ETV Bharat / bharat

IIT ಸೀಟು ಸಿಕ್ಕರೂ ಫೀ ಕಟ್ಟಲಾಗದೆ ಆಡು ಮೇಯಿಸುತ್ತಿದ್ದ ಬಾಲಕಿ! ಕೊನೆಗೂ ಸಿಕ್ತು ಸಹಾಯಹಸ್ತ - Telangana CM Helps Tribal Girl - TELANGANA CM HELPS TRIBAL GIRL

ಐಐಟಿ ಸೀಟು ಸಿಕ್ಕರೂ ಫೀ ಕಟ್ಟಲಾಗದೆ ಆಡು ಮೇಯಿಸುತ್ತಿದ್ದ ಬುಡಕಟ್ಟು ಬಾಲಕಿಗೆ ತೆಲಂಗಾಣ ಸಿಎಂ ನೆರವಿನ ಹಸ್ತ ಚಾಚಿದ್ದಾರೆ.

ವಿದ್ಯಾರ್ಥಿನಿ ಬಡವತ್ ಮಧುಲತಾ
ವಿದ್ಯಾರ್ಥಿನಿ ಬಡವತ್ ಮಧುಲತಾ (IANS)
author img

By ETV Bharat Karnataka Team

Published : Jul 24, 2024, 2:00 PM IST

ಹೈದರಾಬಾದ್: ಪಾಟ್ನಾದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ಸೀಟು ಸಿಕ್ಕರೂ ಆರ್ಥಿಕ ಸಮಸ್ಯೆಯಿಂದಾಗಿ ಅನಿವಾರ್ಯವಾಗಿ ಆಡು ಮೇಯಿಸುವುದನ್ನು ಮುಂದುವರೆಸಿದ್ದ ಬುಡಕಟ್ಟು ಬಾಲಕಿಗೆ ಆರ್ಥಿಕ ನೆರವು ನೀಡಲು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮುಂದಾಗಿದ್ದಾರೆ. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಬಡವತ್ ಮಧುಲತಾ ಈ ವರ್ಷದ ಜೆಇಇಯಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ) ವಿಭಾಗದಲ್ಲಿ 824ನೇ ರ್ಯಾಂಕ್ ಗಳಿಸಿದ್ದರು ಮತ್ತು ಪಾಟ್ನಾದ ಐಐಟಿಯಲ್ಲಿ ಸೀಟು ಪಡೆದಿದ್ದರು.

ಆದರೆ, ಹಣಕಾಸಿನ ಮುಗ್ಗಟ್ಟಿನಿಂದಾಗಿ ಎಂಜಿನಿಯರಿಂಗ್ ಭೌತಶಾಸ್ತ್ರದ ಬಿ.ಟೆಕ್ ಸೀಟು ಪಡೆಯಲು ಶುಲ್ಕ ಮತ್ತು ಇತರ ವೆಚ್ಚಗಳಿಗಾಗಿ 2.5 ಲಕ್ಷ ರೂ.ಗಳನ್ನು ಹೊಂದಿಸಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಕೃಷಿ ಕಾರ್ಮಿಕನ ಪುತರಿಯಾಗಿರುವ ಮಧುಲತಾ ಕಳೆದ ತಿಂಗಳು ತನ್ನ ಐಐಟಿಗೆ ತನ್ನ ಪ್ರವೇಶವನ್ನು ದೃಢೀಕರಿಸಲು ತುಂಬಾ ಕಷ್ಟಪಟ್ಟು 17,500 ರೂ.ಗಳನ್ನು ಹೊಂದಿಸಿ ಪಾವತಿಸಿದ್ದರು. ಆದರೆ ಬೋಧನಾ ಶುಲ್ಕ ಮತ್ತು ಇತರ ವೆಚ್ಚಗಳಿಗಾಗಿ ಇನ್ನೂ 2.51 ಲಕ್ಷ ರೂ. ಪಾವತಿಸಲು ಸಾಧ್ಯವಾಗಲಿಲ್ಲ.

ಒಂದು ಕಡೆ ಫೀ ಕಟ್ಟಲು ಹಣವಿಲ್ಲದೆ, ಮತ್ತೊಂದು ಕಡೆ ತಂದೆಯ ಅನಾರೋಗ್ಯದ ಕಾರಣದಿಂದ ಕುಟುಂಬಕ್ಕೆ ನೆರವಾಗಲು ಆಕೆ ಅನಿವಾರ್ಯವಾಗಿ ತನ್ನ ಹಳ್ಳಿಯಲ್ಲಿ ಆಡು ಮೇಯಿಸುವುದನ್ನು ಮುಂದುವರೆಸಿದ್ದಳು.

ಬುಡಕಟ್ಟು ಕಲ್ಯಾಣ ಜೂನಿಯರ್ ಕಾಲೇಜಿನಿಂದ ಬಾಲಕಿ 12ನೇ ತರಗತಿ ಉತ್ತೀರ್ಣಳಾಗಿದ್ದಳು. ಜುಲೈ 27ರೊಳಗೆ ಬಾಲಕಿಯು ಐಐಟಿಗೆ ಶುಲ್ಕ ಪಾವತಿ ಮಾಡಬೇಕಿದೆ. ಆದರೆ ಬಾಲಕಿಯ ಕುಟುಂಬದ ಸಂಕಷ್ಟವನ್ನು ತಿಳಿದ ಕಾಲೇಜಿನ ಪ್ರಾಧ್ಯಾಪಕರು ಆಕೆಗೆ ಸಹಾಯ ಮಾಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರು. ಬುಡಕಟ್ಟು ಬಾಲಕಿಯ ಸಂಕಷ್ಟಕ್ಕೆ ಮಿಡಿದಿರುವ ರಾಜ್ಯ ಸರ್ಕಾರವು ಅವಳ ಶಿಕ್ಷಣದ ಮುಂದುವರಿಕೆಗಾಗಿ ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದೆ.

ಆರ್ಥಿಕ ಸಂಕಷ್ಟದ ನಡುವೆಯೂ ಪ್ರತಿಷ್ಠಿತ ಸಂಸ್ಥೆಯಲ್ಲಿ ಸೀಟು ಪಡೆದ ಮಧುಲತಾ ಅವರನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಭಿನಂದಿಸಿದ್ದಾರೆ. ಈ ಬಗ್ಗೆ 'ಎಕ್ಸ್'​ನಲ್ಲಿ ಪೋಸ್ಟ್​ ಮಾಡಿರುವ ಅವರು, ಆಕೆಯ ಶಿಕ್ಷಣವನ್ನು ಮುಂದುವರಿಸಲು ಅಗತ್ಯವಾದ ಮೊತ್ತವನ್ನು ಬುಡಕಟ್ಟು ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ. ಬಾಲಕಿಯು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ತೆಲಂಗಾಣಕ್ಕೆ ಕೀರ್ತಿ ತರಲಿ ಎಂದು ಮುಖ್ಯಮಂತ್ರಿ ಹಾರೈಸಿದ್ದಾರೆ.

ಬುಡಕಟ್ಟು ಕಲ್ಯಾಣ ಆಯುಕ್ತರು ಹೊರಡಿಸಿದ ಆದೇಶದ ಪ್ರಕಾರ, ವಿದ್ಯಾರ್ಥಿನಿಯು 2,51,831 ರೂ.ಗಳ ಆರ್ಥಿಕ ಸಹಾಯವನ್ನು ಕೋರಿದ್ದಾರೆ. ರಾಜ್ಯ ಸರ್ಕಾರವು 1 ಲಕ್ಷ ರೂ.ಗಳ ಬೋಧನಾ ಶುಲ್ಕವನ್ನು ಮನ್ನಾ ಮಾಡಿದೆ ಮತ್ತು ಶೈಕ್ಷಣಿಕ ಶುಲ್ಕ, ಹಾಸ್ಟೆಲ್ ಶುಲ್ಕ, ಜಿಮ್ಖಾನಾ, ಸಾರಿಗೆ, ಮೆಸ್ ಶುಲ್ಕ, ಲ್ಯಾಪ್ ಟಾಪ್ ಮತ್ತು ಇತರ ಶುಲ್ಕಗಳಿಗಾಗಿ 1,51,831 ರೂ.ಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ 4.1 ಕೋಟಿ ಉದ್ಯೋಗ ಸೃಷ್ಟಿಗೆ ಕೇಂದ್ರ ಬಜೆಟ್‌ ಒತ್ತು - Youth Employment And Skilling

ETV Bharat Logo

Copyright © 2024 Ushodaya Enterprises Pvt. Ltd., All Rights Reserved.