ಮೆಹಬೂಬಾಬಾದ್: ವಿದ್ಯಾರ್ಹತೆ ಮತ್ತು ನಾವೀನ್ಯತೆಯಿಂದಾಗಿ ಇದ್ದ ಸ್ಥಳದಲ್ಲಿಯೇ ಉದ್ಯೋಗ ಸೃಷ್ಟಿ ಮಾಡಿಕೊಂಡು, ಇತರರಿಗೆ ಮಾದರಿಯಾಗಬಹುದು ಎಂಬುದಕ್ಕೆ ಮೆಹಬೂಬಬಾದ್ ಜಿಲ್ಲೆಯ ಯಾಮಿನಿ ಉದಾಹರಣೆಯಾಗಿದ್ದಾರೆ. ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಯಾಮಿನಿ ಈ ಕ್ಷೇತ್ರದಲ್ಲಿ ನಡೆಸಿದ ಕೃಷಿಯಿಂದಾಗಿ ಇದೀಗ ಉದ್ಯಮಕ್ಕೆ ನಾಂದಿ ಹಾಡಿದ್ದಾರೆ. ಅಲ್ಲದೇ, ಅನೇಕರಿಗೆ ಉದ್ಯೋಗವನ್ನು ನೀಡಿ ಅನ್ನದಾತೆ ಆಗಿದ್ದಾರೆ.
ಮೆಹಬೂಬಾಬಾದ್ ಜಿಲ್ಲೆಯ ಥೊರ್ರರ್ ನಿವಾಸಿಯಾಗಿರವ ಯಾಮಿನಿ ಒಂದೂವರೆ ವರ್ಷದ ಹಿಂದೆ ಗ್ರಾಮದ ಪ್ರಾಥಮಿಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದು ಅವರನ್ನು ಮದುವೆಯಾಗಿದ್ದರು. ತಮ್ಮ ವಿದ್ಯಾರ್ಹತೆ ಅನುಗುಣವಾಗಿ ಉದ್ಯೋಗ ಆಯ್ಕೆ ಮಾಡುವ ಬದಲಾಗಿ, ತಮ್ಮ ಸಮುದಾಯದಲ್ಲೇ ಸ್ವ ಉದ್ಯೋಗ ಆರಂಭಿಸಿ, ಗೃಹಬಳಕೆಯ ಮಶ್ರೂಮ್ ಕೃಷಿ ಉದ್ಯಮ ನಡೆಸಲು ಮುಂದಾದರು. ಪತಿಯ ಪ್ರೋತ್ಸಾಹದಿಂದ ಯಾಮಿನಿ ತಮ್ಮ ಉದ್ಯಮದ ಪ್ರಯಾಣ ಆರಂಭಿಸಿದರು.
ಇದಕ್ಕೆ ಆಯ್ಕೆ ಮಾಡಿದ್ದು, ಮಿಲ್ಕಿ ಮಶ್ರೂಮ್. ಬೆಂಗಳೂರಿನಿಂದ ಎಪಿಕೆ2 ಬೀಜಗಳನ್ನು ತರಿಸಿ, ಮನೆಯಲ್ಲಿಯೇ ಮಶ್ರೂಮ್ ಕೃಷಿ ಆರಂಭಿಸಿದರು. ತಮ್ಮ ಉದ್ಯಮಕ್ಕೆ ಮತ್ತಷ್ಟು ಹೊಸ ಕೌಶಲ್ಯ ಕಲಿಯಲು, ಬೆಂಗಳೂರಿನಲ್ಲಿನ ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆ (ಐಐಎಚ್ಆರ್)ನಲ್ಲಿ ಅಭ್ಯಾಸಕ್ಕೂ ಕೂಡಾ ಅವರು ಮುಂದಾದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಜೊತೆಗೆ ಯಾಮಿನಿ ಮಶ್ರೂಮ್ ಉದ್ಯಮದ ಅಭಿವೃದ್ಧಿಯಲ್ಲಿ ಪ್ರಗತಿ ಕಂಡರು. ಅಷ್ಟೇ ಅಲ್ಲದೇ, ಅನೇಕ ಮಹಿಳೆಯರಿಗೆ ಉದ್ಯೋಗವನ್ನು ಸೃಷ್ಟಿಸಿದ್ದಾರೆ. ಗೃಹ ಬಳಕೆ ಮಶ್ರೂಮ್ಗೆ ಉತ್ತಮ ಮಾರುಕಟ್ಟೆ ಇದ್ದು, ಇದು ಹೃದಯ ಮತ್ತು ಮಧುಮೇಹಿ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಮಶ್ರೂಮ್ನಲ್ಲಿ ಸಮೃದ್ಧ ಪೋಷಕಾಂಶ ಇದ್ದು, ಫೈಬರ್ ಮತ್ತು ಕ್ಯಾಲ್ಸಿಯಂ ಇರುವ ಹಿನ್ನೆಲೆ ಇದರ ಕೃಷಿ ನಡೆಸಲು ನನಗೆ ಪ್ರೇರಣೆಯಾಯಿತು. ಈ ಕೃಷಿಯನ್ನು ಮತ್ತಷ್ಟು ವಿಸ್ತರಣೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಯಾಮಿನಿ ತಿಳಿಸಿದ್ದಾರೆ.
ಇದೀಗ ಯಾಮಿನಿ ಶ್ರಮಕ್ಕೆ ಫಲ ಸಿಕ್ಕಿದ್ದು, ಆರ್ಟಿಸಿ ಕಾರ್ಗೋ ಸೇವೆ ಬಳಕೆ ಮಾಡಿ ಹೈದರಾಬಾದ್ ಮತ್ತು ಬೆಂಗಳೂರು ನಗರಕ್ಕೆ ರಫ್ತು ನಡೆಸಿದ್ದಾರೆ. ಮನೆ ಆಧಾರಿತ ಕೃಷಿ ಜೊತೆ ಆನ್ಲೈನ್ ಮಾರಾಟಕ್ಕೆ ಕೂಡ ಮುಂದಾಗಿದ್ದಾರೆ. ಇದರಿಂದ ಹೆಚ್ಚಿನ ಲಾಭ ಸಿಗುತ್ತಿದೆ. ಕೆಜಿಗೆ 400 ರಿಂದ 450 ರೂಗೆ ಮಿಲ್ಕಿ ಮಶ್ರೂಮ್ ಮಾರಾಟ ಮಾಡಲಾಗುತ್ತಿದ್ದು, ಆನ್ಲೈನ್ನಲ್ಲಿ ಕೂಡ ಉತ್ತಮ ಆರ್ಡರ್ ಸಿಗುತ್ತಿದೆ ಎಂದಿದ್ದಾರೆ.
ಪತಿ ಚಂದು, ಅತ್ತೆ ಮನೆಯವರ ಬೆಂಬಲದಿಂದ ಇದೀಗ ತಮ್ಮ ಉದ್ಯಮದಲ್ಲಿ ಉತ್ತಮ ಆರ್ಥಿಕ ಗಳಿಕೆ ಮಾಡುತ್ತಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಉತ್ತಮ ಗಳಿಕೆ ಕಂಡಿದೆ. ಜೊತೆಗೆ ಸ್ವ ಉದ್ಯೋಗ ಬಯಸುವವರಿಗೆ ಇದು ಉತ್ತಮ ಮಾರ್ಗವಾಗಿದೆ. ಸರಿಯಾದ ಕೊಠಡಿ ತಾಪಮಾನದಲ್ಲಿ ಮಶ್ರೂಮ್ ಬೆಳವಣಿಗೆ ನಡೆಸಬಹುದಾಗಿದ್ದು, ಇದರ ನಿರ್ವಹಣೆಗೆ ಗಮನ ಹರಿಸಬೇಕು.
ಉದ್ಯೋಗಕ್ಕಾಗಿ ಆಲೋಚನೆ ಹೊರತಾಗಿ, ಯಾಮಿನಿ ಇದೀಗ ಉದ್ಯಮದಲ್ಲಿ ತೃಪ್ತಿ ಮತ್ತು ಗೌರವವನ್ನು ಕಂಡುಕೊಂಡಿದ್ದಾರೆ. ಮಶ್ರೂಮ್ ಕೃಷಿಯಲ್ಲಿ ಉತ್ತಮವಾಗಿದ್ದು, ವ್ಯಾಪಾರ ಅವಕಾಶಕ್ಕೆ ಇದು ಉತ್ತಮ ಮಾರ್ಗ. ಅಲ್ಲದೇ ಕನಿಷ್ಠ ಹೂಡಿಕೆಯೊಂದಿಗೆ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಯುವ ಜನತೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಭಂಡಾರಾ ಮಾರುಕಟ್ಟೆಗೆ ಲಗ್ಗೆಯಿಟ್ಟ ಕಾಡು ಅಣಬೆಗಳು: ಕೆಜಿ ಮಶ್ರೂಮ್ 1000 ರೂ.ಗೆ ಮಾರಾಟ