ನವದೆಹಲಿ: ಸೋಮವಾರ ರಾಜ್ಯಸಭೆಯ ಕಲಾಪದಲ್ಲಿ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ತಮ್ಮ ಹೆಸರಿನ ಮುಂದೆ ಪತಿ ಅಮಿತಾಭ್ ಬಚ್ಚನ್ ಹೆಸರನ್ನು ಸೇರಿಸಿದ್ದಕ್ಕಾಗಿ ಮತ್ತೊಮ್ಮೆ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಾಪದ ವೇಳೆ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು, ಜಯಾ ಅಮಿತಾಭ್ ಬಚ್ಚನ್ ಎಂದು ಸಂಬೋಧಿಸಿದ್ದಕ್ಕೆ ಜಯಾ ಬಚ್ಚನ್ ಸಿಡಿಮಿಡಿಗೊಂಡರು.
Why she is so irritating?
— Surajit Ram (@SurajitRam10) August 5, 2024
She just called the vice president of India Shri Jagdeep Dhankhar ji doing a drama.
She used Drama word at the parliament on vice president of India.
Is this allowed?#RajyaSabha #NewParliamentBuilding #JayaBachchan pic.twitter.com/tMmcPBOItW
ತಮ್ಮ ಪತಿ ಅಮಿತಾಭ್ ಹೆಸರನ್ನು ಪದೇ ಪದೇ ಉಲ್ಲೇಖಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜಯಾ, ಇಲ್ಲ ಸಾರ್, ನನ್ನ ಮತ್ತು ನನ್ನ ಗಂಡನ ಹೆಸರಿನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಮತ್ತು ನನ್ನ ಗಂಡನ ಸಾಧನೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ತುಂಬಾ ಸಂತೋಷವಾಗಿದ್ದೇನೆ. ಈ ನಾಟಕವನ್ನು ನೀವು ಹೊಸದಾಗಿ ಪ್ರಾರಂಭಿಸಿದ್ದೀರಿ, ಇದೇ ಮೊದಲು ಕೂಡ ಅಲ್ಲ ಎಂದು ಟೀಕಿಸಿದರು.
ಇಡೀ ದೇಶವೇ ಅಮಿತಾಭ್ ಬಗ್ಗೆ ಹೆಮ್ಮೆಪಡುತ್ತೆ: ಇದೇ ಪ್ರತಿಕ್ರಿಯಿಸಿದ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು, ಇದರ ಬಗ್ಗೆ ಸಭಾಪತಿ ತಮ್ಮ ಫ್ರಾನ್ಸ್ ಭೇಟಿಯನ್ನು ಪ್ರಸ್ತಾಪಿಸಿದರು. ಮತ್ತು ಗೌರವಾನ್ವಿತ ಸದಸ್ಯರೇ, ನಾನು ಒಮ್ಮೆ ಫ್ರಾನ್ಸ್‌ಗೆ ಹೋಗಿದ್ದೆ. ಅಲ್ಲಿನ ಹೊಟೇಲ್‌ನಲ್ಲಿ ಮ್ಯಾನೇಜ್‌ಮೆಂಟ್‌ನವರು ಪ್ರತಿ ಜಾಗತಿಕ ಐಕಾನ್‌ಗಳ ಫೋಟೋಗಳು ಇರಿಸಿದ್ದಾರೆ. ಅದರಲ್ಲಿ ಅಮಿತಾಭ್ ಬಚ್ಚನ್ ಅವರ ಫೋಟೋವನ್ನು ನೋಡಿದೆ. ಅವರ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ'' ಎಂದು ತಿಳಿಸಿದರು.
'ಗಂಡನ ಹೆಸರಿನ ಮುಂದೆ ಹೆಂಡತಿ ಹೆಸರನ್ನು ಸೇರಿಸಿ': ಇದಾದ ನಂತರ ಸಭಾಪತಿ ಅವರು, ಮನೋಹರ್ ಲಾಲ್ ಖಟ್ಟರ್ ಅವರಿಗೆ ಮಾತನಾಡಲು ಅವಕಾಶ ನೀಡಿದರು. ''ಧನ್ಯವಾದ ಸರ್, ದಯವಿಟ್ಟು ತಮ್ಮ ಹೆಸರಿನ ಮುಂದೆ ಪತ್ನಿಯ ಹೆಸರನ್ನು ಸೇರಿಸಿ. ನಾನು ಇದೆಲ್ಲದಕ್ಕೆ ವಿರೋಧವಿಲ್ಲ ಸಾರ್'' ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ: ಜಯಾ ಬಚ್ಚನ್ ಅವರು 1973ರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರೊಂದಿಗೆ ದಾಂಪತ್ಯ ಜೀವನ ಪ್ರಾರಂಭಿಸಿದರು. ಸ್ಟಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಅಭಿಷೇಕ್ ಬಚ್ಚನ್ ಮತ್ತು ಮಗಳು ಶ್ವೇತಾ ಬಚ್ಚನ್ ನಂದಾ. ಮೊಮ್ಮಕ್ಕಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಬಚ್ಚನ್ ಕುಟುಂಬ ತನ್ನದೇ ಆದ ವಿಶಿಷ್ಟ ಗುರುತು ಹೊಂದಿದೆ. ಇದೀಗ ಪತಿಯ ಹೆಸರಿನೊಂದಿಗೆ ಕರೆದಿರುವುದು ಜಯಾ ಬಚ್ಚನ್ ಅವರಿಗೆ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ತುಮಕೂರು: ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದ ಕಿಚ್ಚ ಸುದೀಪ್ - Kiccha Sudeep Rejected Doctorate