ETV Bharat / bharat

ಹೆಚ್ಚುವರಿ ಯುದ್ಧ ವಿಮಾನಗಳ ಉತ್ಪಾದನೆಯಲ್ಲಿ ಪಿಪಿಪಿ ಸಹಭಾಗಿತ್ವದತ್ತ ಚಿತ್ತ; ಏರ್​ ಮಾರ್ಷಲ್​ - Indian Air Force Tarang Shakti

ಉತ್ಪಾದನೆಯ ಹಾದಿಯನ್ನು ವೈವಿಧ್ಯಮಯಗೊಳಿಸುವ ನಿಟ್ಟಿನಲ್ಲಿ ಚಿತ್ತಹರಿಸಲಾಗುತ್ತಿದೆ. ಇದಕ್ಕಾಗಿ ಖಾಸಗಿ- ಸಾರ್ವಜನಿಕ ಸಹಭಾಗಿತ್ವ ಅಥವಾ ಖಾಸಗಿ ಸಹಭಾಗಿತ್ವದಿಂದ ಜಂಟಿ ಉದ್ಯಮ ನಡೆಸುವ ಮೂಲಕ ಬಹು ಉತ್ಪಾದನೆ ಹಾದಿಯತ್ತ ಯೋಚಿಸಲಾಗುತ್ತಿದೆ ಎಂದು ಏರ್​ ಮಾರ್ಷಲ್​ ಹೇಳಿದ್ದಾರೆ.

tejas-delays-by-hindustan-aeronautics-limited-indian-air-force-tarang-shakti
ತರಂಗ್​ ಶಕ್ತಿ ಕಾರ್ಯಕ್ರಮ (ಈಟಿವಿ ಭಾರತ್​)
author img

By ETV Bharat Karnataka Team

Published : Sep 13, 2024, 5:30 PM IST

ಜೋದ್​​​​ಪುರ​, ರಾಜಸ್ಥಾನ: ಈ ಸಮರಾಭ್ಯಾಸವೂ ಭಾರತದ ಭವಿಷ್ಯದ ಸಹಯೋಗಗಳಿಗೆ ಬಲವಾದ ಅಡಿಪಾಯ ಹಾಕಲು ಸಿದ್ಧವಾಗಿದೆ. ಈ ಪ್ರದರ್ಶನ ಪರಸ್ಪರ ನಂಬಿಕೆಯನ್ನು ನಿರ್ಮಿಸುವ ಮತ್ತು ವಿದೇಶಗಳೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ವಾಯು ಸೇನಾ ಮುಖ್ಯಸ್ಥ ವಿಆರ್​ ಚೌದರಿ ಹೇಳಿದ್ದಾರೆ.

ತರಂಗ್​ ಶಕ್ತಿ ವೈಮಾನಿಕ ಪ್ರದರ್ಶನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಸ್ತಾನ್​ ಏರೋನಾಟಿಕಲ್​ ಲಿಮಿಟೆಡ್​ (ಎಚ್​ಎಎಲ್​) ಲಘು ಯುದ್ಧ ವಿಮಾನ (ಎಲ್​ಸಿಎ) ವಿತರಣೆಯಲ್ಲಿ ವಿಳಂಬ ಮಾಡುತ್ತಿದ್ದು, ಇದಕ್ಕೆ ತ್ವರಿತಗತಿಯಲ್ಲಿ ಪರಿಹಾರ ನೀಡಲಾಗುವುದು ಎಂದು ವಿಆರ್​​ ಚೌದರಿ ತಿಳಿಸಿದ್ದಾರೆ. ಭಾರತೀಯ ವಾಯು ಸೇನೆ ಯುದ್ಧ ವಿಮಾನಗಳ ಕೊರತೆಯನ್ನು ಅನುಭವಿಸುತ್ತಿದೆ. ಜೊತೆಗೆ ತೇಜಸ್​ ಯುದ್ಧ ವಿಮಾನದ ವಿತರಣೆಗೆ ಕಾದು ಕುಳಿತಿದೆ ಎಂದೂ ಇದೇ ವೇಳೆ ಅವರು ತಿಳಿಸಿದರು.

ಉತ್ಪಾದನೆಯ ಹಾದಿಯನ್ನು ವೈವಿಧ್ಯಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ. ಇದಕ್ಕಾಗಿ ಖಾಸಗಿ- ಸಾರ್ವಜನಿಕ ಸಹಭಾಗಿತ್ವ ಅಥವಾ ಖಾಸಗಿ ಸಹಭಾಗಿತ್ವದಿಂದ ಜಂಟಿ ಉದ್ಯಮ ನಡೆಸುವ ಮೂಲಕ ಬಹು ಉತ್ಪಾದನೆ ಹಾದಿಯನ್ನ ಸೃಷ್ಟಿ ಮಾಡಲಾಗುತ್ತಿದೆ. ಎಚ್​ಎಎಲ್​ಗೆ ಆರಂಭದಲ್ಲಿ ನೀಡಿದ 40 ತೇಜಸ್​​ ಯುದ್ದ ವಿಮಾನಗಳ ಆರ್ಡ್​​ನಲ್ಲಿ ಇದೀಗ 36 ಫೈಟರ್​ ಜೆಟ್​ಗಳನ್ನ ವಿತರಣೆ ಮಾಡಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.

ಐಎಎಫ್​ ಆರಂಭದಲ್ಲಿ 48 ಸಾವಿರ ಕೋಟಿ ಮೌಲ್ಯದ 83 ತೇಜಸ್​ ಎಂಕೆ- 1ಎ ಜೆಟ್ಸ್​ ಆರ್ಡರ್​ಗಳನ್ನು ನೀಡಲಾಗಿತ್ತು. ​ ಇದರ ಜೊತೆಗೆ ಹೆಚ್ಚುವರಿಯಾಗಿ ಸರ್ಕಾರ 97 ಯುದ್ದ ವಿಮಾನಗಳಿಗೆ ಬೇಡಿಕೆ ಸಲ್ಲಿಸಿತ್ತು. ಉತ್ಪಾದನೆಯು ನಿಗದಿತ ಸಮಯಕ್ಕಿಂತಲೂ 10 ತಿಂಗಳ ಕಾಲ ವಿಳಂಬಗೊಂಡಿದೆ ಎಂದು ಏರ್​​​​ ಚೀಫ್​ ಮಾರ್ಷಲ್​​​ ವಿ ಆರ್ ಚೌದರಿ ಹೇಳಿದರು. ಇಂತಹ ಸನ್ನಿವೇಶದಲ್ಲಿ ಉತ್ಪಾದನಾ ಸಾಮರ್ಥ್ಯ ಮತ್ತು ಅಗತ್ಯಕ್ಕೆ ಸರಿ ಹೊಂದಿಸುವುದು ಸದ್ಯದ ಅಗತ್ಯವಾಗಿದೆ. ಇದಕ್ಕಾಗಿ ಖಾಸಿ - ಸಾರ್ವಜನಿಕ ಸಹಭಾಗಿತ್ವದ ಜೊತೆಗೆ ಜಂಟಿ ಉದ್ಯಮ ರೂಪಿಸಲಾಗುವುದು ಎಂದರು.

ಭಾರತಕ್ಕೆ ಎಫ್​- 16 ಫೈಟರ್​ ಜೆಟ್​ ನೀಡಲು ಯುನೈಡೆಟ್​ ಸ್ಟೇಟ್​ (ಅಮೆರಿಕ) ಸಿದ್ದವಾಗಿದೆ. ನಮ್ಮ ಬಳಿ ಇರುವ ಉತ್ತಮವಾದದನ್ನು ನಾವು ಭಾರತಕ್ಕೆ ನೀಡಲು ಸಿದ್ಧವಾಗಿದ್ದೇವೆ. ಭಾರತದ ವಾಯು ಸೇನೆ ಆಪೇಕ್ಷೆಯಂತೆ ವಾಯು ರಕ್ಷಣೆಗೆ ಬೇಕಾಗಿರುವಂತೆ ಎಫ್​ 16 ಇದು ಇದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಪಿಎಸಿಎಫ್​ನ ಮೇಜರ್​ ಜನರಲ್​ ಡೇವಿಡ್​ ಎ ಪಿಫಾರೆರಿಯೊ ತಿಳಿಸಿದ್ದಾರೆ.

ಇದನ್ನೂ ಓದಿ: ಆಗಸದಲ್ಲಿ ಸಾಮರ್ಥ್ಯ ಪ್ರದರ್ಶಿಸಿದ ಸೂರ್ಯ ಕಿರಣ್,​ ಸಾರಂಗ್: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.