ETV Bharat / bharat

ಬಾರಾಮುಲ್ಲಾದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ: ಇಬ್ಬರು ಸಾವು, ನಾಲ್ವರು ಯೋಧರಿಗೆ ಗಾಯ - TERROR ATTACK

ಬಾರಾಮುಲ್ಲಾದಲ್ಲಿ ಉಗ್ರರ ದಾಳಿ ನಡೆದಿದೆ. ಎಲ್​ಒಸಿ ಪಕ್ಕದಲ್ಲೇ ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಸೇನಾ ಹಮಾಲಿಗಳು ಸಾವನ್ನಪ್ಪಿ, ನಾಲ್ವರು ಯೋಧರು ಗಾಯಗೊಂಡಿದ್ದಾರೆ.

ಸೇನಾ ವಾಹನದ ಮೇಲೆ ಉಗ್ರ ದಾಳಿ
ಸೇನೆಯಿಂದ ಕಟ್ಟೆಚ್ಚರ (ANI)
author img

By PTI

Published : Oct 24, 2024, 9:22 PM IST

Updated : Oct 24, 2024, 10:23 PM IST

ಬಾರಾಮುಲ್ಲಾ(ಜಮ್ಮು-ಕಾಶ್ಮೀರ): ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಮತ್ತೊಂದು ದಾಳಿ ನಡೆದಿದೆ. ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಸಮೀಪವಿರುವ ಬಾರಾಮುಲ್ಲಾದ ಗುಲ್ಮಾರ್ಗ್‌ ಪ್ರದೇಶದ ಬಳಿ ಗುರುವಾರ ಉಗ್ರರು ಸೈನಿಕರ ಮೇಲೆ ದಾಳಿ ನಡೆಸಿದ್ದರಿಂದ ಇಬ್ಬರು ಸೇನಾ ಹಮಾಲಿಗಳು ಸಾವನ್ನಪ್ಪಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ.

ಸೇನಾ ವಾಹನವು 18 ರಾಷ್ಟ್ರೀಯ ರೈಫಲ್ಸ್ (RR)ಗೆ ಸೇರಿದ್ದಾಗಿದೆ. ಯೋಧರಿದ್ದ ವಾಹನವು ಬೂತಪಾತ್ರದ ಮಾರ್ಗವಾಗಿ ಹೋಗುತ್ತಿದ್ದಾಗ ದಾಳಿ ನಡೆದಿದೆ. ಈ ಪ್ರದೇಶವು ಗಡಿಗೆ ಸಮೀಪವಿದ್ದು, ಹೆಚ್ಚಿನ ಸೇನಾ ಭದ್ರತೆ ಇರುವ ಜಾಗವಾಗಿದೆ. ಆದಾಗ್ಯೂ, ಭಯೋತ್ಪಾದಕರು ಕಣ್ಣುತಪ್ಪಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಉಗ್ರರ ಗುಂಡಿನ ದಾಳಿಗೆ ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿದ್ದಾರೆ. ದಾಳಿಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಬಾರಾಮುಲ್ಲಾ ಪೊಲೀಸರು ಮಾಹಿತಿ ನೀಡಿದರು.

ಕಾರ್ಮಿಕರ ಹತ್ಯೆ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕಾರ್ಮಿಕನ ಮೇಲೆ ನಿಗೂಢ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆದಿದೆ. ಸದ್ಯ ಕಾರ್ಮಿಕ ತೀವ್ರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದಕ್ಕೂ ಮೊದಲು ಮೂರು ದಿನಗಳ ಹಿಂದೆ ಗಂದರ್‌ಬಾಲ್ ಜಿಲ್ಲೆಯಲ್ಲಿ ಸುರಂಗ ಕಾರ್ಮಿಕರ ವಸತಿ ಶಿಬಿರದ ಮೇಲೆ ಉಗ್ರಗಾಮಿಗಳು ಗುಂಡಿನ ಮಳೆಗರೆದು, ಆರು ವಲಸೆ ಕಾರ್ಮಿಕರು ಮತ್ತು ಒಬ್ಬ ವೈದ್ಯನನ್ನು ಹತ್ಯೆ ಮಾಡಿದ್ದರು.

ಇಬ್ಬರು ಭಯೋತ್ಪಾದಕರು ಕಾರ್ಮಿಕರ ಗುಂಪನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದರು. ಸ್ಥಳದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು. ವೈದ್ಯ, ಇತರ ನಾಲ್ವರು ಗಾಯಗೊಂಡಿದ್ದರು. ಚಿಕಿತ್ಸೆಯ ವೇಳೆ ಅವರೂ ಅಸುನೀಗಿದ್ದರು.

ಹಲವೆಡೆ ನಡೆಯುತ್ತಿರುವ ದಾಳಿಯ ಹಿಂದೆ ಹೊಸದಾಗಿ ರೂಪುಗೊಂಡಿರುವ ತೆಹ್ರೀಕ್ ಲಬೈಕ್ ಯಾ ಮುಸ್ಲಿಮ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಇದನ್ನೂ ಓದಿ: ಮತ್ತೆ 70 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ: 11 ದಿನದಲ್ಲಿ 250 ವಿಮಾನಗಳಿಗೆ 'ಹುಸಿ' ಕಾಟ

Last Updated : Oct 24, 2024, 10:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.