ETV Bharat / bharat

ಹೈದರಾಬಾದ್​ನಲ್ಲಿ ಸರ್ಕಾರಿ ಗೌರವದೊಂದಿಗೆ ರಾಮೋಜಿ ಅಂತ್ಯಕ್ರಿಯೆಗೆ ಸಿದ್ಧತೆ; ಆಂಧ್ರದಲ್ಲಿ 2 ದಿನ ಶೋಕಾಚರಣೆ - RAMOJI RAO - RAMOJI RAO

ತೆಲಂಗಾಣ ಸರ್ಕಾರವು ರಾಮೋಜಿ ರಾವ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ನಿರ್ಧರಿಸಿದೆ.

ಸರ್ಕಾರಿ ಗೌರವದೊಂದಿಗೆ ರಾಮೋಜಿ ಅಂತ್ಯಕ್ರಿಯೆ
ಸರ್ಕಾರಿ ಗೌರವದೊಂದಿಗೆ ರಾಮೋಜಿ ಅಂತ್ಯಕ್ರಿಯೆ (ETV Bharat)
author img

By ETV Bharat Karnataka Team

Published : Jun 8, 2024, 9:39 PM IST

Updated : Jun 8, 2024, 9:52 PM IST

ಹೈದರಾಬಾದ್: ಈನಾಡು ಗ್ರೂಪ್ಸ್ ಅಧ್ಯಕ್ಷ, ಖ್ಯಾತ ಉದ್ಯಮಿ ಮತ್ತು ಪದ್ಮವಿಭೂಷಣ ಪುರಸ್ಕೃತ ಚೆರುಕುರಿ ರಾಮೋಜಿ ರಾವ್ ಅವರು ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ತೆಲಂಗಾಣ ಸರ್ಕಾರವು ರಾಮೋಜಿ ರಾವ್ ಅವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ನಿರ್ಧರಿಸಿದೆ.

ಈ ಸಂಬಂಧ ಸಿಡಬ್ಲ್ಯೂಸಿ ಸಭೆಗಾಗಿ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಲ್ಲಿಂದಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ಹೊರಡಿಸಿದ್ದಾರೆ. ರಂಗಾ ರೆಡ್ಡಿ ಕಲೆಕ್ಟರ್ ಮತ್ತು ಸೈಬರಾಬಾದ್ ಕಮಿಷನರ್ ಅವರಿಗೆ ಅಂತ್ಯ ಸಂಸ್ಕಾರದ ಮೇಲ್ವಿಚಾರಣೆ ನಡೆಸುವಂತೆ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಮತ್ತೊಂದೆಡೆ, ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ಎರಡು ದಿನ (ಜೂನ್ 9 ಮತ್ತು 10) ರಂದು ಶೋಕಾಚರಣೆ ಘೋಷಿಸಿದೆ. ಜೊತೆಗೆ ಶೋಕಾಚರಣೆಯ ಸಂಕೇತವಾಗಿ ರಾಜ್ಯಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಬೇಕು ಎಂದು ಸೂಚಿಸಿದೆ. ರಾಮೋಜಿ ರಾವ್ ಅವರ ಅಂತಿಮ ಸಂಸ್ಕಾರಕ್ಕಾಗಿ ಸರ್ಕಾರದ ಪರವಾಗಿ ಮೂವರು ಹಿರಿಯ ಅಧಿಕಾರಿಗಳು, ಯಾವುದೇ ಔಪಚಾರಿಕ ಸಮಾರಂಭಗಳನ್ನು ನಡೆಸಬಾರದು ಎಂದು ಹೇಳಿದ್ದಾರೆ. ಆರ್.ಪಿ. ಸಿಸೋಡಿಯಾ, ಸಾಯಿಪ್ರಸಾದ್ ಮತ್ತು ರಜತ್ ಭಾರ್ಗವ ಅವರು ಆಂಧ್ರಪ್ರದೇಶ ಸರ್ಕಾರದ ಪರವಾಗಿ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.

ರಾಮೋಜಿ ರಾವ್ ಅವರ ಅಂತ್ಯ ಸಂಸ್ಕಾರವನ್ನು ಭಾನುವಾರ ಬೆಳಗ್ಗೆ 9 ರಿಂದ 11ರ ನಡುವೆ ರಾಮೋಜಿ ಫಿಲ್ಮ್​ಸಿಟಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಅಂತಿಮ ದರ್ಶನ LIVE: ಮಾಧ್ಯಮ ದಿಗ್ಗಜ, ಪದ್ಮವಿಭೂಷಣ ರಾಮೋಜಿ ರಾವ್ ನಿಧನಕ್ಕೆ ಗಣ್ಯರ ಸಂತಾಪ - ramoji rao passed away

Last Updated : Jun 8, 2024, 9:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.