ನವದೆಹಲಿ: ದೇಶದಾದ್ಯಂತ ಈ ಬಾರಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷವು ಇಂದು (ಶುಕ್ರವಾರ) ಬಹುನಿರೀಕ್ಷಿತ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಿದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ನಮ್ಮ ಈ ಪ್ರಣಾಳಿಕೆಯು ದೇಶದ ರಾಜಕೀಯ ಇತಿಹಾಸದಲ್ಲಿ 'ನ್ಯಾಯ್ ಕಾ ದಾಸ್ತಾವೇಜ್' ಆಗಿಯೂ ನೆನಪಿನಲ್ಲಿ ಉಳಿಯುತ್ತದೆ'' ಎಂದು ತಿಳಿಸಿದ್ದಾರೆ.
ವಿದ್ಯುನ್ಮಾನ ಮತಯಂತ್ರ ಇವಿಎಂ ದಕ್ಷತೆ ಮತ್ತು ಬ್ಯಾಲೆಟ್ ಪೇಪರ್‌ನಲ್ಲಿ ಪಾರದರ್ಶಕತೆಯನ್ನು ತರಲು ನಾವು ಚುನಾವಣಾ ಕಾನೂನುಗಳನ್ನು ತಿದ್ದುಪಡಿ ಮಾಡುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಮತದಾನವು ಇವಿಎಂ ಮೂಲಕವೇ ನಡೆಯುತ್ತದೆ ಆದರೆ, ಮತದಾರನು ಯಂತ್ರ - ರಚಿತ ಮತದಾನದ ಚೀಟಿಯನ್ನು ಮತದಾರ ಪರಿಶೀಲಿಸಬಹುದಾಗಿರುವಂತೆ ರೂಪಿಸಲಾಗುತ್ತದೆ. ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಘಟಕದಲ್ಲಿ ಅದನ್ನು ಹಿಡಿದಿಟ್ಟುಕೊಳ್ಳಲು ಮತ್ತು ಠೇವಣಿ ಮಾಡಲು ಸಾಧ್ಯವಾಗುವಂತೆ ರೂಪಿಸಲಾಗುತ್ತದೆ. ಎಲೆಕ್ಟ್ರಾನಿಕ್ ಮತ ಎಣಿಕೆಯನ್ನು ವಿವಿಪ್ಯಾಟ್ ಸ್ಲಿಪ್ ಟ್ಯಾಲಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ದೇಶದ ಜನರಿಗೆ ಭರವಸೆ ನೀಡಿದೆ.
ಆಹಾರ ಮತ್ತು ಉಡುಗೆ, ಪ್ರೀತಿಸುವುದು ಮತ್ತು ಮದುವೆಯಾಗುವುದು ಹಾಗೂ ಭಾರತದ ಯಾವುದೇ ಭಾಗದಲ್ಲಿ ಪ್ರಯಾಣಿಸಲು ಮತ್ತು ವಾಸಿಸಲು ವೈಯಕ್ತಿಕ ಆಯ್ಕೆಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾವು ದೇಶದ ಜನರಿಗೆ ಭರವಸೆ ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ವೈಯಕ್ತಿಕ ಸ್ವಾತಂತ್ರ್ಯಕ್ಕೆ ವಿನಾಕಾರಣ ಅಡ್ಡಿಪಡಿಸುವ ಎಲ್ಲ ಕಾನೂನುಗಳು ಮತ್ತು ನಿಯಮಗಳನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿದೆ. ನಾವು ಸಂವಿಧಾನದ ಹತ್ತನೇ ಶೆಡ್ಯೂಲ್ ಅನ್ನು ತಿದ್ದುಪಡಿ ಮಾಡುತ್ತೇವೆ. ಮತ್ತು ಪಕ್ಷಾಂತರವನ್ನು (ಎಂಎಲ್ಎ ಅಥವಾ ಎಂಪಿ ಆಯ್ಕೆಯಾದ ಮೂಲ ಪಕ್ಷವನ್ನು ಬಿಟ್ಟು) ಸದಸ್ಯತ್ವದ ಸ್ವಯಂಚಾಲಿತ ಅನರ್ಹಗೊಳಿಸುವುದಾಗಿ ಭರವಸೆ ನೀಡುತ್ತೇವೆ ಎಂದು ಕಾಂಗ್ರೆಸ್ ಪ್ರಕಟಿಸಿದೆ.
ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು:
- ಸುಮಾರು 10 ಲಕ್ಷ ಉದ್ಯೋಗ, ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ., ಜಾತಿ ಗಣತಿ, ಎಂಎಸ್‌ಪಿಗೆ ಕಾನೂನು ಮಾನ್ಯತೆ, ಎಂಎನ್‌ಆರ್‌ಇಜಿಎ ವೇತನವನ್ನು ರೂ.400ಕ್ಕೆ ಏರಿಕೆ ಮಾಡುವುದು, ಮತ್ತು ಸರ್ಕಾರಿ ಸಂಸ್ಥೆಗಳ ದುರುಪಯೋಗ ತಡೆ
- ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಮ್ಮ ಪಕ್ಷ ಜಾತಿ ಗಣತಿ ಪಕ್ಕಾ
- ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿ ಮಿತಿಯನ್ನು ಶೇಕಡಾ 50ಕ್ಕೆ ಹೆಚ್ಚಳ
- ಆರ್ಥಿಕವಾಗಿ ದುರ್ಬಲರಿಗೆ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 10 ಪ್ರತಿಶತ ಮೀಸಲಾತಿ
- ಸರ್ಕಾರ ಒಂದು ವರ್ಷ ಪೂರ್ಣಗೊಂಡ ನಂತರ, ಎಲ್ಲ ಮೀಸಲು ಹುದ್ದೆಗಳಿಗೆ ನೇಮಕಾತಿ
- ಎಲ್ಲ ಕ್ಷೇತ್ರಗಳಲ್ಲಿನ ಗುತ್ತಿಗೆ ಪದ್ಧತಿ ರದ್ದು
- ಕಟ್ಟಡ ನಿರ್ಮಾಣ, ವ್ಯಾಪಾರ ಆರಂಭಿಸಲು ಮತ್ತು ಆಸ್ತಿ ಖರೀದಿಗೆ ಎಸ್‌ಸಿ ಮತ್ತು ಎಸ್‌ಟಿಗೆ ಸಾಂಸ್ಥಿಕ ಸಾಲ ಹೆಚ್ಚಳ
- ಭೂ ಸೀಲಿಂಗ್ ಕಾಯ್ದೆಯಡಿ ಬಡವರಿಗೆ ಸರ್ಕಾರಿ ಭೂಮಿ ಮತ್ತು ಹೆಚ್ಚುವರಿ ಭೂಮಿ ವಿತರಿಸುವ ಬಗ್ಗೆ ನಿಗಾ ವಹಿಸಲು ಪ್ರಾಧಿಕಾರ
- SC ಮತ್ತು ST ಸಮುದಾಯಗಳಿಗೆ ಸೇರಿದ ಗುತ್ತಿಗೆದಾರರಿಗೆ ಹೆಚ್ಚಿನ ಸಾರ್ವಜನಿಕ ಕೆಲಸದ ಗುತ್ತಿಗೆಗಳನ್ನು ನೀಡಲು ಸಾರ್ವಜನಿಕ ಸಂಗ್ರಹಣೆ ನೀತಿಯ ವ್ಯಾಪ್ತಿ ವಿಸ್ತರಣೆ
- ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನದ ಮೊತ್ತ ದ್ವಿಗುಣ. ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಮತ್ತು ಪಿಎಚ್‌ಡಿ ಮಾಡಲು ಸಹಾಯ ಮಾಡುವ ವಿದ್ಯಾರ್ಥಿ ವೇತನದ ಸಂಖ್ಯೆ ದ್ವಿಗುಣ
- ದೇಶದ ಪ್ರತಿಯೊಬ್ಬ ಪ್ರಜೆಯಂತೆ ಅಲ್ಪಸಂಖ್ಯಾತರಿಗೂ ಎಲ್ಲ ರೀತಿಯ ಸ್ವಾತಂತ್ರ್ಯ ಖಚಿತ.
- ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ಪಕ್ಕಾ
- ಸಾಮಾಜಿಕ ಭದ್ರತೆಯಡಿ ಎಲ್ಲ ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ 1000 ರೂಪಾಯಿ ಪಿಂಚಣಿ