ETV Bharat / bharat

ಭವ್ಯ ರಾಮ ಮಂದಿರದಲ್ಲಿ ಮೊದಲ ರಾಮನವಮಿ: 4 ದಿನ ಗಣ್ಯರ ವಿಶೇಷ ದರ್ಶನ, ಆರತಿ ಸೇವೆ ರದ್ದು - RAM NAVAMI - RAM NAVAMI

ಭವ್ಯ ರಾಮಮಂದಿರ ಉದ್ಘಾಟನೆ ಬಳಿಕ ಬಂದಿರುವ ಮೊದಲ ರಾಮನವಮಿಗೆ ಅಯೋಧ್ಯೆ ಸಜ್ಜಾಗಿದೆ. ಬಾಲರಾಮನ ದರ್ಶನ ಮತ್ತು ಸೇವೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಭಕ್ತರು ಗಮನಿಸಬೇಕು.

ಭವ್ಯ ರಾಮ ಮಂದಿರದಲ್ಲಿ ಮೊದಲ ರಾಮನವಮಿ
ಭವ್ಯ ರಾಮ ಮಂದಿರದಲ್ಲಿ ಮೊದಲ ರಾಮನವಮಿ
author img

By ETV Bharat Karnataka Team

Published : Apr 15, 2024, 9:27 AM IST

ಅಯೋಧ್ಯೆ (ಉತ್ತರಪ್ರದೇಶ): ವಿಶ್ವವಿಖ್ಯಾತ ಭವ್ಯ ರಾಮಮಂದಿರ ಉದ್ಘಾಟನೆ ಬಳಿಕ ಬರುತ್ತಿರುವ ಮೊದಲ ರಾಮನವಮಿಗೆ ಅಯೋಧ್ಯೆ ಸಜ್ಜಾಗಿದೆ. ಬಾಲರಾಮನ ದರ್ಶನಕ್ಕೆ ದೇಶ - ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ ದರ್ಶನ ಮತ್ತು ಸೇವೆಯಲ್ಲಿ ಟ್ರಸ್ಟ್​​ ಕೆಲ ಬದಲಾವಣೆ ಮಾಡಿದೆ.

ರಾಮನವಮಿಯಂದು ರಾಮನಗರಿಗೆ ಅಪಾರ ಭಕ್ತ ಸಮೂಹ ಬರಲಿದೆ. ಭದ್ರತಾ ಸಮಸ್ಯೆಗಳು ಉಂಟಾಗದಿರಲು ಏಪ್ರಿಲ್ 15 ರಿಂದ 18 ರವರೆಗೆ 4 ದಿನಗಳ ಕಾಲ ಗಣ್ಯರ (ವಿಐಪಿ) ದರ್ಶನ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಜೊತೆಗೆ ಆರತಿ ಪಾಸ್ ಕೂಡ ರದ್ದುಗೊಳಿಸಲಾಗಿದೆ. ಈಗಾಗಲೇ ಮುಂಗಡವಾಗಿ ಕಾಯ್ದಿರಿಸಲಾದ ಟಿಕೆಟ್​ ಅನ್ನು ಕೂಡ ರದ್ದು ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ತಿಳಿಸಿದ್ದಾರೆ.

ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮತ್ತು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ, ಸದಸ್ಯ ಡಾ.ಅನಿಲ್ ಮಿಶ್ರಾ ಅವರು ರಾಮನವಮಿ ಸಿದ್ಧತೆಗಳನ್ನು ಭಾನುವಾರ ಪರಿಶೀಲಿಸಿದರು. ಅಯೋಧ್ಯೆಗೆ ಬರುವ ಭಕ್ತರಿಗೆ ಸೂಕ್ತ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

ಹೂವಿನಿಂದ ಮಂದಿರ ಅಲಂಕಾರ: ವಿಶ್ವದಲ್ಲೇ ಖ್ಯಾತಿ ಹೊಂದಿರುವ ರಾಮಮಂದಿರವನ್ನು ಹೂವಿನಿಂದ ಅಲಂಕಾರ ಮಾಡಲಾಗುತ್ತಿದೆ. ಪ್ರಾಣ ಪ್ರತಿಷ್ಠೆಯ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ 'ರಾಮನವಮಿ' ಕಳೆಗಟ್ಟಲಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಿದ್ಧವಾಗಿವೆ. ಇಡೀ ಮಂದಿರದ ಆವರಣವನ್ನು ಹೂವಿನಿಂದ ಅಲಂಕೃತಗೊಳಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳನ್ನೂ ಇಲ್ಲಿ ಆಯೋಜಿಸಲಾಗುತ್ತಿದೆ.

ಏಳು ಸಾಲುಗಳಲ್ಲಿ ಭಕ್ತರು ರಾಮನ ದರ್ಶನ: ಲಕ್ಷಾಂತರ ಭಕ್ತರು ಭವ್ಯ ಮಂದಿರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ರಾಮನ ದರ್ಶನಕ್ಕೆ ಹೆಚ್ಚಿನ ವ್ಯವಸ್ಥೆ ಮಾಡಲಾಗಿದೆ. 7 ಸಾಲುಗಳಲ್ಲಿ ರಾಮಭಕ್ತರು ಮಂದಿರ ಪ್ರವೇಶಿಸಲಿದ್ದಾರೆ. ಬಳಿಕ ಎಲ್ಲರಿಗೂ ಪ್ರಸಾದ ಕೂಡ ವಿತರಿಸಲಾಗುತ್ತದೆ. ದರ್ಶನ ವ್ಯವಸ್ಥೆಯಲ್ಲಿ ಭದ್ರತಾಲೋಪ ಉಂಟಾಗದಂತೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಮ್ಮೊಂದಿಗೆ ಮೊಬೈಲ್ ಫೋನ್, ಕ್ಯಾಮೆರಾ, ಎಲೆಕ್ಟ್ರಾನಿಕ್​ ವಸ್ತುಗಳು, ಚಪ್ಪಲಿ, ಬೂಟು ಸೇರಿ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಬರದಂತೆ ಟ್ರಸ್ಟ್​ ಸೂಚಿಸಿದೆ.

ಅಯೋಧ್ಯೆಯಲ್ಲಿ ಬಿಗಿಭದ್ರತೆ: ರಾಮನಗರಿ ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ನಗರವನ್ನು 7 ವಲಯಗಳು ಮತ್ತು 39 ಉಪ ವಲಯಗಳಾಗಿ ವಿಂಗಡಿಸಲಾಗಿದೆ. ಸಿವಿಲ್ ಪೊಲೀಸ್, ಆರ್‌ಎಎಫ್, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಪಿಎಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸರಯೂ ಘಾಟ್‌ನಿಂದ ದೇವಸ್ಥಾನದವರೆಗೆ ಸರ್ಪಗಾವಲು ಹಾಕಲಾಗಿದೆ.

ತುರ್ತು ಸ್ಪಂದನಾ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ಇನ್‌ಸ್ಪೆಕ್ಟರ್‌ಗಳು, ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪ್ರವಾಹ ಪರಿಹಾರ ಸಿಬ್ಬಂದಿಯನ್ನು ಘಾಟ್‌ನಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. 11 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 150 ಇನ್ಸ್‌ಪೆಕ್ಟರ್‌ಗಳು, 400 ಸಬ್ ಇನ್‌ಸ್ಪೆಕ್ಟರ್‌ಗಳು ಮತ್ತು 1100 ಕಾನ್‌ಸ್ಟೆಬಲ್‌ಗಳನ್ನು ರಾಮನವಮಿ ಭದ್ರತೆಗೆ ಹಾಕಲಾಗಿದೆ.

ಇದನ್ನೂ ಓದಿ: ಅಯೋಧ್ಯೆಗೆ ಬೇಕು 8,500 ರಿಂದ 12,500 ಬ್ರಾಂಡೆಡ್​ ಹೋಟೆಲ್​ ಕೊಠಡಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.