ETV Bharat / bharat

ಇಲಿ ಪಾಷಾಣ ಸೇವಿಸಿ​ ಅತ್ಯಾಚಾರ ಪ್ರಕರಣದ ಆರೋಪಿ ಸಾವು - Rape Case Accused Dies

ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅತ್ಯಾಚಾರ ಪ್ರಕರಣದ ಆರೋಪಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Tamil Nadu NCC camp rape case accused Sivaraman Dies
ಆರೋಪಿ ಶಿವರಾಮನ್​ (ETV Bharat)
author img

By ETV Bharat Karnataka Team

Published : Aug 23, 2024, 3:11 PM IST

ಚೆನ್ನೈ: ತಮಿಳುನಾಡಿನ ಎನ್​ಸಿಸಿ ಕ್ಯಾಂಪ್​ ಅತ್ಯಾಚಾರ ಪ್ರಕರಣದ ಬಂಧಿತ ಆರೋಪಿ ಇಂದು ಸಾವನ್ನಪ್ಪಿದ್ದಾನೆ. ಶಿವರಾಮನ್​ (31) ಸಾವನ್ನಪ್ಪಿದಾತ.

ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಈತನನ್ನು ಸೇಲಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆಸಲಾದ ನಕಲಿ ಎನ್​ಸಿಸಿ ಕ್ಯಾಂಪ್​ನಲ್ಲಿ 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿ, ಆರೋಪಿಯ ಗುರುತು ಪತ್ತೆ ಹಚ್ಚಿದ್ದಳು. ಈ ಹಿನ್ನೆಲೆಯಲ್ಲಿ ನಾಮ್​ ತಮಿಳ್​​ ಪಕ್ಷದ ಮಾಜಿ ಕಾರ್ಯದರ್ಶಿ ಶಿವರಾಮನ್ ಹಾಗು ಮತ್ತೋರ್ವ ನಕಲಿ ಕೋಚ್‌ನನ್ನು​​ ಪೊಲೀಸರು ಅರೆಸ್ಟ್ ಮಾಡಿದ್ದರು.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು, ಪುದುಚೇರಿ ಮತ್ತು ಅಂಡಮಾನ್​ನ ಎನ್​ಸಿಸಿ ಉಪ ಪ್ರಧಾನ ನಿರ್ದೇಶಕ ಹಾಗು ಕಮಾಂಡರ್​ ಎಸ್.ರಾಘವ್​​, ಕೃಷ್ಣಗಿರಿಯಲ್ಲಿ ಯಾವುದೇ ಎನ್​ಸಿಸಿ ಶಿಬಿರವನ್ನು ನಾವು ಆಯೋಜಿಸಿಲ್ಲ. ಹಾಗಾಗಿ, ಈ ಕ್ಯಾಂಪ್​ ಅನಧಿಕೃತ ಮತ್ತು ವಂಚನೆ ಎಂದು ಸ್ಪಷ್ಪಪಡಿಸಿದ್ದರು.

ಆರೋಪಿ ಶಿವರಾಂ ಸೇರಿದಂತೆ 11 ಮಂದಿಯ ಮೇಲೆ ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಿಸಿದ್ದಾರೆ. ಪ್ರಕರಣದ ತನಿಖೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಅವರು ಐಜಿ ಭವಾನೀಶ್ವರಿ ನೇತೃತ್ವದ ಎಸ್​ಐಟಿ ರಚಿಸಿದ್ದಾರೆ. ತನಿಖೆ ನಡೆಸಿ 60 ದಿನದೊಳಗೆ ಚಾರ್ಜ್​ಶೀಟ್​ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.

ಕೃಷ್ಣಗಿರಿ ಎಸ್​ಪಿ ತಂಗದೊರೈ ಪ್ರತಿಕ್ರಿಯಿಸಿ, "ಆರೋಪಿ ಪರಾರಿಯಾಗಲು ಯತ್ನಿಸಿ ಕಾಲಿಗೆ ಗಾಯ ಮಾಡಿಕೊಂಡಿದ್ದ. ಹೀಗಾಗಿ, ಕೃಷ್ಣಗಿರಿ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಗಿತ್ತು. ಆಗಸ್ಟ್​ 16 ಮತ್ತು 18ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ: ವೈದ್ಯರಿಗೆ ಡಿಜಿಟಲ್​ ಅರೆಸ್ಟ್ ಮೂಲಕ 4.4 ಕೋಟಿ ರೂ ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.