ETV Bharat / bharat

ಕಿರುಧಾನ್ಯ ಬೆಳೆಯಲ್ಲಿ ಆವಿಷ್ಕಾರ: ವಿಲೇಜ್ ಇನ್ನೋವೇಶನ್ ಪ್ರಶಸ್ತಿಗೆ ಭಾಜನರಾದ ಯುವ ವಿಜ್ಞಾನಿ

ತೆಲಂಗಾಣದಲ್ಲಿ ಯುವ ವಿಜ್ಞಾನಿ ಭಾರ್ಗವಿ ಅವರಿಗೆ ಗಣರಾಜ್ಯೋತ್ಸವದಂದು ವಿಲೇಜ್ ಇನ್ನೋವೇಶನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

telangana-scientist-bhargavi-receives-innovation-award-for-revolutionising-agriculture
ಕಿರುಧಾನ್ಯ ಬೆಳೆಯಲ್ಲಿ ಅವಿಷ್ಕಾರಕ: ವಿಲೇಜ್ ಇನ್ನೋವೇಶನ್ ಪ್ರಶಸ್ತಿಗೆ ಭಾಜನರಾದ ಯುವ ವಿಜ್ಞಾನಿ
author img

By ETV Bharat Karnataka Team

Published : Jan 30, 2024, 10:29 PM IST

ಸಂಗಾರೆಡ್ಡಿ(ತೆಲಂಗಾಣ): ಮೇದಕ್ ಜಿಲ್ಲೆಯ ತುನಿಕಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯನಿರ್ವಸುತ್ತಿರುವ ಯುವ ವಿಜ್ಞಾನಿ ಭಾರ್ಗವಿ ಅವರಿಗೆ ಗಣರಾಜ್ಯೋತ್ಸವದಂದು ವಿಲೇಜ್ ಇನ್ನೋವೇಶನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತೆಲಂಗಾಣ ರಾಜ್ಯ ಇನ್ನೋವೇಶನ್ ಸೆಲ್ (ಟಿಎಸ್ಐಸಿ) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ವಿಜ್ಞಾನಿ ಭಾರ್ಗವಿ ಅವರು, ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವತ್ತ ಗಮನ ಹರಿಸಿ, ವಿಶೇಷವಾಗಿ ಕಿರುಧಾನ್ಯಗಳನ್ನು ಬೆಳೆಯುವಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದಾರೆ. ಕಿರುಧಾನ್ಯಗಳನ್ನು ಬೆಳೆಯುವವರನ್ನು ಗುರುತಿಸಲು ಮತ್ತು ಬೆಂಬಲಿಸಲು ಸರ್ಕಾರ ಪ್ರಾರಂಭಿಸಿದ ಟಿಎಸ್ಐಸಿ ಕಾರ್ಯಕ್ರಮದಲ್ಲಿ 2023 ಅನ್ನು ಕಿರುಧಾನ್ಯಗಳ ವರ್ಷವೆಂದು ಘೋಷಿಸಿತ್ತು.

ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಭಾರ್ಗವಿ, ದ್ವಿದಳ ಧಾನ್ಯಗಳ ಕೃಷಿಯಲ್ಲಿ 2023ನೇ ಸಾಲಿನ "ಅತ್ಯುತ್ತಮ ಆವಿಷ್ಕಾರ" ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರ್ಗವಿ ಅವರನ್ನು ಇತರರಿಗಿಂತ ಭಿನ್ನವಾಗಿಸುವ ಅಂಶವೆಂದರೆ ಅವರ ಸಮಗ್ರ ಕೃಷಿ ವಿಧಾನ, ಇದರಲ್ಲಿ ಅವರು ಬೆಳೆಗಳ ಕೃಷಿಗೆ ಮಾತ್ರವಲ್ಲದೇ ಅಡುಗೆ ಎಣ್ಣೆಗಳನ್ನು ಬಳಸದೇ ಪೌಷ್ಟಿಕ ಆಹಾರವನ್ನು ತಯಾರಿಸಲು ಸಹ ಒತ್ತು ನೀಡುತ್ತಿದ್ದಾರೆ. ಸೋಲಾರ್ ಡ್ರೈಯರ್ ತಂತ್ರಜ್ಞಾನವನ್ನು ಬಳಸಿಕೊಂಡು, ತಿನಿಸುಗಳು, ಬೇಳೆಕಾಳುಗಳು ಮತ್ತು ಸೊಪ್ಪುಗಳಂತಹ ವೈವಿಧ್ಯಮಯ ಉತ್ಪನ್ನಗಳ ಗುಣಮಟ್ಟ ಮತ್ತು ರುಚಿಯನ್ನು ಅವರು ಖಚಿತಪಡಿಸುತ್ತಾರೆ.

ಭಾರ್ಗವಿ ಅವರು ಬೆಳೆಸಿರುವ ಕಿರುಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಇದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಭಾರ್ಗವಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಯಾರಿಸಿದ ಪೌಷ್ಟಿಕಾಂಶ ಭರಿತ ಆಹಾರವನ್ನು ಬೆಳವಣಿಗೆ ಹಂತದಲ್ಲಿರುವ ಮಕ್ಕಳ ಸಲುವಾಗಿ ಮೂರು ತಿಂಗಳ ಕಾಲ ಉಚಿತವಾಗಿ ವಿತರಿಸಿದ್ದಾರೆ. ಗಮನಾರ್ಹ ವಿಷಯ ಎಂದರೆ, ಭಾರ್ಗವಿ ಅವರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಸ್ಥಿರ ಮತ್ತು ರಾಸಾಯನಿಕ ಮುಕ್ತ ಕೃಷಿಗೆ ಬದ್ಧರಾಗಿದ್ದಾರೆ. ಅವರು ತಮ್ಮ ಅನುಭವವನ್ನು ಸ್ಥಳೀಯ ರೈತರೊಂದಿಗೆ ಸಕ್ರಿಯವಾಗಿ ಹಂಚಿಕೊಳ್ಳುತ್ತಾರೆ. ರಾಜಪುರಿ, ಕುಸುಮಾ ಎಂಬ ಕಡಲೆಕಾಯಿ ತಳಿಗಳನ್ನು ರೈತರಿಗೆ ಒದಗಿಸಿದ್ದಾರೆ. ಇಷ್ಟೇ ಅಲ್ಲದೆ ಅವರು, ಎಜಿ ಬಯೋಟೆಕ್ ಜೊತೆಗೂಡಿ ಕೆಂಪು ಅಲೋವೆರಾ ತಳಿಯಿಂದ ನೈಸರ್ಗಿಕ ಸಾಬೂನುಗಳನ್ನು ತಯಾರಿಸುತ್ತಿದ್ದಾರೆ. ಇದು ರಾಸಾಯನಿಕ ಮುಕ್ತವಾಗಿದ್ದು, ಜನಪ್ರಿಯತೆ ಗಳಿಸುತ್ತಿದೆ.

ತನ್ನ ಕೃಷಿ ಅನ್ವೇಷಣೆಗಳನ್ನು ಮೀರಿ, ಭಾರ್ಗವಿ ಕೃಷಿಯಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ ಮತ್ತು ಟಿಎಸ್ಐಸಿಯಂತಹ ಕಾರ್ಯಕ್ರಮಗಳ ಮೂಲಕ, ಕೃಷಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುವ ನಿಟ್ಟಿನಲ್ಲಿ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ. 75ನೇ ಗಣರಾಜ್ಯೋತ್ಸವದಂದು, ಭಾರ್ಗವಿ ಅವರು ಪ್ರತಿಷ್ಠಿತ ವಿಲೇಜ್ ಇನ್ನೋವೇಶನ್ ಪ್ರಶಸ್ತಿಯನ್ನು ಮಾತ್ರವಲ್ಲದೇ ಹಲವಾರು ಪುರಸ್ಕಾರಗಳನ್ನು ಪಡೆದರು. ಇದು ಅವರ ದಣಿವರಿಯದ ಪ್ರಯತ್ನಗಳು ಮತ್ತು ನಾವೀನ್ಯತೆ, ಆರೋಗ್ಯ ಮತ್ತು ಕೃಷಿಯಲ್ಲಿ ಮಹಿಳೆಯರನ್ನು ಮುನ್ನಡೆಸುವ ಬದ್ಧತೆಯನ್ನು ಪ್ರತಿ ಬಿಂಬಿಸುತ್ತದೆ.

ಇದನ್ನೂ ಓದಿ:ಎಲಾನ್​ ಮಸ್ಕ್​ ಪ್ರಯೋಗಾಲಯದಲ್ಲಿ ಮತ್ತೊಂದು ವಿಕ್ರಮ: ಮಾನವನ ಮೆದುಳಿನಲ್ಲಿ 'ಟೆಲಿಪತಿ' ಚಿಪ್​ ಅಳವಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.