರಳುತ್ತಿದ್ದರು. ಅವರು ಶನಿವಾರ ರಾತ್ರಿ ಜಿಲ್ಲೆಯ ರಂಗಪುರಂ ಸರ್ಕಾರಿ ಶಾಲೆಯಲ್ಲಿ ವಿಶ್ರಾಂತಿ ಪಡೆದು, ಮುಂಜಾನೆ ತಮ್ಮ ಪಾದಯಾತ್ರೆಯನ್ನು ಪುನಾರಂಭಿಸಿದ್ದರು. ಯಾತ್ರಿಗಳು ಹೈದರಾಬಾದ್ ನಿಂದ ಕರ್ನೂಲ್​ಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಮತ್ತೊಂದೆಡೆ, ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಖಮ್ಮಂ ಜಿಲ್ಲೆಯ ಪಾಲಡುಗು ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಮ್ಮಂ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ, 30 ಮಂದಿಗೆ ಗಾಯ - BUS OVERTURNED

ETV Bharat Logo

Copyright © 2024 Ushodaya Enterprises Pvt. Ltd., All Rights Reserved.