ETV Bharat / bharat

ತೆಲಂಗಾಣದ 10ನೇ ಸಂಸ್ಥಾಪನಾ ದಿನ ಆಚರಣೆ: ಅಧಿಕೃತ ನಾಡಗೀತೆ ಅನಾವರಣ - Telangana Official Anthem Unveiled - TELANGANA OFFICIAL ANTHEM UNVEILED

ತೆಲಂಗಾಣದ 10ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಅಧಿಕೃತ ನಾಡಗೀತೆಯನ್ನು ಅನಾವರಣಗೊಳಿಸಲಾಯಿತು.

ತೆಲಂಗಾಣದ 10ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಿಎಂ ರೇವಂತ್ ರೆಡ್ಡಿ ಮತ್ತು ಇತರರು
ತೆಲಂಗಾಣದ 10ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಿಎಂ ರೇವಂತ್ ರೆಡ್ಡಿ ರೆಡ್ಡಿ ಮತ್ತು ಇತರರು (IANS)
author img

By ETV Bharat Karnataka Team

Published : Jun 2, 2024, 5:44 PM IST

ಹೈದರಾಬಾದ್: ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ 'ಜಯ ಜಯೇ ತೆಲಂಗಾಣ' ಎಂಬ ಅಧಿಕೃತ ತೆಲಂಗಾಣ ನಾಡಗೀತೆಯನ್ನು ಭಾನುವಾರ ಅನಾವರಣಗೊಳಿಸಲಾಯಿತು. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ.ಕೀರವಾಣಿ ಸಂಯೋಜಿಸಿದ ಈ ಹಾಡನ್ನು ತೆಲಂಗಾಣದ ಖ್ಯಾತ ಕವಿ ಮತ್ತು ಬರಹಗಾರ ಆಂಡೆ ಶ್ರೀ ಬರೆದಿದ್ದಾರೆ. ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಹೊಸ ನಾಡಗೀತೆಯನ್ನು ಅನಾವರಣಗೊಳಿಸಿದರು.

ಹೊಸ ಅಧಿಕೃತ ನಾಡಗೀತೆಯ (ಕಿರು ಆವೃತ್ತಿ) ನಿರೂಪಣೆಯು ಸಿಕಂದರಾಬಾದ್​ನ ಪೆರೇಡ್ ಮೈದಾನದಲ್ಲಿ ನಡೆದ ದಶಮಾನೋತ್ಸವ ಸಂಸ್ಥಾಪನಾ ದಿನದ ಆಚರಣೆಯ ಮುಖ್ಯ ಭಾಗವಾಗಿತ್ತು. ನಾಡಗೀತೆ ಮೊಳಗುತ್ತಿದ್ದಂತೆ ಮುಖ್ಯಮಂತ್ರಿ, ಅವರ ಸಂಪುಟ ಸಹೋದ್ಯೋಗಿಗಳು, ವಿಧಾನಸಭಾ ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್, ಉನ್ನತ ಅಧಿಕಾರಿಗಳು ಮತ್ತು ಸಮಾರಂಭದಲ್ಲಿ ಹಾಜರಿದ್ದವರು ಎದ್ದು ನಿಂತು ಗೌರವ ಸಲ್ಲಿಸಿದರು.

ಸಮಾರಂಭದಲ್ಲಿ ಆಂಡೆ ಶ್ರೀ ಮತ್ತು ಕೀರವಾಣಿ ಇಬ್ಬರೂ ಉಪಸ್ಥಿತರಿದ್ದರು. 20 ವರ್ಷಗಳ ಹಿಂದೆ ಈ ಹಾಡನ್ನು ಬರೆದಿದ್ದ ಕವಿ ಕೀರವಾಣಿ ಈ ಸಂದರ್ಭದಲ್ಲಿ ಭಾವುಕರಾಗಿದ್ದರು. ಡಿಸೆಂಬರ್ 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಹಾಡನ್ನು ರಾಜ್ಯದ ಅಧಿಕೃತ ಗೀತೆಯಾಗಿ ಅಂಗೀಕರಿಸಲಾಗಿತ್ತು. ಹಾಡಿನ ಸಂಯೋಜನೆಯನ್ನು ಅಂತಿಮಗೊಳಿಸಲು ಸ್ವತಃ ಮುಖ್ಯಮಂತ್ರಿಗಳೇ ಆಂಡೆ ಶ್ರೀ ಮತ್ತು ಕೀರವಾಣಿ ಅವರೊಂದಿಗೆ ಹಲವಾರು ಬಾರಿ ಸಭೆಗಳನ್ನು ನಡೆಸಿದ್ದರು.

ಮೇ 30ರಂದು ಮುಖ್ಯಮಂತ್ರಿ, ಸಚಿವರು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ "ಜಯ ಜಯಹೇ ತೆಲಂಗಾಣ"ದ ಎರಡು ಆವೃತ್ತಿಗಳನ್ನು ಅನುಮೋದಿಸಲಾಯಿತು. 2.30 ನಿಮಿಷಗಳ ಆವೃತ್ತಿ ಮತ್ತು ಪೂರ್ಣ 13.30 ನಿಮಿಷಗಳ ಆವೃತ್ತಿಯನ್ನು ಸಭೆಯಲ್ಲಿ ಅಂತಿಮಗೊಳಿಸಲಾಯಿತು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಅದರ ನಿರೂಪಣೆಗೆ ಅನುಕೂಲವಾಗುವಂತೆ, ಮೂರು ಶ್ಲೋಕಗಳೊಂದಿಗೆ ಸಂಕ್ಷಿಪ್ತ ಆವೃತ್ತಿಯನ್ನು ಬಳಸಲಾಗುವುದು.

2023ರ ಡಿಸೆಂಬರ್​ನಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇದು ಮೊದಲ ರಾಜ್ಯ ಸಂಸ್ಥಾಪನಾ ದಿನದ ಆಚರಣೆಯಾಗಿದೆ. ಗನ್ ಪಾರ್ಕ್​ನಲ್ಲಿರುವ ತೆಲಂಗಾಣ ಅಮರವೀರ ಸ್ತೂಪದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿದ ನಂತರ, ಮುಖ್ಯಮಂತ್ರಿಗಳು ಪರೇಡ್ ಮೈದಾನಕ್ಕೆ ಆಗಮಿಸಿ ರಾಷ್ಟ್ರಧ್ವಜ ಹಾರಿಸಿದರು. ತೆಲಂಗಾಣ ವಿಶೇಷ ಪೊಲೀಸರ ವಿವಿಧ ಬೆಟಾಲಿಯನ್​ಗಳನ್ನು ಒಳಗೊಂಡ ತಂಡವು ಮುಖ್ಯಮಂತ್ರಿಗೆ ಗೌರವ ಸಲ್ಲಿಸಿತು. ರೇವಂತ್ ರೆಡ್ಡಿ ಅವರು ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅತ್ಯುತ್ತಮ ತುಕಡಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಇದನ್ನೂ ಓದಿ: ಇನ್ನು ತೆಲಂಗಾಣಕ್ಕೆ ಮಾತ್ರ ಹೈದರಾಬಾದ್ ರಾಜಧಾನಿ: ಆಂಧ್ರಪ್ರದೇಶದ ಸಾಮಾನ್ಯ 'ಕ್ಯಾಪಿಟಲ್'​ ಅವಧಿ ಮುಕ್ತಾಯ - Hyderabad Capital

ETV Bharat Logo

Copyright © 2024 Ushodaya Enterprises Pvt. Ltd., All Rights Reserved.